ETV Bharat / state

ಸಾ ರಾ ಮಹೇಶ್​ ನನ್ನ ಸಮಾನನಲ್ಲ.. ಏಕವಚನದಲ್ಲೇ ಕುಟುಕಿದ ಹೆಚ್​.ವಿಶ್ವನಾಥ್​

author img

By

Published : Jul 26, 2020, 3:37 PM IST

Updated : Jul 26, 2020, 10:47 PM IST

ಮುಖ್ಯಮಂತ್ರಿ ಬಿ ಎಸ್​ ಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಒಂದು ವರ್ಷ ಪೂರೈಸಿದೆ. ಉತ್ತಮ ತಂಡ ಕಟ್ಟಿಕೊಂಡು ಕೆಲಸ ಮಾಡುತ್ತಿದೆ. ಆದರೆ, ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಕೋವಿಡ್ ನುಂಗಿ ಹಾಕಿದೆ..

MLC H Vishwanth Reaction on Sara Mahesh Statement
ವಿಧಾನಪರಿಷತ್​ ಸದಸ್ಯ ಹೆಚ್​​. ವಿಶ್ವನಾಥ್

ಮೈಸೂರು : ಶಾಸಕ ಸಾ ರಾ ಮಹೇಶ್ ನನ್ನ ಸಮಾನನಲ್ಲ. ಅವನ ಬಗ್ಗೆ ನಾನು ಮಾತನಾಡೋದೆ ಇಲ್ಲ. ಹಿ ಈಸ್​ ನಾಟ್ ಮ್ಯಾಚ್ ಮೀ ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಕಿಡಿಕಾರಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ನನ್ನ ಆಯ್ಕೆಯ ಬಗ್ಗೆ ಕಾನೂನಿನ ತೊಡಕಿದ್ರೆ ಅದಕ್ಕೆ ರಾಜ್ಯಪಾಲರು ಉತ್ತರ ಕೊಡ್ತಾರೆ. ಇವರು ಪತ್ರ ಬರೆಯುವುದರಿಂದ ನನಗೇನು ಸಮಸ್ಯೆಯಿಲ್ಲ‌. ಅದನ್ನು ತೀರ್ಮಾನ ಮಾಡೋದು ರಾಜ್ಯಪಾಲರು. ಸಾ ರಾ ಮಹೇಶ್ ನನಗೆ ಸಮಾನನಲ್ಲ, ನನ್ನ ಪ್ರತಿಸ್ಪರ್ಧಿಯೂ ಅಲ್ಲ. ನಾನಂತೂ ಅವನ ಬಗ್ಗೆ ಮಾತನಾಡೋದಿಲ್ಲ ಎಂದು ಏಕವಚನದಲ್ಲೇ ಕುಟುಕಿದರು.

ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್

ವಿರೋಧ ಪಕ್ಷಗಳಿಗೆ ಬರಿ ವಿರೋಧ ಮಾಡೋದು ಮಾತ್ರ ಗೊತ್ತು. ಅವರು ಅಧಿಕಾರದಲ್ಲಿದ್ದಾಗ ರಾತ್ರಿ ವೇಳೆಯೂ ಸೂರ್ಯ ಚಂದ್ರ ಕಾಣ್ತಾರೆ. ಆದರೆ, ಅವರು ಅಧಿಕಾರದಲ್ಲಿ ಇಲ್ಲ ಅಂದ್ರೆ ಅದ್ಯಾಕೋ ರಾತ್ರಿ ವೇಳೆ ಸೂರ್ಯ ಕಾಣ್ತಿಲ್ಲ. ಅವರಿಗೆ ಸರ್ಕಾರದ ಸಾಧನೆ ಅಥವಾ ಅಭಿವೃದ್ಧಿಯ ಬಗ್ಗೆ ಮಾತನಾಡೋದು ಗೊತ್ತೇ ಇಲ್ಲ.. ಒಂದು ವರ್ಷದಲ್ಲಿ ಒಂದಾದ್ರೂ ಒಳ್ಳೆಯ ಕೆಲಸ ಮಾಡಿಲ್ಲವೆ ಬಿಜೆಪಿ ಸರ್ಕಾರ.. ಆ ಒಂದೇ ಒಂದು ಕೆಲಸವನ್ನು ಒಳ್ಳೆಯದಾಗಿದೆ ಎಂದು ಹೇಳಲಿ. ಅದು ಬಿಟ್ಟು ಎಲ್ಲವನ್ನೂ ಟೀಕೆ ಮಾಡೋದು ಸರಿಯಲ್ಲ‌. ವಿರೋಧ ಪಕ್ಷದ ನಾಯಕರ ನಿಲುವುಗಳು ದ್ವಂದ್ವದಿಂದ ಕೂಡಿವೆ.

ಮುಖ್ಯಮಂತ್ರಿ ಬಿ ಎಸ್​ ಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಒಂದು ವರ್ಷ ಪೂರೈಸಿದೆ. ಉತ್ತಮ ತಂಡ ಕಟ್ಟಿಕೊಂಡು ಕೆಲಸ ಮಾಡುತ್ತಿದೆ. ಆದರೆ, ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಕೋವಿಡ್ ನುಂಗಿ ಹಾಕಿದೆ ಎಂದರು.

ಕಷ್ಟದ ಪರಿಸ್ಥಿತಿಯಲ್ಲೂ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಇಂತಹ ಸರ್ಕಾರ ಬರೋಕೆ ನಾವು ಕಾರಣರಾಗಿದ್ದೇವೆ ಅನ್ನೋದು ನನಗೆ ಹೆಮ್ಮೆ ಇದೆ. ನಮ್ಮ ನಡೆಯಿಂದ ಸಂವಿಧಾನದ ಅಡಿಯಲ್ಲಿ ಇಂತಹದೊಂದು ಬದಲಾವಣೆ ಆಗಿದೆ ಅನ್ನೋದು ಸಮಾಧಾನ. ಒಂದು ವರ್ಷದ ಈ ಸಾಧನೆ ನನಗೆ ಸಾರ್ಥಕತೆ ಅನುಭವ ತಂದಿದೆ ಎಂದು ಹೇಳಿದರು.

Last Updated : Jul 26, 2020, 10:47 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.