ಮೈಸೂರು: ಪ್ರವಾಹ ಪೀಡಿತರಿಗೆ ಸಹಾಯ ಮಾಡಲು ನಂಜನಗೂಡು ಕ್ಷೇತ್ರದ ಶಾಸಕ ಹರ್ಷವರ್ಧನ್ ಅವರು ದೇಣಿಗೆ ಸಂಗ್ರಹ ಮಾಡಿದರು.
ಹರ್ಷವರ್ಧನ್ ಅವರ ನೇತೃತ್ವದಲ್ಲಿ ಚಿಂತಾಮಣಿ ಗಣಪತಿ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಾದ ರಾಷ್ಟ್ರಪತಿ ಮತ್ತು ಮಹಾತ್ಮ ಗಾಂಧಿ ರಸ್ತೆ ಮುಖಾಂತರ ನಿಧಿ ಸಂಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಳೆ ಹಾನಿಯಿಂದ ಉಂಟಾಗಿರುವ ನೆರೆಯ ಸಂತ್ರಸ್ತರ ಸಮಸ್ಯೆಯ ಪರಿಹಾರಕ್ಕೆ ನಿಧಿ ಸಂಗ್ರಹಿಸಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೇರವಾಗಿ ತಲುಪಿಸಲಾಗುವುದು ಎಂದರು. ಕಳೆದ ಬಾರಿ ಕೊಡಗು ಸಂತ್ರಸ್ತರಿಗೆ ಸುಮಾರು 9 ಲಕ್ಷದ 80 ಸಾವಿರ ರೂಪಾಯಿ ನೀಡಿದೆವು. ಈ ಬಾರಿ ಅದಕ್ಕಿಂತ ಹೆಚ್ಚು ನಿಧಿ ಸಂಗ್ರಹಿಸಿಲಾಗುವುದು ಎಂದು ತಿಳಿಸಿದರು.