ಮೈಸೂರು: ನಿನ್ನೆ ಹುಬ್ಬಳ್ಳಿಯಲ್ಲಿ ಮಾತನಾಡಿರುವ ಆಡಿಯೋದಲ್ಲಿ ಸ್ಪಷ್ಟತೆ ಇದೆ. ಇದರಿಂದ ಏನಾದರು ತಾನು ತಪ್ಪು ಮಾಡಿದೆ ಎಂದು ಯಡಿಯೂರಪ್ಪ ಅವರಿಗೆ ಪಶ್ಚಾತಾಪವಾದರೆ ಅಧಿಕಾರ ತ್ಯಜಿಸಿ ರಾಜ್ಯದ ಜನತೆಯ ಮುಂದೆ ತಪ್ಪೊಪ್ಪಿಕೊಳ್ಳಬೇಕೆಂದು ಶಾಸಕ ತನ್ವೀರ್ ಸೇಠ್ ಆಗ್ರಹ ಮಾಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ತನ್ವೀರ್ ಸೇಠ್, ಅನರ್ಹ ಶಾಸಕರ ಬಗ್ಗೆ ನಾನು ಮಾತನಾಡುವುದಿಲ್ಲ. ಸಂವಿಧಾನದ ವ್ಯವಸ್ಥೆಯಲ್ಲಿ ನಾವು ಚುನಾಯಿತ ಪ್ರತಿನಿಧಿಗಳು. ವಾಮಮಾರ್ಗದಿಂದ ಕೆಲಸ ಮಾಡಿದಾಗ ಮತದಾರರಿಗೆ ಅಪಚಾರ ಮಾಡಿದ ಹಾಗೆ ಆಗುತ್ತದೆ. ಅನರ್ಹರು ಬಿಜೆಪಿಯ ಜೊತೆಗಿನ ಸಹವಾಸ ಸಾಕು, ನಾವು ಮಾಡಿದ್ದು ತಪ್ಪು ಎಂದು ಗ್ರಹಿಸಿ ವಾಪಸ್ ಬರುತ್ತೇವೆ ಎಂದಿದ್ದಾರೆ. ಚಿಂತನೆ ಮಾಡಿ ಸ್ವಾಗತ ಮಾಡಬೇಕೊ ಏನೋ ಯೋಚನೆ ಮಾಡುತ್ತೇವೆ ಎಂದರು.
ಕೇಂದ್ರ ನಾಯಕರ ಮಾರ್ಗದರ್ಶನದಲ್ಲೇ ಎಲ್ಲವೂ ನಡೆದಿದೆ ಎಂದು ಯಡಿಯೂರಪ್ಪನವರೇ ಹೇಳಿದ್ದಾರೆ. ಇದು ತಪ್ಪು ಎಂದು ಅನಿಸಿದರೆ ಅಧಿಕಾರ ತ್ಯಜಿಸಲಿ ಎಂದು ಆಗ್ರಹಿಸಿದರು.