ETV Bharat / state

ಡಿಕೆಶಿ ಅವರನ್ನು ಟಾರ್ಗೆಟ್ ಮಾಡೋ ಅವಶ್ಯಕತೆ ಯಾರಿಗೂ ಇಲ್ಲ: ಸಚಿವ ಸುಧಾಕರ್​​​​​​​​​​ - CBI attacks

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಯಾವುದೇ ಭ್ರಷ್ಟಾಚಾರ ಮಾಡಿಲ್ಲವೆಂದು ಇತ್ತೀಚೆಗೆ ಬಹಳಷ್ಟು ಸಲ ಹೇಳಿದ್ದಾರೆ. ಅದನ್ನು ಸಾಬೀತು ಮಾಡಿಕೊಳ್ಳುವುದಕ್ಕೆ ಇದು ಸೂಕ್ತ ಸಮಯ. ಇವತ್ತು ಇವರ ಮೇಲೆ ದಾಳಿ ಆಗುತ್ತಿರುವುದಕ್ಕೂ ರಾಜಕಾರಣಕ್ಕೂ ಸಂಬಂಧವಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್​ ಸ್ಪಷ್ಟಪಡಿಸಿದ್ದಾರೆ.

minister-sudhaker-talsk-on-dk-shivakumar-raid
ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್​​​​​​​​​​
author img

By

Published : Oct 5, 2020, 1:10 PM IST

ಮೈಸೂರು: ಡಿ.ಕೆ‌. ಶಿವಕುಮಾರ್ ಭ್ರಷ್ಟಾಚಾರ ಮಾಡಿಲ್ಲ ಎಂದು ಹೇಳಿಕೊಳ್ಳುತ್ತಿದ್ದರು. ಈಗ ಮಾತನ್ನು ಸಾಬೀತುಪಡಿಸಲು ಇದು ಸೂಕ್ತ ಸಮಯ. ಸಿಬಿಐ ದಾಳಿ ರಾಜಕೀಯ ಪ್ರೇರಿತ ಅಲ್ಲವೆಂದು ಸಚಿವ ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಮನೆಯ ಮೇಲೆ ದಾಳಿ ರಾಜಕೀಯ ಪ್ರೇರಿತ ಅಲ್ಲ, ಡಿಕೆಶಿ ಪ್ರಾಮಾಣಿಕರಾಗಿದ್ದರೆ ತನಿಖೆಯಲ್ಲಿ ಅದು ಸಾಬೀತು ಆಗಲಿದೆ. ಇದರಲ್ಲಿ ಬಿಜೆಪಿಯ ರಾಜಕೀಯ ಹಸ್ತಕ್ಷೇಪ ಇಲ್ಲ. ಇವತ್ತು ಇವರ ಮೇಲೂ ಆಗುತ್ತಿರುವುದಕ್ಕೂ ರಾಜಕಾರಣಕ್ಕೂ ಸಂಬಂಧವಿಲ್ಲ. ಡಿ ಕೆ ಶಿವಕುಮಾರ್​​ ಅವರನ್ನ ಟಾರ್ಗೆಟ್ ಮಾಡೋ ಅವಶ್ಯಕತೆ ಯಾರಿಗೂ ಇಲ್ಲ ಎಂದರು.

ಡಿ ಕೆ ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ಕುರಿತು ಸಚಿವ ಸುಧಾಕರ್ ಪ್ರತಿಕ್ರಿಯೆ

ಸಿಬಿಐ ಸ್ವಾಯುತ್ತ ಸಂಸ್ಥೆ, ಅವರು ಏನು ತನಿಖೆ ಮಾಡುತ್ತಿದ್ದಾರೋ ಅದನ್ನು ನಿಷ್ಪಕ್ಷಪಾತವಾಗಿ ಮಾಡುತ್ತಾರೆ. ಆಗ ಸತ್ಯ ಹೊರಗೆ ಬರಲಿ ಅಷ್ಟೇ, ಇದಕ್ಕೆ ನಾವೆಲ್ಲಾ ಅವಕಾಶ ಮಾಡಿಕೊಡಬೇಕು. ಸಂವಿಧಾನದ ಅಡಿಯಲ್ಲಿ ಎಲ್ಲರೂ ಸಮಾನರು, ಪ್ರಾಮಾಣಿಕತೆ ಇದ್ದರೆ ಡಿ.ಕೆ. ಶಿವಕುಮಾರ್ ಈ ಪ್ರಕರಣದಿಂದ ಹೊರಗೆ ಬರುತ್ತಾರೆ. ಅವರು ಯಾವುದೇ ಭ್ರಷ್ಟಾಚಾರ ಮಾಡಿಲ್ಲವೆಂದು ಇತ್ತೀಚೆಗೆ ಬಹಳಷ್ಟು ಸಲ ಹೇಳಿದ್ದಾರೆ. ಅದನ್ನು ಸಾಬೀತು ಮಾಡಿಕೊಳ್ಳುವುದಕ್ಕೆ ಇದು ಅವಕಾಶ ಎಂದು ಸಚಿವ ಸುಧಾಕರ್​ ಹೇಳಿದ್ರು.

ಟಾರ್ಗೆಟ್ ಮಾಡುವ ಅವಶ್ಯಕತೆ ಯಾರಿಗೂ ಇಲ್ಲ. ಹಿಂದೆ ಅಮಿತ್ ಶಾ ಅವರನ್ನು 2 ವರ್ಷ ಗುಜರಾತಿಗೆ ತೆರಳದಂತೆ ನಿಷೇಧ ಮಾಡಿದ್ದರಲ್ಲಾ ಯಾವ ಸರ್ಕಾರ ಇತ್ತು? ಕೇಂದ್ರದಲ್ಲಿ ಯಾರು ಯಾರನ್ನು ಟಾರ್ಗೆಟ್ ಮಾಡಿದ್ದರು? ಯಾಕೆ ಮಾಡಿದ್ದರು? ಜಗಮೋಹನ್ ರೆಡ್ಡಿ ಅವರನ್ನು 2 ವರ್ಷಗಳ‌ ಕಾಲ ಜೈಲಿನಲ್ಲಿ‌ ಇಟ್ಟಿದ್ದರಲ್ಲಾ ಅದನ್ನು ಯಾರು ಮಾಡಿದ್ದು ? ಹಾಗಾದರೆ ಕಾಂಗ್ರೆಸ್ ಕೂಡ ರಾಜಕೀಯ ‌ಮಾಡಿತ್ತು ಅಂತಾ ನಾವು ಹೇಳೋಕಾಗುತ್ತಾ ಎಂದು ಸಚಿವ ಸುಧಾಕರ್​ ಪ್ರಶ್ನಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.