ETV Bharat / state

ಸ್ಪೆಷಲ್ ಶೂಟರ್‌ಗಳನ್ನು ಬಳಸಿಕೊಂಡು ಚಿರತೆ ಹಾವಳಿ ತಪ್ಪಿಸಿ: ಶಾಸಕ ಅಶ್ವಿನ್ ಕುಮಾರ್ ಮನವಿ - ಚಿರತೆಗಳ ಸೆರೆಗೆ ಹೊಸ ಟಾಸ್ಕ್ ಫೋರ್ಸ್ ತಂಡಗಳ ರಚನೆ

ಚಿರತೆ ಸೆರೆಗೆ ಕ್ರಮ ಕೈಗೊಂಡು ಜನರಲ್ಲಿ ಭರವಸೆ ಮೂಡಿಸಬೇಕು ಎಂದು ಸಚಿವ ಎಸ್.ಟಿ.ಸೋಮಶೇಖರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Formation of new task force teams for leopard capture
ಚಿರತೆಗಳ ಸೆರೆಗೆ ಹೊಸ ಟಾಸ್ಕ್ ಫೋರ್ಸ್ ತಂಡಗಳ ರಚನೆ
author img

By

Published : Jan 26, 2023, 9:32 AM IST

ಮೈಸೂರು : ತಿ.ನರಸೀಪುರ ತಾಲ್ಲೂಕಿನಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಸೆರೆಗೆ ಹೊಸ ಟಾಸ್ಕ್ ಫೋರ್ಸ್ ತಂಡಗಳ ರಚನೆ ಮಾಡಲಾಗಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಮಾನವ ಮತ್ತು ವನ್ಯಜೀವಿ ಸಂಘರ್ಷ ಕುರಿತಂತೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

"ಯಾವೆಲ್ಲಾ ಕಡೆ ಚಿರತೆ ಹಾವಳಿ ಇದೆಯೋ, ಅಲ್ಲಿನ ಮರಗಳ ಕೊಂಬೆಗಳ ಕಟಾವು ಆಗಬೇಕು. ಬೀದಿ ದೀಪಗಳು ರಾತ್ರಿ ವೇಳೆ ಕಡ್ಡಾಯವಾಗಿ ಆನ್ ಆಗಿರಬೇಕು. ಹಳ್ಳಿಗಳಿಗೆ ಕಡ್ಡಾಯವಾಗಿ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಹೊತ್ತು ಹೆಚ್ಚು ಬಸ್ ವ್ಯವಸ್ಥೆ ಮಾಡಬೇಕು. ಚಿರತೆ ಸೆರೆಗೆ ಕ್ರಮ ಕೈಗೊಂಡು ಜನರಲ್ಲಿ ಭರವಸೆ ಮೂಡಿಸಬೇಕು. ಸರ್ಕಾರದಿಂದ ಎಲ್ಲಾ ರೀತಿಯ ಅಗತ್ಯ ನೆರವು ನೀಡಲಾಗುವುದು" ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಎಸ್.ಟಿ.ಸೋಮಶೇಖರ್ ಸೂಚನೆ ನೀಡಿದರು.

ಇದೇ ವೇಳೆ ತಿ.ನರಸಿಪುರ ವಿಧಾನಸಭಾ ಕ್ಷೇತ್ರದ ಶಾಸಕ ಅಶ್ವಿನ್ ಕುಮಾರ್ ಮಾತನಾಡಿ, "ಚಿರತೆ ದಾಳಿಯಿಂದ ಜನರು ಭಯಭೀತರಾಗಿದ್ದರೆ. ಬೇಗ ಚಿರತೆ ಹಿಡಿಯಲು ಕ್ರಮ ಕೈಗೊಳ್ಳಿ. ತಾಲ್ಲೂಕಿನಲ್ಲಿ ಹೆಚ್ಚಿನ ಚಿರತೆ ಹಾಗೂ ಮರಿಗಳು ಬೀಡುಬಿಟ್ಟಿವೆ. ಸ್ಪೆಷಲ್ ಶೂಟರ್​ಗಳನ್ನು ಬಳಸಿಕೊಂಡು ಚಿರತೆ ಹಾವಳಿ ತಪ್ಪಿಸಿ" ಮನವಿ ಮಾಡಿದರು.

ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಮಾತನಾಡಿ, "ಜಿಲ್ಲೆಯಲ್ಲಿ 4 ಜನರು ಚಿರತೆ ದಾಳಿಗೆ ಬಲಿಯಾಗಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಚಿರತೆ ಟಾಸ್ಕ್ ಫೋರ್ಸ್ ರಚನೆ ಮಾಡಲು ಮುಖ್ಯಮಂತ್ರಿಗಳು ಅನುಮತಿ ನೀಡಿದ್ದಾರೆ. ಕೃಷಿ ಉದ್ದೇಶಕ್ಕೆ ಎಂದು ಜಾಗವನ್ನು ಖರೀದಿಸಿ ಬಹಳ ವರ್ಷಗಳಿಂದ ಬೀಳುಬಿಟ್ಟಿದ್ದಾರೆ. ಮೂರು ವರ್ಷಗಳಿಗಿಂತ ಹೆಚ್ಚು ಬೀಳುಬಿಟ್ಟಿದ್ದರೆ ಅಂಥವರಿಗೆ ನೊಟೀಸ್ ನೀಡಲಾಗುವುದು. ಚಿಕನ್ ಸ್ಟಾಲ್‌ಗಳಿಂದ ವೇಸ್ಟ್‌ಗಳನ್ನು ಹಳ್ಳಿಗಳಲ್ಲಿ ಹಾಕದಂತೆ ನೋಡಿಕೊಳ್ಳಿ" ಎಂದು ಅಧಿಕಾರಿಗಳಿಗೆ ತಿಳಿಸಿದರು

ಈವರೆಗೆ ಎಷ್ಟು ಚಿರತೆ ಸೆರೆ?: ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾಹಿತಿ ನೀಡಿ, ಜನವರಿ ತಿಂಗಳಿನಲ್ಲಿ 3 ಚಿರತೆ ಹಾಗೂ 5 ಚಿರತೆ ಮರಿಗಳನ್ನು ಸೆರೆ ಹಿಡಿಯಲಾಗಿದೆ. ಚಿರತೆ ಸೆರೆಗೆ ಬೋನುಗಳನ್ನು ಇಡಲಾಗಿದೆ. 158 ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ವಿವಿಧ ತಂಡಗಳಲ್ಲಿ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ರಾತ್ರಿ ವೇಳೆ ತಂಡಗಳು ಗಸ್ತು ತಿರುಗುತ್ತಿದ್ದು, ಕಬ್ಬು ಕಟಾವಣೆ ವೇಗ ಗತಿಯಲ್ಲಿ ನಡಿಯುತ್ತಿದೆ. ಇನ್ನೂ 800 ಎಕರೆ ಕಬ್ಬು ಕಟಾವಾಗಬೇಕಿದೆ. ಡ್ರೋನ್ ಬಳಕೆ ಸಹ ಮಾಡಲಾಗಿದೆ. ಏಪ್ರಿಲ್ 2022 ರಿಂದ ಇಲ್ಲಿಯವರೆಗೆ 73 ಚಿರತೆಗಳನ್ನು ಮೈಸೂರು ಜಿಲ್ಲೆಯಲ್ಲಿ ಸೆರೆಹಿಡಿಯಲಾಗಿದೆ ಎಂದರು. ಸಭೆಯಲ್ಲಿ ಜಿ.ಪಂ‌ ಸಿಇಒ ಪೂರ್ಣಿಮಾ, ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಇದನ್ನೂ ಓದಿ :ಚಿರತೆ ದಾಳಿಗೆ ನಾಲ್ವರು ಬಲಿ: ನರಭಕ್ಷಕನ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಪ್ರಾರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.