ETV Bharat / state

ಆತ್ಮ ನಿರ್ಭರ್​ ಭಾರತ: 1 ಜಿಲ್ಲೆ ಒಂದು ಉತ್ಪನ್ನ (ಬೆಳೆ) ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಿ.ಸಿ ಪಾಟೀಲ್​ - ಕೃಷಿ ಸಚಿವ ಬಿಸಿ ಪಾಟೀಲ್​

ಮೈಸೂರಿನ ಸಿಎಫ್​ಟಿಆರ್​ಐ ಸಭಾಂಗಣದಲ್ಲಿ ಆಯೋಜಿಸಿರುವ ಒಂದು ಜಿಲ್ಲೆ ಒಂದು ಉತ್ಪನ್ನ(ಬೆಳೆ) ತರಬೇತಿ ಕಾರ್ಯಕ್ರಮಕ್ಕೆ ಕೃಷಿ ಸಚಿವ ಬಿ.ಸಿ ಪಾಟೀಲ್ ಚಾಲನೆ ನೀಡಿದ್ದಾರೆ.

BC Patil
ಬಿಸಿ ಪಾಟೀಲ್
author img

By

Published : Jan 19, 2021, 12:35 PM IST

ಮೈಸೂರು: ಅಸಂಘಟಿತ ವಲಯದಲ್ಲಿರುವ ಸಣ್ಣ ಆಹಾರ ಸಂಸ್ಕರಣ ಉದ್ದಿಮೆಗಳಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರೈತರಿಗೆ ನೀಡುತ್ತಿರುವ ಒಂದು ಜಿಲ್ಲೆ ಒಂದು ಉತ್ಪನ್ನ (ಬೆಳೆ) ತರಬೇತಿ ಕಾರ್ಯಕ್ರಮಕ್ಕೆ ಕೃಷಿ ಸಚಿವ ಬಿ.ಸಿ ಪಾಟೀಲ್ ಸಿಎಫ್​ಟಿಆರ್​ಐ ಸಭಾಂಗಣದಲ್ಲಿ ಚಾಲನೆ ನೀಡಿದ್ದಾರೆ.

ಒಂದು ಜಿಲ್ಲೆ ಒಂದು ಉತ್ಪನ್ನ (ಬೆಳೆ) ತರಬೇತಿ ಕಾರ್ಯಕ್ರಮ

ಅತ್ಮನಿರ್ಭರ್ ಭಾರತ್ ಅಭಿಯಾನದ ಅಂಗವಾಗಿ ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಉದ್ದಿಮೆಗಳ ಮಂತ್ರಾಲಯವು ಪ್ರಧಾನಮಂತ್ರಿ ಸಣ್ಣ ಆಹಾರ ಸಂಸ್ಕರಣಾ ಉದ್ಯಮಿಗಳ ಕ್ರಮಬದ್ದಗೊಳಿಸುವಿಕೆ ಯೋಜನೆಯನ್ನ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲು ಉದ್ದೇಶಿಸಿದ್ದು, ಇದರ ಅಂಗವಾಗಿ ಇಂದು ಒಂದು ಜಿಲ್ಲೆ, ಒಂದು ಬೆಳೆ ರೈತರ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೃಷಿ ಸಚಿವ ಬಿ.ಸಿ ಪಾಟೀಲ್, ಪ್ರಧಾನಿ ಮಂತ್ರಿಯವರು ಕೋವಿಡ್ ನಂತರ ಅತ್ಮನಿರ್ಭರ್ ಭಾರತ ಯೋಜನೆಯಡಿ ಕೃಷಿ ಬೆಳೆ ನಂತರ ಅದನ್ನು ಯಾವ ರೀತಿ ಸಂಸ್ಕರಣೆ ಮಾಡಬೇಕು ಎಂಬ ನಿಟ್ಟಿನಲ್ಲಿ ತರಬೇತಿ ನೀಡಲು ಸಿಎಫ್​ಟಿಆರ್​ಐ ನಲ್ಲಿ ರೈತರಿಗೆ ತರಬೇತಿ ನೀಡುವ ಸಲುವಾಗಿ ಈ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದಾರೆ ಎಂದರು.

ಅಲ್ಲದೇ ರೈತ ತಾನು ಬೆಳೆದ ಬೆಳೆಯ ಲಾಭ ಮಧ್ಯವರ್ತಿಗಳಿಗೆ ತಲುಪದೇ ನೇರವಾಗಿ ರೈತರಿಗೆ ಸಿಕ್ಕಿದರೆ ರೈತರು ಲಾಭ ಪಡೆಯುತ್ತಾರೆ. ಸಂತೃಷ್ಟ ರೈತ, ಸಮೃದ್ಧ ಭಾರತದ ಪ್ರತೀಕವಾಗಿದ್ದು, ಒಂದು ಜಿಲ್ಲೆ, ಒಂದು ಬೆಳೆ ತರಬೇತಿಯನ್ನು ರೈತರು ಪಡೆದರೆ ಅವರು ಬೆಳೆದ ಉತ್ತಮ ಬೆಳೆಗೆ ಅವರೆ ಸಂಸ್ಕರಣೆ ಮತ್ತು ಮಾರುಕಟ್ಟೆ ಪಡೆದರೆ ಅಂತಹ ರೈತರಿಗೆ 10 ಲಕ್ಷ ಸಾಲ ನೀಡುತ್ತೇವೆ. ಅದರಲ್ಲಿ ಶೇ 35 ರಷ್ಟು ಸಬ್ಸಿಡಿ ದೊರೆಯುತ್ತದೆ ಎಂದು ತಿಳಿಸಿದರು.

ರೈತರು ತಾವು ಬೆಳೆದ ಬೆಳೆಗೆ ಅವರೆ ಮಾರುಕಟ್ಟೆ ಮಾಡಿದರೆ ಹೆಚ್ಚಾಗಿ ಲಾಭ ಪಡೆಯಬಹುದು, ಇದರಿಂದ ರೈತರ ಬದುಕು ಉತ್ತಮವಾಗುತ್ತದೆ. ಇದು ಆತ್ಮನಿರ್ಭರ್​ ಭಾರತ ಅಭಿಯಾನದ ಉದ್ದೇಶವಾಗಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದರು.

ಓದಿ...ನಟನೆ ಮಾಡೋದನ್ನ ಹೆಚ್​ಡಿಕೆ ಅವರಿಂದ ಕಲಿಯಬೇಕು: ಜಿ.ಟಿ. ದೇವೇಗೌಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.