ಮೈಸೂರು: ಜನಪ್ರತಿನಿಧಿಗಳಿಗೆ ಮೊದಲು ಗೌರವ ಕೊಡಿ ಅಂತ ಡಿಸಿಗೆ ಹೇಳಿ, ಇಲ್ಲವಾದರೆ ಸಂಘರ್ಷಕ್ಕಿಳಿಯುವುದಾದರೆ ಬನ್ನಿ ಎಂದು ಸಂಸದ ಪ್ರತಾಪ ಸಿಂಹಗೆ ಶಾಸಕ ಮಂಜುನಾಥ್ ಸವಾಲ್ ಹಾಕಿದ್ದಾರೆ.
ಹುಣಸೂರು ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳ ಜನಸ್ಪಂದನ ಕಾರ್ಯಕ್ರಮಕ್ಕೆ ದೊಣ್ಣೆನಾಯಕನ ಅಪ್ಪಣೆ ಬೇಕೇ ಎಂದು ಪ್ರತಾಪಸಿಂಹ ಹೇಳುತ್ತಾರೆ. ಜಿಲ್ಲಾಧಿಕಾರಿಗಳು ಸ್ವಂತವಾಹನದಲ್ಲಿ ತಾಲೂಕಿಗೆ ಬಂದು ಸಭೆ ಮಾಡುತ್ತಿದ್ದಾರಾ?, ಸರ್ಕಾರ ನೀಡಿರುವ ಕಾರಿನಿಂದ ಬರುತ್ತಿದ್ದಾರಾ. ಸರ್ಕಾರಿ ಕೆಲಸ ಎಂದಾಗ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಹೇಳಬೇಕು. ಜನರು ಕೂಡ ನಮ್ಮ ಬಳಿ ಸಮಸ್ಯೆಗಳನ್ನು ಹೇಳಿಕೊಂಡು ಬರುತ್ತಾರೆ ಎಂದು ಕುಟುಕಿದರು.
ಇದನ್ನು ಓದಿ: ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮೈಸೂರು ವಿವಿಯಿಂದ ಸಿಹಿ ಸುದ್ದಿ!
ಸಂಸದರಾಗಿ ಹುಣಸೂರು ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು?, ತಂಬಾಕು ಬೆಳೆಗಾರರ ಸಮಸ್ಯೆ ಬಗೆಹರಿಸಿ, ಆಗ ನಾನೇ ಕರೆದು ಸನ್ಮಾನ ಮಾಡುತ್ತೀನಿ. ಇಲ್ಲ ಸಂಘರ್ಷಕ್ಕಿಳಿದರೆ ನಾನು ಸಂಘರ್ಷಕ್ಕಿಳಿಯುತ್ತೇನೆ ಎಂದು ಹೇಳಿದರು.