ETV Bharat / state

ಕೆರೆ ಅಭಿವೃದ್ಧಿ.. ಸುಧಾಮೂರ್ತಿಯವರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ ಎಸ್.ಟಿ. ಸೋಮಶೇಖರ್ - ಇನ್ಫೋಸಿಸ್

ಸಚಿವ ಎಸ್.ಟಿ. ಸೋಮಶೇಖರ್ ಇಂದು ಮೈಸೂರಿನ ಹೊರವಲಯದಲ್ಲಿರುವ ಹೆಬ್ಬಾಳು ಕೆರೆಗೆ ತೆರಳಿ ಕೆರೆ ವೀಕ್ಷಿಸಿದ್ದಾರೆ.

ST Somashekhar
ಎಸ್.ಟಿ.ಸೋಮಶೇಖರ್
author img

By

Published : Feb 13, 2021, 5:49 PM IST

ಮೈಸೂರು: ಇನ್ಫೋಸಿಸ್ ವತಿಯಿಂದ ಹೆಬ್ಬಾಳು ಕೆರೆಯನ್ನು ಅತ್ಯುತ್ತಮವಾಗಿ, ಮಾದರಿಯಾಗಿ ಅಭಿವೃದ್ಧಿಪಡಿಸಲಾಗಿದೆ. ಇದಕ್ಕಾಗಿ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥರಾದ ಸುಧಾ ನಾರಾಯಣಮೂರ್ತಿ ಅವರಿಗೆ ಪೌರ ಸನ್ಮಾನ ಹಮ್ಮಿಕೊಳ್ಳಲಾಗುವುದು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.

ಸಚಿವ ಎಸ್.ಟಿ.ಸೋಮಶೇಖರ್

ಮೈಸೂರಿನ ಹೊರವಲಯದಲ್ಲಿರುವ ಹೆಬ್ಬಾಳು ಕೆರೆಯನ್ನು ವೀಕ್ಷಣೆ ಮಾಡಿದ ಸಚಿವರು, 2.2 ಕಿಮೀ ಸುತ್ತಳತೆಯುಳ್ಳ 54 ಎಕರೆ ವಿಸ್ತೀರ್ಣದ ವ್ಯಾಪ್ತಿಯೊಳಗೆ ಕೆರೆ ಇದ್ದು, ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಸಿಆರ್​ಎಫ್ ವತಿಯಿಂದ ಸುಮಾರು 105 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಮಾದರಿಯಲ್ಲಿ ಮೈಸೂರು ನಗರದ ಅಭಿವೃದ್ಧಿಗೆ ಚಿಂತನೆ:

ಇದೇ ರೀತಿ ಸಿಎಸ್​ಆರ್​ ಫಂಡ್ ಎಲ್ಲೆಲ್ಲಿ ಇದೆಯೋ ಅವುಗಳನ್ನು ಬಳಸಿಕೊಂಡು ಪಾರ್ಕ್, ಕೆರೆ ಸೇರಿದಂತೆ ಇನ್ನಿತರ ಕಡೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿದ್ದೇನೆ. ಇಷ್ಟು ಸುಂದರವಾಗಿ ಕೆಲಸವಾಗುವುದನ್ನು ಗಮನಿಸಿದಾಗ ಇಂತಹ ಅನುದಾನಗಳು ಪಾರ್ಕ್, ಕೆರೆಗಳ ಅಭಿವೃದ್ಧಿಗಾಗಿಯೇ ಬಳಸಿದರೆ ಉತ್ತಮ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಚಿವ ಮಾಧುಸ್ವಾಮಿ ಅವರಿಂದ ಶೀಘ್ರ ಭೇಟಿ:

ಕೆರೆಗಳ ಒತ್ತುವರಿ ಸಂಬಂಧ ಸಚಿವ ಮಾಧುಸ್ವಾಮಿ ಅವರ ಜೊತೆ ಮಾತನಾಡಿದ್ದೇನೆ. ಅವರು ಬಜೆಟ್​ಗಿಂತ ಮುಂಚಿತವಾಗಿ ಇಲ್ಲಿಗೆ ಬಂದು ವೀಕ್ಷಣೆ ಮಾಡುವುದಾಗಿ ತಿಳಿಸಿದ್ದಾರೆ. ಅವರು ಈ ಎಲ್ಲ ಅಂಶಗಳನ್ನು ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ಈ ಸಂಬಂಧ ಅವರೇ ಆದೇಶ ನೀಡಲಿದ್ದಾರೆ ಎಂದು ತಿಳಿಸಿದರು.

ಚಂಡೀಗಢದಲ್ಲಿ ಇದೇ ಮಾದರಿಯ ಕೆರೆ ಇದ್ದು, ನೋಡಲು ಮನಮೋಹಕವಾಗಿದೆ. ಅಲ್ಲೂ ಸಹ ಸುಮಾರು 5-6 ಕಿಮೀ ವಿಸ್ತೀರ್ಣ ಜಾಗದಲ್ಲಿ ಸ್ವಚ್ಛತೆಗೆ ಆದ್ಯತೆ ಕೊಟ್ಟು ಮೂಲಸೌಕರ್ಯ ಒದಗಿಸಿ ನಿರ್ಮಿಸಲಾಗಿದೆ. ಅಂಥದ್ದೇ ಮಾದರಿಯ ಕೆರೆಯನ್ನು ನಾನು ಮೈಸೂರಿನಲ್ಲಿಯೇ ನೋಡುತ್ತಿದ್ದೇನೆ ಎಂದು ತಿಳಿಸಿದರು.

ತ್ಯಾಜ್ಯ ನೀರು ಸೇರದಂತೆ ಕ್ರಮ:

ಹೆಬ್ಬಾಳು ಕೆರೆಗೆ ಕೆಲವು ತ್ಯಾಜ್ಯ ಹಾಗೂ ರಾಸಾಯನಿಕ ನೀರು ಸೇರುತ್ತಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗ ತಾನೇ ಈ ವಿಷಯವನ್ನು ನನ್ನ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಆದೇಶ ನೀಡಲಾಗುವುದು ಎಂದು ತಿಳಿಸಿದರು.

ಸುಧಾಮೂರ್ತಿ ಅವರಿಗೆ ಕರೆ ಮಾಡಿ ಅಭಿನಂದನೆ:

ಇದೇ ವೇಳೆ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಅವರಿಗೆ ಸ್ಥಳದಲ್ಲಿಯೇ ಕರೆ ಮಾಡಿದ ಎಸ್.ಟಿ. ಸೋಮಶೇಖರ್ ಅವರು, ಹೆಬ್ಬಾಳು ಕೆರೆಯ ಸಂಪೂರ್ಣ ಅಭಿವೃದ್ಧಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಇಂಥ ಒಂದು ಅದ್ಭುತ ಅಭಿವೃದ್ಧಿ ಕಾರ್ಯ ಮಾಡಿದ್ದಕ್ಕೆ ಮೈಸೂರಿನ ಜನತೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದ ಸಚಿವರು, ಇಂತಹ ಒಂದು ಕಾರ್ಯಕ್ಕೆ ತಮಗೆ ಮೈಸೂರಿನಲ್ಲಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಸಮಯ, ದಿನಾಂಕ ನೋಡಿಕೊಂಡು ತಮಗೆ ತಿಳಿಸಲಾಗುವುದು ಎಂದು ಸುಧಾಮೂರ್ತಿ ಅವರಿಗೆ ತಿಳಿಸಿದರು. ಇದಕ್ಕೆ ಅವರೂ ಒಪ್ಪಿಕೊಂಡಿದ್ದಾಗಿ ಮಾಹಿತಿ ನೀಡಿದರು.

ಒಟ್ಟಾರೆ 105 ಕೋಟಿ ರೂಪಾಯಿ ಪ್ಲ್ಯಾನ್

ಹೆಬ್ಬಾಳು ಕೆರೆ, ಸುತ್ತಮುತ್ತಲ ಜಾಗ, ರಸ್ತೆಗಳು ಹಾಗೂ ಎಸ್​ಟಿಪಿ (ತ್ಯಾಜ್ಯ ನೀರಿನ ಶುದ್ದೀಕರಣ ಘಟಕ) ಮೂಲಸೌಕರ್ಯ ಅಭಿವೃದ್ಧಿ, ಸ್ವಚ್ಛತೆ ಹಾಗೂ ನಿರ್ವಹಣೆಗಾಗಿ ಒಟ್ಟಾರೆ 105 ಕೋಟಿ ರೂಪಾಯಿ ಯೋಜನೆ ಹಾಕಿಕೊಂಡಿರುವುದಾಗಿ ಸಚಿವ ಸೋಮಶೇಖರ್ ಅವರಿಗೆ ಇನ್ಫೋಸಿಸ್ ಇಂಜಿನಿಯರ್ ಮಾಹಿತಿ ನೀಡಿದರು. ಇದೇ ವೇಳೆ ಹೆಬ್ಬಾಳು ಕೆರೆಯ ನೀಲನಕ್ಷೆಯನ್ನು ಸಚಿವರು ವೀಕ್ಷಿಸಿದರು.

ಎಸ್​ಟಿಪಿ ಪ್ಲ್ಯಾಂಟ್ ಬಗ್ಗೆ ಮೆಚ್ಚುಗೆ:

ಹೆಬ್ಬಾಳು ಕೆರೆಯ ಪಕ್ಕದಲ್ಲಿರುವ ಎಸ್​ಟಿಪಿ ಪ್ಲ್ಯಾಂಟ್​ಗೆ ಭೇಟಿ ನೀಡಿದ ಸಚಿವ ಸೋಮಶೇಖರ್, ತ್ಯಾಜ್ಯ ನೀರಿನ ಶುದ್ದೀಕರಣ ಮಾಡುವ ಎಲ್ಲ ಪ್ರಕ್ರಿಯೆಗಳನ್ನು ಖುದ್ದು ಪರಿಶೀಲನೆ ನಡೆಸಿ ಮಾಹಿತಿ ಪಡೆದರು.

ಇನ್ಫೋಸಿಸ್ ವತಿಯಿಂದ 5 ವರ್ಷಗಳ ಕಾಲ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದು, ಕೊಳಚೆ ನೀರನ್ನು ಶುದ್ದೀಕರಿಸಿ ಕೆರೆಗೆ ಬಿಡುವ ಕೆಲಸವನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಬೇಕಾದ ಎಲ್ಲ ಉಪಕರಣ ಹಾಗೂ ತಂತ್ರಜ್ಞಾನಗಳನ್ನು ಇನ್ಫೋಸಿಸ್ ವತಿಯಿಂದಲೇ ಒದಗಿಸಿ ನಿರ್ವಹಿಸಲಾಗುತ್ತಿದೆ ಎಂದು ಇನ್ಫೋಸಿಸ್ ಇಂಜಿನಿಯರ್​ಗಳು ಸಚಿವರಿಗೆ ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.