ETV Bharat / state

ಸಚಿವರನ್ನು ಆಯ್ಕೆ ಮಾಡುವ ಪರಮಾಧಿಕಾರ ಸಿಎಂಗಿದೆ, ಶಾಸಕ ಎಸ್‌ ಎ ರಾಮದಾಸ್

ಅವರು ಮನೆಯವರಿಗಾದ್ರೂ ಊಟ ಹಾಕಬಹುದು ಅಥವಾ ಅತಿಥಿಗಾದ್ರೂ ಊಟ ಹಾಕಬಹುದು. ಆ ನಿರ್ಧಾರ ಮಾಡುವವರು ಅವರು.. ಆ ವಿಚಾರದಲ್ಲಿ ತಾಯಿ ಸ್ಥಾನದಲ್ಲಿರುವವರು ನಿರ್ಧಾರ ಮಾಡುತ್ತಾರೆ..

mla-ramadas-spoke-in-mysore
ಶಾಸಕ ರಾಮದಾಸ್
author img

By

Published : Sep 18, 2020, 2:52 PM IST

ಮೈಸೂರು : ಸಚಿವರನ್ನು ಮಾಡುವ ಪರಮಾಧಿಕಾರ ಸಿಎಂಗಿದೆ. ಅವರು ಮನೆಯವರಿಗಾದರೂ ಊಟ ಹಾಕಬಹುದು, ಅತಿಥಿಗಳಿಗಾದರೂ ಊಟ ಹಾಕಬಹುದು ಎಂದು ಶಾಸಕ ಎಸ್‌ ಎ ರಾಮದಾಸ್ ತಿಳಿಸಿದ್ದಾರೆ.

ಶಾಸಕ ಎಸ್ ಎ ರಾಮದಾಸ್

ನಗರದಲ್ಲಿಂದು ಸಚಿವ ಸ್ಥಾನದ ಆಕಾಂಕ್ಷಿಯ ಕುರಿತಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಬಿಜೆಪಿಯಲ್ಲಿ ತಳಮಟ್ಟದಿಂದ ಕೆಲಸ ಮಾಡಿದ್ದೇನೆ. ಈಗ ಮಂತ್ರಿ ಮಾಡುವ ವಿಚಾರ ಸಿಎಂಗೆ ಬಿಟ್ಟ ವಿಚಾರ. ಅವರು ಮನೆಯವರಿಗಾದ್ರೂ ಊಟ ಹಾಕಬಹುದು ಅಥವಾ ಅತಿಥಿಗಾದ್ರೂ ಊಟ ಹಾಕಬಹುದು. ಆ ನಿರ್ಧಾರ ಮಾಡುವವರು ಅವರು.. ಆ ವಿಚಾರದಲ್ಲಿ ತಾಯಿ ಸ್ಥಾನದಲ್ಲಿರುವವರು ನಿರ್ಧಾರ ಮಾಡುತ್ತಾರೆ. ಇದರ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ ಎಂದರು.

ನಂತರ ಮಾತನಾಡಿದ ಅವರು, ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಈಗ ನಾನು ಯಾವುದೇ ಡಿಮ್ಯಾಂಡ್ ಮಾಡುವುದಿಲ್ಲ. ಸಿಎಂ ಬದಲಾವಣೆ ವಿಚಾರ ಯಾವುದೇ ಮಾಹಿತಿ ಇಲ್ಲ. ಸಿಎಂ ಆಗಿ ಯಡಿಯೂರಪ್ಪನವರು 3 ವರ್ಷ ಇದ್ದೇ ಇರುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.