ETV Bharat / state

ಆಸ್ಪತ್ರೆ ಮುಂಭಾಗವೇ ಗೂಡ್ಸ್​​ ಆಟೋದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ - ವಾಹನದಲ್ಲೇ ಮಗುವಿಗೆ ಜನ್ಮ

ತಾಲೂಕು ಆಸ್ಪತ್ರೆ ಒಳಗೆ ಕರೆದೊಯ್ಯುವ ಮೊದಲೇ ಮಹಿಳೆ ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ. ಹೆರಿಗೆ ನೋವು ಕಾಣಿಸಿಕೊಂಡಾಗ ಗೂಡ್ಸ್​ ಆಟೋದಲ್ಲಿ ಆಸ್ಪತ್ರೆಗೆಂದು ಕರೆತಂದಿದ್ದರು. ಆದರೆ ಆಸ್ಪತ್ರೆ ಮುಂಭಾಗವೇ ಸುರಕ್ಷಿತವಾಗಿ ಹೆರಿಗೆಯಾಗಿದೆ.

mother-gave-birth-to-baby-in-front-of-hospital-in-goods-auto
ಆಸ್ಪತ್ರೆ ಮುಂಭಾಗವೇ ಗೂಡ್ಸ್​​ ಆಟೋದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ
author img

By

Published : Apr 7, 2021, 8:59 PM IST

ಮೈಸೂರು: ಗೂಡ್ಸ್ ಆಟೋದಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆತರುವಾಗ ಅದೇ ವಾಹನದಲ್ಲಿ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಸರಗೂರು ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ನಡೆದಿದೆ.

ತಾಲೂಕಿನ ಚಾಮೇಗೌಡನ ಹುಂಡಿಯ ಕುಮಾರಿ(21) ಎಂಬಾಕೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಊರಿನ ಗೂಡ್ಸ್​ ಆಟೋಗೆ ಕರೆ ಮಾಡಿ ಆಸ್ಪತ್ರೆಗೆ ರವಾನಿಸಲು ಮುಂದಾಗಿದ್ದಾರೆ.

ಆದರೆ ಆಸ್ಪತ್ರೆ ಮುಂಭಾಗಕ್ಕೆ ವಾಹನ ತಲುಪಿದ್ದರೂ ಒಳ ಹೋಗಲಾಗದೆ ಆಸ್ಪತ್ರೆ ಮುಂಭಾಗದಲ್ಲೇ ಹೆರಿಗೆಯಾಗಿದೆ. ಹೆರಿಗೆಯಾದ ತಕ್ಷಣವೇ ಆಸ್ಪತ್ರೆ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದು, ತಾಯಿ-ಮಗುವನ್ನು ಆಸ್ಪತ್ರೆಯೊಳಗೆ ಚಿಕಿತ್ಸೆಗೆ ರವಾನಿಸಿದ್ದಾರೆ. ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.