ETV Bharat / state

ವಿಧಾನ ಪರಿಷತ್​ನಲ್ಲಿನ ಕೋಲಾಹಲಕ್ಕೆ ಕಾಂಗ್ರೆಸ್ ಕಾರಣ: ಸಚಿವ ಕೋಟ ಶ್ರೀನಿವಾಸ್ ಪೂಜಾರಿ

ಕಾಂಗ್ರೆಸ್ ಪಕ್ಷ ಸಭಾಪತಿ ಹುದ್ದೆಯನ್ನು ರಾಜಕೀಯಕ್ಕೆ ಬಳಸುತ್ತಿರುವುದು ಅತ್ಯಂತ ಖಂಡನೀಯ. ಸಭಾಪತಿ ಸ್ಥಾನ ಪಕ್ಷಾತೀತ ಹಾಗೂ ಗೌರವದ ಸ್ಥಾನವಾಗಿದೆ. ಆ ಸ್ಥಾನದ ಬಗ್ಗೆ ಚರ್ಚೆ ಮಾಡುವುದು ಬೇಡ ಎಂದು ವಿಧಾನ ಪರಿಷತ್​ನ ನಾಯಕರೂ ಆಗಿರುವ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.

Minister Kota Srinivas Poojary Allegations
ನೆನ್ನೆಯ ಘಟನೆಗಳಿಗೆ ಕಾಂಗ್ರೆಸ್ ಕಾರಣ: ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ
author img

By

Published : Dec 16, 2020, 12:52 PM IST

ಮೈಸೂರು: ಮಂಗಳವಾರ ವಿಧಾನ ಪರಿಷತ್​​ನಲ್ಲಿ ನಡೆದ ಕೋಲಾಹಲ ಕುರಿತಂತೆ ಸಭಾ ನಾಯಕರಾಗಿರುವ ಆಗಿರುವ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆಯ ಘಟನೆಗೆ ಕಾಂಗ್ರೆಸ್ ಕಾರಣ. ಸಭಾಪತಿಯ ಮೇಲೆ ಒತ್ತಡ ತಂದು ಗೊಂದಲಗಳಿಗೆ ಕಾರಣವಾಗಿದ್ದಾರೆ. ಮುಂದೆ ಈ ರೀತಿ ಘಟನೆಗಳು ನಡೆಯಬಾರದು ಎಂದರು.

ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯೆ

ಹಿಂದುಳಿದ ವರ್ಗಗಳ ರಾಜ್ಯ ಮಟ್ಟದ ಕಾರ್ಯಕಾರಿಣಿಗೆ ಭಾಗವಹಿಸಲು ಆಗಮಿಸಿದ ಸಚಿವರು ಮಂಗಳವಾರ ವಿಧಾನ ಪರಿಷತ್​ನಲ್ಲಿ ನಡೆದ ಘಟನೆಯ ಬಗ್ಗೆ ಮಾತನಾಡಿ, ಈ ಘಟನೆ ಎಲ್ಲರಿಗೂ ನೋವನ್ನುಂಟು ಮಾಡಿದೆ. ಕಾಂಗ್ರೆಸ್ ಪಕ್ಷ ಸಭಾಪತಿ ಹುದ್ದೆಯನ್ನು ರಾಜಕೀಯಕ್ಕೆ ಬಳಸುತ್ತಿರುವುದು ಅತ್ಯಂತ ಖಂಡನೀಯ. ಸಭಾಪತಿ ಸ್ಥಾನ ಪಕ್ಷಾತೀತ ಹಾಗೂ ಗೌರವದ ಸ್ಥಾನವಾಗಿದೆ. ಆ ಸ್ಥಾನದ ಬಗ್ಗೆ ಚರ್ಚೆ ಮಾಡುವುದು ಬೇಡ ಎಂದು ಹೇಳಿದರು.

ಓದಿ: ವಿಧಾನ ಪರಿಷತ್​ನಲ್ಲಿ ಹೈಡ್ರಾಮಾ: ಬಿಜೆಪಿ-ಕಾಂಗ್ರೆಸ್​ ಸದಸ್ಯರ ಮಧ್ಯೆ ಕಿತ್ತಾಟ

ಬಿಜೆಪಿ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಈ ಬಗ್ಗೆ ಚರ್ಚೆ ಮಾಡುವುದಕ್ಕೆ ಅವಕಾಶ ಇತ್ತು. ಆದರೆ ಕಾಂಗ್ರೆಸ್ ಪಕ್ಷದವರು ಇದಕ್ಕೆ ಅವಕಾಶ ಕೊಡದೆ ಸಭಾಪತಿಯ ಮೇಲೆ ಒತ್ತಡ ತಂದು ಈ ಗೊಂದಲಗಳಿಗೆ ಕಾರಣರಾಗಿದ್ದಾರೆ. ಈ ವಿಚಾರದಲ್ಲಿ ಏನೇ ಆದರೂ ಗೊಂದಲ ಸುಖಾಂತ್ಯವಾಗಿ ಬಗೆಹರಿಯಬೇಕು. ಇಂತಹ ಘಟನೆ ಮುಂದೆ ನಡೆಯದಂತೆ ಎಲ್ಲಾ ಪಕ್ಷದವರು ನೋಡಿಕೊಳ್ಳಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.