ಮೈಸೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಡಿ ವಿಚಾರದಲ್ಲಿ ಮಾನ ಕಳೆದ ಸಿಡಿಯ ಹಿಂದಿನ ಮಹಾನ್ ನಾಯಕ ಯಾರು ಎಂದು ಶೀಘ್ರದಲ್ಲಿ ಗೊತ್ತಾಗಲಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ಮೈಸೂರಿನಲ್ಲಿ ಶೀಘ್ರದಲ್ಲಿ ಚಿತ್ರನಗರಿ, ಕಾಮಗಾರಿ ಆರಂಭವಾಗಲಿದೆ. ಮರಳಿ ಮೈಸೂರಿಗೆ ಚಿತ್ರ ನಗರಿ ಮರಳಿ ಬಂದಿದ್ದು, ಸಂತೋಷವಾಗಿದೆ. ಇದಕ್ಕೆ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಕೋವಿಡ್ ಎರಡನೇ ಅಲೆ ತಡೆಗಟ್ಟಲು ಅಧಿಕಾರಿಗಳ ಸಭೆ ನಡೆಸಲಾಗುತ್ತಿದ್ದು, ಈಗ ಮೈಸೂರಿನಲ್ಲಿ ಕೊರೊನಾ ಸಂಪೂರ್ಣ ಹತೋಟಿಯಲ್ಲಿ ಇದೆ. ಯಾವುದೇ ಭಯ ಇಲ್ಲ ಎಂದರು.
ಸಿಡಿ ಪ್ರಕರಣದಲ್ಲಿ ಮನೆಹಾಳು ಮಾಡಿ, ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಮಾನ ಹಾಳು ಮಾಡಿದ ಮಹಾನ್ ನಾಯಕ ಯಾರು ಎಂಬ ಕುತೂಹಲ ನನಗೂ ಇದೆ. ಎಸ್.ಐ.ಟಿ. ಸಿಡಿ ಪ್ರಕರಣದಲ್ಲಿ ತನಿಖೆಯನ್ನು ಸಂಪೂರ್ಣಗೊಳಿಸಲಿದ್ದು, ಶೀಘ್ರವೇ ಇದರ ಹಿಂದೆ ಯಾರು ಇದ್ದಾರೆ ಎಂಬುದು ಗೊತ್ತಾಗಲಿದೆ. ಸಿಡಿ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಬಗ್ಗೆ ಏಕೆ ಹೆಸರು ಬರುತ್ತಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಡಿ.ಕೆ.ಶಿವಕುಮಾರ್ಗೆ ಅಳುಕು ಏಕೆ, ಎಲ್ಲಾ ಪಕ್ಷದಲ್ಲೂ ಮಹಾನ್ ನಾಯಕರು ಇದ್ದಾರೆ. ಮಹಾನ್ ನಾಯಕ ಎಂಬುದು ನಾನೇ ಎಂಬ ಅಳುಕು ಏಕೆ ಎಂದರು.
ಓದಿ : ಸಿಡಿ ಪ್ರಕರಣ: ಯುವತಿ ಸೇರಿದಂತೆ ಮೂವರಿಗೆ ನೋಟಿಸ್ ನೀಡಿದ ಎಸ್ಐಟಿ
ಇನ್ನೂ ಇತ್ತೀಚೆಗೆ ಸದನಕ್ಕೆ ಹೋಗಲು ಬೇಸರವಾಗುತ್ತಿದೆ ಅಲ್ಲಿ ಅನಗತ್ಯ ಚರ್ಚೆಗಳೇ ಪ್ರಮುಖವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.