ಮೈಸೂರು: ಮುಂದೆ ಸಚಿವ ಸ್ಥಾನ ಸಿಗುತ್ತದೆ ಎಂಬ ಯಾವ ನಿರೀಕ್ಷೆ ಇಟ್ಟುಕೊಂಡಿಲ್ಲ ಎಂದು ಶಾಸಕ ಎಸ್. ಎ ರಾಮದಾಸ್ ಮತ್ತೆ ಅಸಮಾಧಾನ ಹೊರಹಾಕಿದ್ದಾರೆ.
ಅಗ್ರಹಾರ ವೃತ್ತದಲ್ಲಿ ಕ್ಷೇತ್ರದ ಸಮಸ್ಯೆ ಆಲಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ನನಗೆ ಸಚಿವ ಸ್ಥಾನ ಬೇಕಿತ್ತು. ನನಗೂ ಆಸೆ ಇತ್ತು. ಅದು ಮಿಸ್ ಆಯ್ತು. ಸಚಿವ ಸ್ಥಾನ ತಪ್ಪಿಸಿದವರ ಹೆಸರು ಮಾತ್ರ ಗೊತ್ತಿರಬೇಕು. ಅವರ ಮೇಲೆ ಲವ್ ಯಾವಾಗಲು ಇರುತ್ತದೆ. ಅವರಿಗೆ ಈಗಾಗಲೇ ನಾನು ಅಭಿನಂದನೆ ಸಲ್ಲಿಸಿದ್ದೇನೆ ಎಂದು ವ್ಯಂಗ್ಯವಾಡಿದರು.
ಮಂತ್ರಿಯಾಗಿದ್ದರೆ ರಾಜ್ಯಾದ್ಯಂತ ಓಡಾಡಬೇಕಿತ್ತು. ಈಗ ನನ್ನ ಕ್ಷೇತ್ರವೇ ಎಲ್ಲಾ ಆಗಿದೆ. ಅದಕ್ಕೆ ಈಗ ನಾನು ನನ್ನ ಕ್ಷೇತ್ರವನ್ನ ದೇಶಕ್ಕೆ ಮಾದರಿ ಕ್ಷೇತ್ರವನ್ನಾಗಿಸುವತ್ತ ಮುಂದಾಗಿದ್ದೇನೆ. ಮುಂದೆ ಸಿಗುತ್ತೆ ಅನ್ನುವ ನಿರೀಕ್ಷೆಯೂ ಇಲ್ಲ ಎಂದರು.
ಮುಂದಿನ ಬಾರಿ ಶಾಸಕ ರಾಮದಾಸ್‌ಗೆ ಟಿಕೆಟ್ ಮಿಸ್ ಆಗಲಿದೆ ಎಂಬ ಚರ್ಚೆ ವಿಚಾರವಾಗಿ ಮಾತನಾಡಿದರು. ಕೆ.ಆರ್. ಕ್ಷೇತ್ರದಲ್ಲಿ ಹೊಸಬರಿಗೆ ಟಿಕೆಟ್ ಸಿಗಲಿದೆ. ಕಳೆದ 33 ವರ್ಷಗಳಿಂದ ಶತ್ರುಗಳಿದ್ದರು. ಆದರೆ, ಪಕ್ಷಕ್ಕೆ ಬಂದವರು ಇವತ್ತು ಎಲ್ಲಾ ಹೊರಗೆ ಹೋಗಿದ್ದಾರೆ. ನಾನು ಮಾತ್ರ ಇನ್ನು ಪಕ್ಷದಲ್ಲೇ ಇದ್ದೀನಿ. ಮುಂದೆ ನನಗೆ ಟಿಕೆಟ್ ಸಿಗುವುದಿಲ್ಲ ಎಂದವರಿಗೆ ಹೈಕಮಾಂಡ್ ಉತ್ತರ ಕೊಡಲಿದೆ ಎಂದು ಹೇಳಿದರು.
ಓದಿ: ಹೃದಯ ಸಂಬಂಧಿ ಕಾಯಿಲೆ ನಡುವೆ ವಿದ್ಯಾರ್ಥಿನಿ ಸಾಧನೆ: ಶಾಸಕರಿಂದ ಹೂಗುಚ್ಛ ನೀಡಿ ಶುಭಾಶಯ