ETV Bharat / state

ನನಗೆ ಎಲ್ಲಾ ಅರ್ಹತೆ ಇದೆ, ಸಚಿವ ಸ್ಥಾನ ಕೊಡಿ: ಶಾಸಕ ಹರ್ಷವರ್ಧನ್ - ನಾನು ಸಚಿವ ಸ್ಥಾನದ ಆಕಾಂಕ್ಷಿ ಶಾಸಕ ಹರ್ಷವರ್ಧನ್

ಹಳೇ ಮೈಸೂರು ಭಾಗದಲ್ಲಿ ದಲಿತ ಬಲಗೈ ವರ್ಗಕ್ಕೆ ಪ್ರಾತಿನಿಧ್ಯ ಕೊಡಿ ಎಂದು ಹೇಳುವ ಮೂಲಕ ತಾವೂ ಸಚಿವ ಸ್ಥಾನದ ಆಕಾಂಕ್ಷಿ ಎಂದು ಹರ್ಷವರ್ಧನ್ ಹೇಳಿದ್ದಾರೆ.

MLA Harshavardhan
ಶಾಸಕ ಹರ್ಷವರ್ಧನ್
author img

By

Published : Nov 24, 2020, 4:58 PM IST

ಮೈಸೂರು: ಕೇಂದ್ರದಲ್ಲಿ ಸಂಸದ ಶ್ರೀನಿವಾಸ್ ಪ್ರಸಾದ್ ಅವರಿಗೆ ಸ್ಥಾನಮಾನ ಕೊಡಿ. ಇಲ್ಲವಾದರೆ ನನಗಾದರೂ ಸಚಿವ ಸ್ಥಾನ ಕೊಡಿ ಎಂದು ನಂಜನಗೂಡು ಬಿಜೆಪಿ ಶಾಸಕ ಹರ್ಷವರ್ಧನ್ ಹೇಳಿದ್ದಾರೆ.

ಶಾಸಕ ಹರ್ಷವರ್ಧನ್

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೂಲ-ವಲಸಿಗ ಎಂದು ನೋಡಿಕೊಂಡು ಹೋದರೆ ಈ ಸರ್ಕಾರ ಅಧಿಕಾರಕ್ಕೆ ಬರಬೇಕಾದರೆ ಮೂಲದವರು ಕಾರಣ ಇರಲಿಲ್ಲ. ಬೇರೆ ಪಕ್ಷದಿಂದ ಬಂದು ಕೈಹಿಡಿದಿದ್ದು, ಇದರಲ್ಲಿ ಮೂಲ ವಲಸಿಗರು ಬರಲ್ಲ. ಈಗ ಸಂಪುಟ ಪುನರ್ ರಚನೆಯಾಗುತ್ತದೋ, ವಿಸ್ತರಣೆ ಆಗುತ್ತದೋ ಸಿಎಂಗೆ ಬಿಟ್ಟ ವಿಚಾರ ಎಂದರು.

ನೀವು ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಪ್ರಾತಿನಿಧ್ಯ ಕೊಡುತ್ತಿದ್ದರೆ ಹಳೇ ಮೈಸೂರು ಭಾಗಕ್ಕೆ ಏನು ಮಾಡುತ್ತಿದ್ದೀರಾ?. ಹೌದು, ನನಗೆ ಎಲ್ಲಾ ಅರ್ಹತೆ ಇದೆ. ನಾನು ಇಲ್ಲಿ ಲಾಬಿ ಮಾಡಲು ಹೋಗುತ್ತಿಲ್ಲ. ನೀವು ಯಾರಿಗೆ ಕೊಡುತ್ತೀರಾ, ಅವರು ಹಿಂದೆ ಕ್ಷೇತ್ರದ ಕೆಲಸ ಹೇಗೆ ಮಾಡಿದ್ದಾರೆ ಅದನ್ನು ನೋಡಬೇಕು. ಹಳೇ ಮೈಸೂರು ಭಾಗದಲ್ಲಿ ದಲಿತ ಬಲಗೈ ವರ್ಗಕ್ಕೆ ಪ್ರಾತಿನಿಧ್ಯ ಕೊಡಿ ಎಂದು ಮನವಿ ಮಾಡಿದ್ದಾರೆ.

ಇದನ್ನು ಓದಿ: ಸರ್ಕಾರಿ ಶಾಲಾ ದತ್ತು ಪರಿಕಲ್ಪನೆ ದೇಶದಲ್ಲೇ ಮೊದಲು, ಉಳಿದವರಿಗೂ ಪ್ರೇರಣೆಯಾಗಲಿ: ಬಿಎಸ್​​ವೈ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.