ETV Bharat / state

ಜಿಟಿಡಿ ನೇತೃತ್ವದಲ್ಲಿಯೇ ತಾಲೂಕು ಪಂ-ಜಿ.ಪಂ ಚುನಾವಣೆ: ಶಾಸಕ ಸಾ.ರಾ ಮಹೇಶ್ - ಪಂಚಾಯತಿ ಚುನಾವಣೆ ಬಗ್ಗೆ ಸಾ ರಾ ಮಹೇಶ್ ಹೇಳಿಕೆ

ಕಾಂಗ್ರೆಸ್ ನಾಯಕರ ಕಿತ್ತಾಟ ಹಾಗೂ ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಆಡಳಿತದಿಂದ ಜನತೆ ನೊಂದಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಕಿತ್ತಾಟವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ ಎಂದು ಶಾಸಕ ಸಾ.ರಾ ಮಹೇಶ್ ಹೇಳಿದ್ದಾರೆ.

s-r-mahesh
ಶಾಸಕ ಸಾ ರಾ ಮಹೇಶ್
author img

By

Published : Jul 22, 2021, 8:58 PM IST

ಮೈಸೂರು: ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಚುನಾವಣೆ ನಮ್ಮ ಪಕ್ಷದ ಶಾಸಕ ಜಿ.ಟಿ.ದೇವೇಗೌಡ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ಶಾಸಕ ಸಾ.ರಾ ಮಹೇಶ್ ಹೇಳಿದ್ದಾರೆ.

ತಾ.ಪಂ, ಜಿ.ಪಂ ಚುನಾವಣೆಗೆ ಸ್ವತಂತ್ರ್ಯವಾಗಿ ಅಭ್ಯರ್ಥಿಗಳನ್ನು ಹಾಕಲಾಗುವುದು ಎಂಬ ಜಿ.ಟಿ.ದೇವೇಗೌಡ ಹೇಳಿಕೆಗೆ ಅವರು ಪ್ರತಿಕ್ರಿಯೆ ನೀಡಿದರು. ಜೆಡಿಎಸ್ ಶಾಸಕರು ಜೆಡಿಎಸ್​ನಲ್ಲಿಯೇ ಇದ್ದಾರೆ. ನಮ್ಮ ಪಕ್ಷದಿಂದಲೇ ಚುನಾವಣಾ ನೇತೃತ್ವ ವಹಿಸಲಿದ್ದಾರೆ. ಡಿಸೆಂಬರ್​ನಲ್ಲಿ ನಡೆಯಲಿರುವ ಚುನಾವಣೆಗೆ ಅವರೇ ಮುಂದಾಳತ್ವ ವಹಿಸಲಿದ್ದಾರೆ ಎಂದಿದ್ದಾರೆ.

ಶಾಸಕ ಸಾ ರಾ ಮಹೇಶ್

ಕೆಲವು ದಿನಗಳ ಹಿಂದೆ ಚಾಮುಂಡಿ ಅತಿಥಿಗೃಹದಲ್ಲಿ ಜಿಟಿಡಿ ಅವರನ್ನು ಭೇಟಿ ಮಾಡಿ, ಚುನಾವಣೆಯ ಬಗ್ಗೆ ಚರ್ಚೆ ಮಾಡಿದೆ. ಜೆಡಿಎಸ್ ಪಕ್ಷದ ಚಿಹ್ನೆಯಲ್ಲಿ ಗೆದ್ದಿರುವುದರಿಂದ ಇನ್ನೂ ಒಂದು ಮುಕ್ಕಾಲು ವರ್ಷ ಜೆಡಿಎಸ್​ನಲ್ಲಿಯೇ ಇರುತ್ತಾರೆ ಎಂದು ತಿಳಿಸಿದರು.

ಹೆಚ್.ಡಿ.ಕುಮಾರಸ್ವಾಮಿ ಅವರು 14 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಕೆಲಸ ಮಾಡಿದ ರೀತಿಯನ್ನಿಟ್ಟುಕೊಂಡು ಚುನಾವಣೆಗೆ ಹೋಗುತ್ತೇವಿ. ಕಾಂಗ್ರೆಸ್ ನಾಯಕರ ಕಿತ್ತಾಟ ಹಾಗೂ ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಆಡಳಿತದಿಂದ ಜನತೆ ನೊಂದಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಕಿತ್ತಾಟವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೀವಿ. ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ಎಲ್ಲಾ ತಾಲೂಕುಗಳಲ್ಲಿ ತಾಲೂಕು ಅಧ್ಯಕ್ಷರನ್ನ ನೇಮಕ ಮಾಡಲಾಗಿದೆ. ಮೂರು ತಿಂಗಳಲ್ಲಿ ಪಕ್ಷಕ್ಕೆ ಸದಸ್ಯರನ್ನು ಹೆಚ್ಚಿಸುವಂತೆ ಟಾರ್ಗೆಟ್ ನೀಡಲಾಗಿದೆ ಎಂದರು.

ಇದನ್ನೂ ಓದಿ: ಐಟಿಐ ಕಾಲೇಜು ಅತಿಥಿ ಉಪನ್ಯಾಸಕರಿಗೆ ಸಿಗದ ಸಂಬಳ; ಬದುಕಿನ ಬಂಡಿ ಸಾಗಿಸಲು ಪರದಾಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.