ETV Bharat / state

ರೋಹಿಣಿ ಸಿಂಧೂರಿ ಆದ್ಮೇಲೆ ಮನೀಶ್ ಮೌದ್ಗಿಲ್ ವಿರುದ್ಧ ಶಾಸಕ ಸಾ ರಾ‌ ಮಹೇಶ್​ ಕಿಡಿ.. ಏನ್ ಕಾರಣ ಅಂತೀರಾ..

ಒಳ್ಳೆ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಇವರು ರೋಹಿಣಿ ಸಿಂಧೂರಿ ಮತ್ತು ಮನೀಶ್​ ಮೌದ್ಗಿಲ್ ಇಬ್ಬರೂ ಸ್ವಲ್ವ ಹತ್ತಿರ ಎಂದು ಲೇವಡಿ ಮಾಡಿದರು. ನಾನು ಯಾವುದೇ ಭೂ ಒತ್ತುವರಿ ಮಾಡಿಲ್ಲ. ಈ ಹಿಂದೆ ತನಿಖೆ ಮಾಡಿ ಒತ್ತುವರಿ ಆಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ..

author img

By

Published : Sep 4, 2021, 10:12 PM IST

Sara Mahesh
ಸಾರಾ‌ ಮಹೇಶ್​

ಮೈಸೂರು : ಒಂದಲ್ಲ ಒಂದು ಕಾರಣಕ್ಕೆ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಇಷ್ಟು ದಿನ ಕಿಡಿಕಾರಿದ್ದ ಶಾಸಕ ಸಾ.ರಾ.ಮಹೇಶ್, ಇದೀಗ ಮತ್ತೊಬ್ಬ ಅಧಿಕಾರಿ ಮನೀಶ್​ ಮೌದ್ಗಿಲ್ ವಿರುದ್ಧವೂ ಸಿಡಿದೆದ್ದಿದ್ದಾರೆ.

ಶಾಸಕ ಸಾ.ರಾ.ಮಹೇಶ್ ಆಕ್ರೋಶ

ರೋಹಿಣಿ ಮತ್ತು ಸಾ ರಾ ಮಹೇಶ್​ ನಡುವಿನ ಜಟಾಪಟಿ ಮುಂದುವರೆದಿದೆ. ಬಟ್ಟೆ ಬ್ಯಾಗ್ ಖರೀದಿಯಲ್ಲಿ ಕೋಟ್ಯಂತರ ರೂಪಾಯಿ ಅಕ್ರಮವೆಸಗಿದ್ದಾರೆ ಎಂದು ಐಎಎಸ್ ಅಧಿಕಾರಿ ಸಿಂಧೂರಿ ವಿರುದ್ಧ ನಿನ್ನೆಯಷ್ಟೇ ಗಂಭೀರ ಆರೋಪ ಮಾಡಿದ್ದ ಮಹೇಶ್, ಇಂದು ಮತ್ತೊಬ್ಬ ಹಿರಿಯ ಅಧಿಕಾರಿ ಮನೀಶ್​ ಮೌದ್ಗಿಲ್ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಕೆ.ಆರ್.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಭೂ ಅಕ್ರಮ ಪ್ರಕರಣದ ಮರು ತನಿಖಾ ಆದೇಶಕ್ಕೆ ಕೆಂಡಾಮಂಡಲರಾದರು. ನೀನು ಸರ್ವೇ ಕಮಿಷನರ್ ಆದ ತಕ್ಷಣ ರಾಜ್ಯಕ್ಕೆ ಸುಪ್ರೀಮಾ? ಸರ್ಕಾರಿ ಜಾಗ ಸಂರಕ್ಷಣೆಗೆ ಎಂದು ಆದೇಶದಲ್ಲಿ ಹೇಳಿದ್ದೀರಿ.

ಆದರೆ, ತನಿಖೆ ಆದೇಶಕ್ಕೂ ಮುನ್ನ ಜಿಲ್ಲಾಧಿಕಾರಿಯಿಂದ ಅಥವಾ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಂದ ಜಾಗದ ಸುತ್ತಮುತ್ತ ಸರ್ಕಾರಿ ಜಾಗಗಳು ಇದೆಯೇ ಎಂಬುದನ್ನು ಪತ್ರ ಬರೆದು ಖಚಿತಪಡಿಸಿಕೊಳ್ಳಿ ಎಂದರು.

ಒಳ್ಳೆ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಇವರು ರೋಹಿಣಿ ಸಿಂಧೂರಿ ಮತ್ತು ಮನೀಶ್​ ಮೌದ್ಗಿಲ್ ಇಬ್ಬರೂ ಸ್ವಲ್ವ ಹತ್ತಿರ ಎಂದು ಲೇವಡಿ ಮಾಡಿದರು. ನಾನು ಯಾವುದೇ ಭೂ ಒತ್ತುವರಿ ಮಾಡಿಲ್ಲ. ಈ ಹಿಂದೆ ತನಿಖೆ ಮಾಡಿ ಒತ್ತುವರಿ ಆಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ನಾನೀಗ ಭೂಮಿನ ಟ್ರ್ಯಾಲಿ ತೆಗೆದುಕೊಂಡು ಎಳೆದುಬಿಟ್ಟಿದ್ದೀನಾ ಎಂದು ತನಿಖಾ ಆದೇಶದ ವಿರುದ್ಧ ಕಿಡಿಕಾರಿದರು.

ಓದಿ: ತಾಲಿಬಾನ್ ಉಗ್ರರ ಸಮಸ್ಯೆಯಿಂದ ತೈಲ ಬೆಲೆ ಏರಿಕೆಯಾಗಿದೆ : ಬಿಜೆಪಿ ಶಾಸಕ‌ ಅರವಿಂದ ಬೆಲ್ಲದ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.