ಮೈಸೂರು : ನಗರದ ಬಿಡಿಎಎ ಫುಟ್ಬಾಲ್ ಕ್ರೀಡಾಂಗಣದಲ್ಲಿ ಇಂದು ಸಹಕಾರ ಇಲಾಖೆ ಮತ್ತು ಬಳ್ಳಾರಿ ಜಿಲ್ಲೆಯ ವಿವಿಧ ಸಹಕಾರ ಸಂಘಗಳ / ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಆಶಾ ಕಾರ್ಯಕರ್ತೆಯರಿಗೆ ಪ್ರೊತ್ಸಾಹಧನ ವಿತರಣೆ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಅರಣ್ಯ ಸಚಿವ ಆನಂದ್ ಸಿಂಗ್ ಭಾಗವಹಿಸಿದ್ದರು.
ಇದೇ ವೇಳೆ ಮಾತನಾಡಿದ ಅವರು, ಕೊರೊನಾ ವೈರಸ್ ಮತ್ತು ಲಾಕ್ ಡೌನ್ ಸಮಯದಲ್ಲಿ ಮೈಸೂರು ಮೃಗಾಲಯದಲ್ಲಿ ಇರುವ ಪ್ರಾಣಿ ಪಕ್ಷಗಳ ಆಹಾರಕ್ಕಾಗಿಯೇ ಸಹಕಾರಿ ಸಚಿವ ಎಸ್.ಟಿ ಸೋಮಶೇಖರ್ ಮತ್ತು ಅವರ ಸ್ನೇಹಿತರು ಸೇರಿ 3.5 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಪ್ರಕೃತಿ ಮುನಿದರೆ ಯಾರೂ ಉಳಿಯಲ್ಲ. ಅದಕ್ಕೆ ಕೊರೊನಾ ವೈರಸ್ ಒಂದು ಉದಾಹರಣೆಯಾಗಿದೆ. ಪ್ರಕೃತಿ ಉಳಿದರೆ ನಾವೆಲ್ಲರೂ ಉಳಿಯುತ್ತೇವೆ. ಅದಕ್ಕಾಗಿಯೇ ಪ್ರಕೃತಿಗೆ ಯಾರೂ ವಿರುದ್ಧವಾಗಿ ನಡೆದುಕೊಳ್ಳಬಾರದು ಎಂದು ತಿಳಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮೊಬೈಲ್ ಹೇಗೆ ಮನೆಯಲ್ಲಿ ಬಿಟ್ಟು ಹೋಗಲ್ಲ ಹಾಗೆಯೇ ಮಾಸ್ಕ್ ಸಹ ಬಿಟ್ಟು ಹೋಗಬಾರದು ಎಂದು ಹೇಳಿದರು.