ಮೈಸೂರು : ಕರ್ನಾಟಕ ಪ್ರವಾಸೋದ್ಯಮವನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಇಂದು ಬೆಂಗಳೂರಿನಿಂದ ಮೈಸೂರಿಗೆ ಮೋಟಾರ್ ಸೈಕಲ್ ರ‍್ಯಾಲಿ ಆಯೋಜಿಸಲಾಗಿತ್ತು. ರ‍್ಯಾಲಿಯಲ್ಲಿ ದುಬಾರಿ ಬೆಲೆಯುಳ್ಳ ವಿವಿಧ ಕಂಪನಿಯ ಬೈಕ್ಗಳು ಭಾಗವಹಿಸಿದ್ದವು.
ಕರ್ನಾಟಕ ಪ್ರವಾಸೋದ್ಯಮ ವೇದಿಕೆ (ಕೆಟಿಎಫ್) ಯು ಪ್ರವಾಸೋದ್ಯಮದ ಉತ್ತೇಜನದ ಉದ್ದೇಶದಿಂದ ಈ ಮೋಟಾರ್ ಸೈಕಲ್ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ರ‍್ಯಾಲಿಯು ಬೆಂಗಳೂರಿನ ಯುಬಿ ಸಿಟಿಯಿಂದ ಹೊರಟು ಮೈಸೂರು ನಗರ ತಲುಪಿತು.
ಕೆಟಿಎಫ್, ಪ್ರೆಸ್ಟೀಜ್ ಓಕ್ವುಡ್ ಮತ್ತು ರಾಯಲ್ ಆರ್ಕಿಡ್ ಹೋಟೆಲ್ಗಳ ಪ್ರಾಯೋಜಕತ್ವದಲ್ಲಿ ಈ ಮೋಟಾರ್ ಸೈಕಲ್ ರ‍್ಯಾಲಿಯನ್ನು ಆಯೋಜಿಸಲಾಗಿತ್ತು. ರ‍್ಯಾಲಿಯಲ್ಲಿ ದುಬಾರಿ ಬೆಲೆಯ ಮೋಟಾರ್ ಬೈಕ್ಗಳು ಗಮನ ಸೆಳೆದವು.
ಸಾಮಾಜಿಕ ಅಂತರ ಮತ್ತು ಸ್ವ-ಸುರಕ್ಷತೆಯ ಹೊಸ ನಿಯಮಗಳನ್ನು ಅನುಸರಿಸಿದರೆ ಪ್ರವಾಸಿ ತಾಣಗಳಿಗೆ ಪ್ರಯಾಣಿಸಲು ಸುರಕ್ಷಿತವಾಗಿದೆ ಎಂಬ ಅರಿವನ್ನು ಮೂಡಿಸಲು ಮತ್ತು ಪ್ರಚಾರ ಮಾಡಲು ಈ ಸಾಂಕೇತಿಕ ರ‍್ಯಾಲಿಯನ್ನು ಆಯೋಜಿಸಲಾಗಿತ್ತು. ರ‍್ಯಾಲಿಯಲ್ಲಿ ಇಂಡಿಯನ್ ಮೋಟಾರ್ ಸೈಕಲ್ ರೈಡರ್ಸ್ ಗ್ರೂಪ್ನವರು ಭಾಗವಹಿಸುವಹಿಸಿ ಯಶಸ್ವಿಗೊಳಿಸಿದರು.