ETV Bharat / state

ವೈದ್ಯನ ವೇಷ ಧರಿಸಿ ಕೆ ಆರ್ ಆಸ್ಪತ್ರೆಗೆ ಎಂಟ್ರಿಯಾದ ಖದೀಮ ಮಾಡಿದ್ದೇನು ಗೊತ್ತಾ?

ಮೈಸೂರಿನ ಕೆ ಆರ್​ ಆಸ್ಪತ್ರೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ವೈದ್ಯನ ವೇಷ ಧರಿಸಿಕೊಂಡು ಬಂದು ರೋಗಿಯ ಮೊಬೈಲ್​ ಕದ್ದು ಪರಾರಿಯಾಗಿದ್ದಾನೆ.

KR Hospital
KR Hospital
author img

By

Published : Jun 3, 2020, 12:34 PM IST

ಮೈಸೂರು: ಅಪರಿಚಿತ ವ್ಯಕ್ತಿಯೊಬ್ಬ ವೈದ್ಯನ ವೇಷ ಧರಿಸಿ ರೋಗಿಯ ಸಂಬಂಧಿಯ ಮೊಬೈಲ್ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ನಗರದ ಕೆ.ಆರ್. ಆಸ್ಪತ್ರೆಯಲ್ಲಿ ನಡೆದಿದೆ.

ಕೆ.ಆರ್.ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಅಪರಿಚಿತ ವ್ಯಕ್ತಿಯು ವೈದ್ಯರ ಹಾಗೆ ವೇಷ ಧರಿಸಿಕೊಂಡು ಬಂದು ಆಸ್ಪತ್ರೆಯಲ್ಲಿ ಯರಗನಹಳ್ಳಿ ನಿವಾಸಿ ಗೀತಾ ಎಂಬುವರ ಮೊಬೈಲ್ ಕಳ್ಳತನ ಮಾಡಿದ್ದಾನೆ.

ಗೀತಾ ಅವರ ಸಂಬಂಧಿ ಅವಿನಾಶ್ ಎಂಬುವರ ಜೊತೆ ಫೋನ್​ನಲ್ಲಿ ಮಾತನಾಡುತ್ತಿದ್ದುದನ್ನು ಗಮನಿಸಿದ ಖದೀಮ ನಿಮ್ಮ ಸಂಬಂಧಿ ಅವಿನಾಶ್ ಬಳಿ ನಾನು ಮಾತನಾಡಬೇಕು ಎಂದು ಮೊಬೈಲ್ ಕೇಳಿದ್ದು, ಅವರೊಂದಿಗೆ ಮಾತನಾಡುತ್ತಿರುವ ಹಾಗೆ ನಟಿಸಿ ಮೊಬೈಲ್ ತೆಗೆದುಕೊಂಡು ಆಸ್ಪತ್ರೆಯಿಂದ ಹೊರಗೆ ಬಂದು ಮಾತನಾಡುತ್ತಾ ಮೊಬೈಲ್ ತೆಗೆದುಕೊಂಡು ಪರಾರಿಯಾಗಿದ್ದಾನೆ.

ಬಳಿಕ ಗೀತಾ ಹೊರಗೆ ಬಂದು ಹುಡುಕಿದಾಗ ಆತ ಇರಲಿಲ್ಲ. ಆಗ ಅವರಿಗೆ ಮೊಬೈಲ್ ಕಳ್ಳತನ ಆಗಿರುವ ಬಗ್ಗೆ ಗೊತ್ತಾಗಿದೆ. ಈ ಸಂಬಂಧ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.