ಮೈಸೂರು: ಬೆಂಬಲಿಗನ ಹೊಸ ಬೈಕ್ ಜಾವಾ (ಯೆಜ್ಡಿ) ಅನ್ನು ಸಚಿವ ಸಾ.ರಾ.ಮಹೇಶ್ ಓಡಿಸುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಚಿವ ಸಾ.ರಾ.ಮಹೇಶ್ ತಮ್ಮ ಸ್ವ ಕ್ಷೇತ್ರ ಕೆ.ಆರ್.ನಗರದಲ್ಲಿ ಮದುವೆ ಸಮಾರಂಭಕ್ಕೆ ಹೋಗಿದ್ದ ವೇಳೆಯಲ್ಲಿ ಸ್ನೇಹಿತ ಹಾಗೂ ಪುರಸಭೆಯ ಜೆಡಿಎಸ್ ಸದಸ್ಯ ಉಮೇಶ್ ಅವರು ತಮ್ಮ ಜಾವಾ ಬೈಕ್ ಓಡಿಸುವಂತೆ ಹೇಳಿದ್ದಾರೆ.