ಮೈಸೂರು: ಜಿಲ್ಲೆಯ ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೋಮೇಶ್ವರಪುರ, ಹೆಬ್ಯಾ, ಮೊಸಂಬಾಯನಹಳ್ಳಿ ಗ್ರಾಮಗಳು ಸೀಲ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೊಸಂಬಾಯನಹಳ್ಳಿಯ 65 ವರ್ಷದ ವೃದ್ದನಿಗೆ ಹಾಗೂ ಸೋಮೇಶ್ವರಪುರದ 72 ವರ್ಷದ ವೃದ್ಧನಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಅಲ್ಲದೇ ಹೆಬ್ಯಾ ಗ್ರಾಮದಲ್ಲಿ ಓರ್ವ ನೌಕರನಿಗೆ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಸೀಲ್ ಡೌನ್ ಮಾಡಲಾಗಿದೆ.
ಆತಂಕಕ್ಕೊಳಗಾದ ಗ್ರಾಮಸ್ಥರು ಶಾಸಕ ಡಾ. ಯತೀಂದ್ರ ಅವರಿಗೆ ತಮ್ಮ ಸಂಕಷ್ಟಗಳನ್ನು ಹೇಳಿಕೊಂಡರು. ಸೀಲ್ ಡೌನ್ ತೆರವುಗೊಳಿಸಿ ನೆಮ್ಮದಿ ನೀಡಿ ಎಂದು ಮನವಿ ಮಾಡಿದರು.
ಎಲ್ಲರ ಆರೋಗ್ಯ ತಪಾಸಣೆ ನಡೆಸಿ ಸೀಲ್ ಡೌನ್ ಮುಕ್ತ ಮಾಡಲಾಗುವುದು. ಅಲ್ಲಿಯವರೆಗೆ ತಾಳ್ಮೆಯಿಂದ ಇರಬೇಕು ಎಂದು ಗ್ರಾಮಸ್ಥರ ಮನವಿಗೆ ಸ್ಪಂದಿಸಿದರು. ತಾಲೂಕು ಮುಖ್ಯ ಕಾರ್ಯನಿರ್ವಾಣಾಧಿಕಾರಿ ಕೃಷ್ಣಕುಮಾರ್ ಅವರಿಂದ ಮಾಹಿತಿ ಪಡೆದುಕೊಂಡರು.