ETV Bharat / state

ಪ್ರೀತಿಯ ಕೋತಿ ಮರಿಗೆ ದೇವಾಲಯ ಕಟ್ಟಿಸಿದ ಶಾಸಕ - Latest Temple News In Mysore

ತೋಟದಲ್ಲಿ ಸಾವನ್ನಪ್ಪಿದ್ದ ಪ್ರೀತಿಯ ಕೋತಿ ಮರಿಗಾಗಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ ಮಾರುತಿ ದೇವಾಲಯವನ್ನು ಶಾಸಕ ಸಾ.ರಾ ಮಹೇಶ್. ನಿರ್ಮಿಸಿ, ಲೋಕಾರ್ಪಣೆಗೊಳಿಸಿದರು.

MLA Build A New Maruthi temple In Mysore
ಕೋತಿ ಸಾವು ದೇವಾಲಯವನ್ನೇ ನಿರ್ಮಿಸಿದ ಶಾಸಕ
author img

By

Published : Feb 17, 2020, 5:40 AM IST

Updated : Feb 17, 2020, 11:12 AM IST

ಮೈಸೂರು : ತೋಟದಲ್ಲಿ ಸಾವನ್ನಪ್ಪಿದ್ದ ಪ್ರೀತಿಯ ಕೋತಿ ಮರಿಗಾಗಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ ಮಾರುತಿ ದೇವಾಲಯವನ್ನು ಶಾಸಕ ಸಾ.ರಾ ಮಹೇಶ್. ನಿರ್ಮಿಸಿ, ಲೋಕಾರ್ಪಣೆಗೊಳಿಸಿದರು.

MLA Build A New Maruthi temple In Mysore
ಕೋತಿ ಮರಿಗಾಗಿ ದೇವಾಲಯ ನಿರ್ಮಿಸಿದ ಶಾಸಕ

ನಗರದ ಹೊರವಲಯದ ದಟ್ಟಗಳ್ಳಿಯಲ್ಲಿರುವ ತೋಟದ ಮನೆಯಲ್ಲಿ ಗುಂಪಿನಿಂದ ಬೇರ್ಪಟ್ಟ ಕೋತಿ ಮರಿಯೊಂದು, ತೋಟದಲ್ಲಿ ಸಾಕಿರುವ ಕುರಿ ಮರಿಯೊಂದಿಗೆ ಹಾಗೂ ಶಾಸಕ ಮಹೇಶ್​​ ಜೊತೆಗೆ ಅನ್ಯೋನ್ಯವಾಗಿತ್ತು. ಈ ಕೋತಿ ಮರಿ ಶಾಸಕರಿಗೆ ಅಚ್ಚುಮೆಚ್ಚಾಗಿತ್ತು. ಶಾಸಕರು ಹೊಸ ವರ್ಷದ ನಿಮಿತ್ತ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಕೋತಿ ಮರಿ ಸಾವನ್ನಪ್ಪಿತ್ತು.

ಪ್ರೀತಿಯ ಕೋತಿ ಮರಿಗೆ ದೇವಾಲಯ ಕಟ್ಟಿಸಿದ ಶಾಸಕ

ಈ ವಿಚಾರ ತಿಳಿದ ಶಾಸಕ ಸಾ.ರಾ.ಮಹೇಶ್, ಕೋತಿಯ ಮೇಲಿನ ಪ್ರೀತಿಯಿಂದ ವಿದೇಶಿ ಪ್ರವಾಸವನ್ನು ಮೊಟಕುಗೊಳಿಸಿ ವಾಪಸ್ ಬಂದು ಕೋತಿಯ ಅಂತ್ಯಕ್ರಿಯೆಯನ್ನು ತಮ್ಮ ತೋಟದಲ್ಲಿ ನೆರವೇರಿಸಿದ್ದರು.

ಪ್ರೀತಿಯ ಕೋತಿಮರಿಗಾಗಿ ದೇವಾಲಯ ನಿರ್ಮಿಸುತ್ತಿದ್ದಾರೆ ಈ ಶಾಸಕ

ಈಗ ಕೋತಿಯ ಅಂತ್ಯಕ್ರಿಯೆ ನಡೆಸಿದ ಸ್ಥಳದಲ್ಲೇ ಮಾರುತಿ ದೇವಾಲಯ ಕಟ್ಟಿಸಿದ್ದಾರೆ. ಈ ದೇವಾಲಯದಲ್ಲಿ ಕುರಿ‌ ಮರಿಯ ಮೇಲೆ ಕೋತಿ ಮರಿ ಕುಳಿತಿರುವ ವಿಗ್ರಹವಿದೆ. ಕಲಾವಿದ ಅರುಣ್ ಯೋಗಿರಾಜ್ ವಿಗ್ರಹ ಕೆತ್ತನೆ ಮಾಡಿದ್ದಾರೆ.

Last Updated : Feb 17, 2020, 11:12 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.