ಮೈಸೂರು: ಬಿಜೆಪಿಗೆ ನನ್ನ ಬೆಂಬಲ ಇದ್ದೇ ಇದೆ, ಕ್ಷೇತ್ರದ ಅಭಿವೃದ್ಧಿಗಾಗಿ ಯಡಿಯೂರಪ್ಪ ಅವರನ್ನು ನಾನು ಬೆಂಬಲಿಸುತ್ತೇನೆ ಎಂದು ಕೊಳ್ಳೇಗಾಲ ಶಾಸಕ ಎನ್ .ಮಹೇಶ್ ತಿಳಿಸಿದರು.
ಸುತ್ತೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವರಾಗಬೇಕೆಂದು ಯಾರಿಗೆ ತಾನೇ ಅಪೇಕ್ಷೆ ಇಲ್ಲ ಹೇಳಿ. ಸಚಿವ ಸ್ಥಾನ ಕೊಟ್ಟರೆ ನನ್ನ ಕ್ಷೇತ್ರ, ಜಿಲ್ಲೆಗೆ ಹೆಚ್ಚಿನ ಕೆಲಸ ಮಾಡಲು ಅನುಕೂಲ ಆಗುತ್ತೆ. ಆದರೆ, ನನಗೆ ಸಚಿವ ಸ್ಥಾನ ಕೊಡಬೇಕೆಂದು ಚರ್ಚೆ ನಡೆಸಿಲ್ಲ ಎಂದರು.
ಜನವರಿ 13 ಅಥವಾ 14 ರಂದು ಸಚಿವ ಸಂಪುಟ ವಿಸ್ತರಣೆಯಾಗಲಿದೆ, ಆ ದಿನ ಕಾದು ನೋಡಬೇಕಿದೆ. ಮುಖ್ಯಮಂತ್ರಿಗಳ ಮೇಲೆ ನಾನು ಭರವಸೆ ಇಟ್ಟಿದ್ದೇನೆ ಎಂದು ಹೇಳಿದರು.