ಮೈಸೂರು: ಯಾರದೋ ಮನೆ ಸುಡುತ್ತಿದೆ ಎಂದಾಗ ನಮ್ಮ ಬೇಳೆ ಬೇಯಿಸಿಕೊಳ್ಳುವುದಿಲ್ಲ, ಯಾರ ಮನೆ ಉರಿಯುತ್ತದೆಯೋ ಅವರೇ ಪರಿಹಾರ ಹುಡುಕಿಕೊಳ್ಳುತ್ತಾರೆ ಎಂದು ರಾಜ್ಯ ಬಿಜೆಪಿಯ ಬೆಳವಣಿಗೆ ಬಗ್ಗೆ ಶಾಸಕ ತನ್ವಿರ್ ಸೇಠ್ ವ್ಯಂಗ್ಯವಾಡಿದರು.
ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಬೆಳವಣಿಗೆಗೆ ಕಾಂಗ್ರೆಸ್ ತನ್ನ ರೊಟ್ಟಿ ಸುಟ್ಟುಕೊಳ್ಳಬೇಕು ಎಂದಲ್ಲ. ಅವರವರ ಕಿತ್ತಾಟವನ್ನು ಅವರೇ ಸರಿಪಡಿಸಿಕೊಳ್ಳುತ್ತಾರೆ. ಬಿಜೆಪಿ ಕಿತ್ತಾಟದಿಂದ ಕಾಂಗ್ರೆಸ್ನ ರಾಜ್ಯಾಧ್ಯಕ್ಷ ಬದಲಾವಣೆಯಾಗುವುದಿಲ್ಲ, ಕಾಂಗ್ರೆಸ್ ಎಲ್ಲಾ ಸಮುದಾಯವನ್ನು ಜಾತ್ಯತೀತವಾಗಿ ಕರೆದುಕೊಂಡು ಹೋಗುತ್ತದೆ. ಕಾಂಗ್ರೆಸ್ಗೆ ಎಲ್ಲ ಸಮುದಾಯಗಳ ಬೆಂಬಲವಿದೆ, ಮುಂದೆಯೂ ಕೂಡ ಇದೇ ಬೆಂಬಲ ಇರುತ್ತದೆ. ಜಾತ್ಯತೀತ ನಿಲುವು ನಮ್ಮ ಪಕ್ಷದ ಸಿದ್ಧಾಂತ ಎಂದು ಹೇಳಿದರು.
ಶಶಿಕಲಾ ಜೊಲ್ಲೆ ರಾಜೀನಾಮೆಗೆ ಒತ್ತಾಯ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರ ಭ್ರಷ್ಟಾಚಾರ ಆಘಾತ ತಂದಿದೆ. ಅವರಿಗೆ ಮಾನ, ಮರ್ಯಾದೆ ಇದ್ದರೆ ತಕ್ಷಣ ರಾಜೀನಾಮೆ ಕೊಟ್ಟು ಘನತೆ ಕಾಪಾಡಿಕೊಳ್ಳಲಿ ಎಂದರು.
ಇದನ್ನೂ ಓದಿ : ಮುರುಗೇಶ್ ನಿರಾಣಿಗೆ ಸಿಎಂ ಪಟ್ಟ ನೀಡಿದರೆ ಡಿಸಿಎಂ ಸ್ಥಾನಕ್ಕೆ ರಾಜೀನಾಮೆ: ಕಾರಜೋಳ ಎಚ್ಚರಿಕೆ?