ಮೈಸೂರು: ಆವೇಶದಲ್ಲಿ ಹಾಗೇ ಹೇಳಿದ್ದರಿಂದ ಪೊಲೀಸ್ ಕಮಿಷನರ್ ಹಾಗೂ ಡಿಸಿಪಿ ಅವರನ್ನು ಖುದ್ದಾಗಿ ಭೇಟಿ ನೀಡಿ ಕ್ಷಮೆಯಾಚಿಸಿದ್ದೇನೆ ಎಂದು ಸಂಸದ ಪ್ರತಾಪ್ಸಿಂಹ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳನ್ನು ಕುಟುಂಬದ ಸದಸ್ಯರಂತೆ ಕಾಣುತ್ತೇವೆ. ಅದಿದೇವತೆ, ಶಕ್ತಿ ದೇವತೆ ಎಂದು ಚಾಮುಂಡೇಶ್ವರಿಯನ್ನು ಕರೆಯುವ ನಾವು, ದೇವಿಯ ಬಗ್ಗೆ ಹಗುರವಾಗಿ ಮಾತನಾಡಲು ಹಮ್ಮಿಕೊಳ್ಳುತ್ತಿದ್ದ ಕಾರ್ಯಕ್ರಮವನ್ನು ತಡೆಯಲು ಸೂಕ್ತ ಕ್ರಮ ತೆಗೆದುಕೊಂಡಿದ್ದೇನೆ ಎಂದರು.
ಮಹಿಷ ದಸರಾ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಿಸುತ್ತಿದ್ದಾಗ ಆಕ್ರೋಶದಿಂದ ಪೊಲೀಸರಿಗೆ ನಿಂದಿಸಿದ್ದು ನಿಜ. ಮಹಿಷ ದಸರಾ ಆಚರಣೆಯಿಂದ ಜನರಿಗೆ ಬೇಸರ ಉಂಟಾಗುತ್ತದೆ ಎಂದರು.