ಮೈಸೂರು: ಅತ್ತ ಗಂಡನೂ ಇಲ್ಲ, ಇತ್ತ ಮನೆಯೂ ಇಲ್ಲ: ವಿಶೇಷ ಚೇತನ ಹೆಣ್ಣು ಮಕ್ಕಳೊಂದಿಗೆ ಜಗಲಿಯಲ್ಲಿ ದಿನ ಕಳೆಯುತ್ತಿರುವ ಮಹಿಳೆ ಎಂಬ 'ಈಟಿವಿ ಭಾರತ' ಮಾನವೀಯ ವರದಿಗೆ ವರುಣಾ ಕ್ಷೇತ್ರದ ಶಾಸಕ ಸ್ಪಂದಿಸಿದ್ದು, ಈ ವಿಶೇಷ ಚೇತನರನ್ನು ಭೇಟಿಯಾಗಿ ಸಹಾಯದ ಭರವಸೆ ನೀಡಿದ್ದಾರೆ.
ಕಳೆದ ಫೆಬ್ರವರಿ 26 ರಂದು ವರುಣಾ ಕ್ಷೇತ್ರ ಅಲಂಬೂರು ಗ್ರಾಮದಲ್ಲಿ ತನ್ನ ವಿಶೇಷ ಚೇತನ ಹೆಣ್ಣು ಮಕ್ಕಳೊಂದಿಗೆ ಮನೆಯೂ ಇಲ್ಲದೆ, ಇತರ ಸೌಲಭ್ಯವೂ ಇಲ್ಲದೇ ಪರರ ಮನೆಯ ಜಗಲಿಯ ಮೇಲೆ ವಾಸವಿರುವ ಶಿವಮ್ಮ ಕುಟುಂಬದ ಬಗ್ಗೆ ಈಟಿವಿ ಭಾರತ ವರದಿ ಮಾಡಿತ್ತು.
ಓದಿ...ಅತ್ತ ಗಂಡನೂ ಇಲ್ಲ, ಇತ್ತ ಮನೆಯೂ ಇಲ್ಲ : ವಿಶೇಷ ಚೇತನ ಪುತ್ರಿಯರೊಂದಿಗೆ ಜಗಲಿಯಲ್ಲೇ ದಿನ ದೂಡುತ್ತಿರುವ ಮಹಿಳೆ
ನಂತರ ಆ ವರದಿಯನ್ನು ಸ್ಥಳೀಯ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಗಮನಕ್ಕೆ ತರಲಾಯಿತು. ತಕ್ಷಣ ನಿನ್ನೆ ಶಾಸಕರು ಆಲಂಬೂರು ಗ್ರಾಮಕ್ಕೆ ಹೋಗಿ ಶಿವಮ್ಮ ಕುಟುಂಬ ಭೇಟಿಯಾಗಿ ತಕ್ಷಣ ಗ್ರಾಮ ಪಂಚಾಯತ್ನಿಂದ ಮಂಜೂರಾಗುವ ಮೊದಲ ಮನೆ ಈ ಕುಟುಂಬಕ್ಕೆ ನೀಡಬೇಕು ಹಾಗೂ ಈ ಕುಟುಂಬಕ್ಕೆ ಅಗತ್ಯವಾದ ಗ್ಯಾಸ್ ಸಂಪರ್ಕ, ಮೂರು ಚಕ್ರದ ವಾಹನ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯ ನೀಡಬೇಕೆಂದು ಅಧಿಕಾರಿಗಳಿಗೆ ಶಾಸಕರು ಸ್ಥಳದಲ್ಲೇ ಸೂಚಿಸಿದರು.