ಮೈಸೂರು : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಗತಿ ಇಲ್ಲ. ರಾಜಕೀಯ ಸ್ಥಿರತೆ ಉಳಿಸಿಕೊಳ್ಳಲು ಜಿ ಟಿ ದೇವೇಗೌಡರ ಸ್ನೇಹ ಬೆಳೆಸುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.
ಚಾಮುಂಡಿ ತಾಯಿಯ ದರ್ಶನ ಪಡೆದು ನಂತರ ಹಿಂದುಳಿದ ವರ್ಗಗಳ ಒಬಿಸಿ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಲು ತೆರಳುತ್ತಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಲು ಜಿ.ಟಿ.ದೇವೇಗೌಡರಿಗೆ ಎಲ್ಲರೂ ಬೆಂಬಲ ನೀಡಿದರು.
ಹಾಗಾಗಿ, ಸೇರಿಕೊಂಡರು. ಈಗ ನೀವು ಸಿದ್ದರಾಮಯ್ಯನವರ ಜೊತೆ ಕೈಜೋಡಿಸಲು ಹೋಗಿ ಅವಕಾಶವಾದಿ ರಾಜಕಾರಣಿ ಆಗಬೇಡಿ. ಸಿದ್ದರಾಮಯ್ಯಂಗೆ ಗತಿ ಇಲ್ಲ. ಆದ್ದರಿಂದ ನಿಮ್ಮ ಬಳಿ ಹೇಗಾದರೂ ಮಾಡಿ ನನ್ನನ್ನು ಉಳಿಸಪ್ಪ ಎಂದು ಹೇಳುತ್ತಿದ್ದಾರೆ ಎಂದರು.
ಬಾದಾಮಿಯಲ್ಲಿ ಈ ಬಾರಿ ಸೋಲುತ್ತಾರೆ. ಹಾಗಾಗಿ, ರಾಜಕೀಯ ಸ್ಥಿರತೆ ಉಳಿಸಿಕೊಳ್ಳಲು ಜಿ.ಟಿ.ದೇವೇಗೌಡರ ಸ್ನೇಹ ಬೆಳೆಸಿದ್ದಾರೆ. ನೀವಿಬ್ಬರು ಒಂದಾದರೆ ನಮಗೆ ಭಯ ಏಕೆ. ನಾವು ರಾಹುಲ್ ಗಾಂಧಿಯನ್ನೇ ಸೋಲಿಸಿದ್ದೇವೆ ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿಯವರನ್ನು ದೇವೇಗೌಡರು ಭೇಟಿಯಾಗಿ ಒಟ್ಟಾಗಿ ನೋಡಿ ಸಂತೋಷವಾಯಿತು. ಒಂದು ಪಕ್ಷದ ರಾಜಕಾರಣಿ, ಇನ್ನೊಂದು ಪಕ್ಷದ ರಾಜಕಾರಣಿಗೆ ಗೌರವ ಕೊಡಬೇಕು. ಪ್ರಧಾನಿ ಹಾಗೂ ಇತರ ನಾಯಕರನ್ನು ಏಕವಚನದಲ್ಲಿ ಮಾತನಾಡುವ ಸಿದ್ದರಾಮಯ್ಯನವರು ದೇವೇಗೌಡ ಹಾಗೂ ಪ್ರಧಾನಿ ಭೇಟಿ ನೋಡಿ ಕಲಿಯಲಿ ಎಂದರು.
ಇನ್ನೂ ಜಾತಿ ಗಣತಿ ಮಾಡಿಸಲು ಹಣ ಬಿಡುಗಡೆ ಮಾಡಿದ್ದೀರಿ. ಆದರೆ, ಜಾತಿಗಣತಿ ವರದಿಯನ್ನು ಯಾಕೆ ಬಿಡುಗಡೆ ಮಾಡಲಿಲ್ಲ. ಇದರಲ್ಲಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಕೆಜಿಎಫ್ ಬಾಬು ಮೇಲಿನ 20 FIR ನನ್ನ ಮೊಬೈಲ್ನಲ್ಲೇ ಇವೆ : ಸಚಿವ ಎಸ್ ಟಿ ಸೋಮಶೇಖರ್