ETV Bharat / state

ನಿಮಗೆ ಒಳ್ಳೆ ಹೆಸರಿದೆ, ಉಳಿಸಿಕೊಂಡು ಕೆಲಸ ಮಾಡಿ: ಎಸ್​​ಪಿ ರಿಷ್ಯಂತ್​​ಗೆ ಸಚಿವ ಸೋಮಶೇಖರ್ ತಾಕೀತು - HD kote resort owner assaulted case updates

ಹೆಚ್.ಡಿ ಕೋಟೆ ಬಳಿಯ ರೆಸಾರ್ಟ್​​ ಓನರ್​ಗೆ ಕಿರುಕುಳ ಆರೋಪ ಪ್ರಕರಣ ಸಂಬಂಧ ಮೈಸೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಿಷ್ಯಂತ್ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

minister st somshekhar unhappy with mysore SP rishyanth
ಮೈಸೂರು
author img

By

Published : Nov 25, 2020, 11:50 AM IST

ಮೈಸೂರು: ಇತ್ತೀಚೆಗೆ ಹೆಚ್.ಡಿ ಕೋಟೆಯ ರೆಸಾರ್ಟ್​​ವೊಂದರಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್​ಗೆ ತಾಕೀತು ಮಾಡಿದ್ದಾರೆ.

ಹೆಚ್.ಡಿ ಕೋಟೆ ಬಳಿಯ ರೆಸಾರ್ಟ್​​ ಓನರ್​ಗೆ ಕಿರುಕುಳ ಆರೋಪ ಹಿನ್ನೆಲೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಪ್ರಕರಣ ಕುರಿತು ಸಚಿವ ಎಸ್.ಟಿ ಸೋಮಶೇಖರ್ ಎಸ್.ಪಿ ರಿಷ್ಯಂತ್ ಅವರಿಗೆ ತಾಕೀತು ಮಾಡಿದ್ದು , ನಾನೇ ಫೋನ್ ಮಾಡಿ‌ ಇನ್ಸ್​ಪೆಕ್ಟರ್​​ಗೆ ಹೇಳಿದ್ರೂ, ಅಲ್ಲಿ ರೆಸಾರ್ಟ್ ಓನರ್ ಅವರನ್ನು ರಾತ್ರಿ 10 ಗಂಟೆಯಾದರೂ ಆಚೆ ಬಿಟ್ಟಿಲ್ಲ. ತಪ್ಪು ಮಾಡದೇ ಇದ್ರೂ ಓನರ್​​​ಗೆ ಬೆದರಿಕೆ ಒಡ್ಡಿದ್ದಾರೆ. ಆಯುಧ ಪೂಜೆಯಲ್ಲಿ ರೋಲ್ ಕಾಲ್ ನೀಡಿಲ್ಲ ಅಂತ ಹೇಳಿ 10 ಗಂಟೆಯಾದರೂ ಅವರಿಗೆ ಕಿರುಕುಳ ನೀಡ್ತಾರೆ. ಕಳೆದ 8 ತಿಂಗಳನಿಂದ ರೆಸಾರ್ಟ್ ನಲ್ಲಿ ಯಾವುದೇ ಬ್ಯುಸಿನೆಸ್ ಇಲ್ಲ. ಹೀಗಿರುವಾಗ ಈ ರೀತಿ ಅವರಿಗೆ ತೊಂದರೆ ಕೊಟ್ಟರೆ ಹೇಗೆ? ನಿಮಗೆ ಒಳ್ಳೆ ಹೆಸರಿದೆ. ಹಾಗಾಗಿ ನಿಮಗೆ ಹೇಳುತ್ತಿದ್ದೇನೆ. ಸರ್ಕಲ್ ಇನ್ಸ್​ಪೆಕ್ಟರ್, ಸಬ್​ಇನ್ಸ್​ಪೆಕ್ಟರ್ ಮೇಲೆ ಕ್ರಮ ಕೈಗೊಳ್ಳಿ. ಮುಂದೆ ಹೀಗೆ ಆಗದ ಹಾಗೇ ನೋಡಿಕೊಳ್ಳಿ ಎಂದು ಕೆಡಿಪಿ ಸಭೆಯಲ್ಲಿ ಎಸ್​ಪಿ ರಿಷ್ಯಂತ್ ಅವರಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಮೈಸೂರಿನಲ್ಲಿ ಕೊರೊನಾ ಕಡಿಮೆಯಾಗುತ್ತಿರೋ ಹಿನ್ನೆಲೆ, ಜಿಲ್ಲಾಧಿಕಾರಿ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಚಿವ ಎಸ್.ಟಿ ಸೋಮಶೇಖರ್​​ ಅಭಿನಂದನೆ ಸಲ್ಲಿಸಿದ್ರು. ಜಿಲ್ಲಾ ಉಸ್ತುವಾರಿ ಕಳೆದ ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಹೆಚ್ಚಾಗುತ್ತಲೇ ಇತ್ತು , ಎಲ್ಲಿ ಹೋದರೂ ಮೈಸೂರಿನ ಬಗ್ಗೆಯೇ ಚರ್ಚೆಯಾಗುತ್ತಿತ್ತು. ಬೆಂಗಳೂರಿನ ನಂತರದ ಸ್ಥಾನದಲ್ಲಿ ಮೈಸೂರು ಇತ್ತು. ಈಗ ಮೈಸೂರಿನಲ್ಲಿ ಕೊರೊನಾ ಕಂಟ್ರೋಲ್​‌ಗೆ ಬಂದಿದೆ. ಇದೇ ರೀತಿ ಕೆಲಸ ಕಾರ್ಯಗಳನ್ನ ಮುಂದುವರೆಸಿ. ಮತ್ತಷ್ಟು ಕ್ರಮಕೈಗೊಳ್ಳಿ. ಇಲಾಖೆಗೆ ಬೇಕಾದ ಎಲ್ಲ ರೀತಿಯ ವ್ಯವಸ್ಥೆಗಳನ್ನು ಸಚಿವ ಸುಧಾಕರ್ ಮೂಲಕ ಬಗೆಹರಿಸಿಕೊಳ್ಳಿ ಎಂದು ಉಸ್ತುವಾರಿ ಸಚಿವ ಎಸ್.ಟಿ‌.ಸೋಮಶೇಖರ್ ಸಲಹೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.