ಮೈಸೂರು : ನಮಗೆ ಮಹಾರಾಣಿ ಬೇಡ, ಇಬ್ಬರು ಮಹಾರಾಣಿ ಅವರುಗಳು ಮೈಸೂರಿನಲ್ಲಿದ್ದಾರೆ. ಕೆಲಸ ಮಾಡುವ ಜಿಲ್ಲಾಧಿಕಾರಿ ಬೇಕು ಎಂದು ಹುಣಸೂರು ಶಾಸಕ ಹೆಚ್ ಪಿ ಮಂಜುನಾಥ್ ಜಿಲ್ಲಾಧಿಕಾರಿ ವಿರುದ್ಧ ಗರಂ ಆಗಿ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಹುಣಸೂರು ಕಾಂಗ್ರೆಸ್ ಶಾಸಕ ಹೆಚ್ ಪಿ ಮಂಜುನಾಥ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಗರಂ ಆಗಿ ಮಾತನಾಡಿದ್ದಾರೆ. ಹುಣಸೂರಿನ ಹಲವಾರು ವಿಚಾರವನ್ನು ಜಿಲ್ಲಾಮಂತ್ರಿ ಗಮನಕ್ಕೆ ತಂದಿದ್ದು, ಡಿಸಿ ಗಮನಕ್ಕೂ ತಂದಿದ್ದೇವೆ. ಆದರೆ, ಅವಳಿಗೆ ಬಂದಾಗಿನಿಂದಲೂ 4 ಜನ ಎಂಎಲ್ಎಗಳು ಇದ್ದಾರೆ.
ಅದೇ ನಾವು ಯಾರು ಅಂತಾನೂ ಗೊತ್ತಿಲ್ಲ ಅವಳಿಗೆ, ಅವರದೆ ಆದ ಭ್ರಮಲೋಕದಲ್ಲಿ ಇದ್ದಾರೆ. ನಾವು ಎಷ್ಟೋ ಸಲ ಮಾತನಾಡಿದ್ರೆ, ಎಲ್ಲಿ ತಪ್ಪಾಗುತ್ತೆ ಅಂತಾ ಯೋಚನೆ ಮಾಡಿದ್ವಿ, ಜನರೆಲ್ಲ ನಮಗೆ ಬೈಯಬೇಕಾದ್ರೆ ನಾವೇನು ಮಾಡುವುದಕ್ಕೆ ಆಗಲ್ಲ ಎಂದರು.
ಪ್ರೋಟೋಕಾಲ್ ಪೂರಾ ಮಿಸ್ ಆಗಿದೆ. ಮೈಸೂರಿನಲ್ಲಿ ಜಿಲ್ಲಾಮಂತ್ರಿ ಹಾಗೂ ಪ್ರತಿನಿಧಿಗಳಿಗೆ ತ್ರೈಮಾಸಿಕ ಸಭೆ ಇದಾಗಿದ್ದು, ಜಿಲ್ಲಾಡಳಿತ ಕೆಳಗೆ ಕುಳಿತುಕೊಂಡಿದೆ, ಯಾರಿಗೆ ಪ್ರಶ್ನೆ ಕೇಳುವುದು. ನಾವು ಜನರ ಋಣದಲ್ಲಿ ಇದ್ದೇವೆ. ಅವರು ಯಾರ ಋಣದಲ್ಲಿ ಇದ್ದಾರೆ ಗೊತ್ತಿಲ್ಲ.
ಆಕಾಶದಿಂದ ನೇರ ಉದುರಿದ್ದಾರೋ ಗೊತ್ತಿಲ್ಲ. ನಾನು ಹೇಳಿದ್ದೀನಿ, ಅವರು ಅರ್ಥ ಮಾಡಿಕೊಳ್ಳದೆ, ದ್ವೇಷ ಸಾಧಿಸಿದರೆ ಸಾಧಿಸಲಿ. ನಮಗೆ ಮಹಾರಾಣಿ ಬೇಡ, ಮೈಸೂರಿನಲ್ಲಿ ಇಬ್ಬರು ಮಹಾರಾಣಿಯರು ಇದ್ದಾರೆ. ಪ್ರಮೋದಾ ದೇವಿ ಒಡೆಯರ್ ಮತ್ತು ತ್ರಿಶಿಕಾ ದೇವಿ, ಜನಹಿತ ಕಾಪಾಡುವ ಜಿಲ್ಲಾಧಿಕಾರಿ ಬೇಕು ಎಂದು ಇದೇ ಸಂದರ್ಭದಲ್ಲಿ ಶಾಸಕ ಹೆಚ್ ಪಿ ಮಂಜುನಾಥ್ ಹೇಳಿದರು.