ಮೈಸೂರು: ವೃದ್ಧೆಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದ ತಮಿಳುನಾಡಿನ ಸತ್ಯಮಂಗಲದ ಎಂ.ಕೋಮರಪಾಳ್ಯದ ಕೂಲಿ ಕೆಲಸಗಾರನಾದ ಲಕ್ಷೀನಾರಾಯಣ ಮೂರ್ತಿ (38) ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಮೈಸೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ರಸ್ತೆ ಬದಿಯಲ್ಲೆ ವಾಸವಾಗಿದ್ದ ಲಕ್ಷ್ಮಿನಾರಾಯಣ ಮೂರ್ತಿ 2018 ಸೆಪ್ಟೆಂಬರ್ 2 ರಂದು ಆರ್.ಎಂ.ಸಿ ಹಿಂಭಾಗ ಮನೆಯಲ್ಲಿ ವಾಸವಿದ್ದ ಸಾಲಿಯಮ್ಮ (65) ಎಂಬ ವೃದ್ಧೆಯ ಮನೆಗೆ ನುಗ್ಗಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. ಈ ಅಪರಾಧಕ್ಕೆ 7ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
ಸಾಲಿಯಮ್ಮ ಅವರಿಗೆ ಸರಿಯಾಗಿ ಕಣ್ಣು ಕಾಣುತ್ತಿರಲಿಲ್ಲ. ಹಾಗಾಗಿ ಪ್ರತಿ ದಿನ ನೆರೆ ಮನೆಯ ಪ್ರದೀಪ್ ಸಾಲಿಯಮ್ಮ ಮನೆಗೆ ಹೋಗಿ ಕ್ಯಾಂಡಲ್ ಹಚ್ಚಿ ಬರುತ್ತಿದ್ದ. ಘಟನೆ ನಡೆದ ದಿನ ಸಾಲಿಯಮ್ಮ ಪ್ರದೀಪ್ ನನ್ನ ಸಂಜೆ 6.30 ಆದರು ಕರೆದಿಲ್ಲ. ನಂತರ ಅಲ್ಲಿ ಹೋಗಿ ನೋಡಿದಾಗ ಮೂರ್ತಿ ಹೊರ ಬರುತ್ತಿದ್ದ.
ನಂತರ ಒಳಗೆ ಹೋಗಿ ನೋಡುವಷ್ಟರಲ್ಲಿ ಸಾಲಿಯಮ್ಮ ಮೃತ ಪಟ್ಟಿದ್ದರು. ಈ ಸಂಬಂಧ ಪ್ರದೀಪ್ ನೀಡಿದ ದೂರಿನ ಮೇರೆಗೆ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನ ಬಂಧಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಯಶವಂತ ಕುಮಾರ್ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆತನಿಗೆ 20 ಸಾವಿರ ರೂ. ದಂಡ, ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ಅಭಿಯೋಜಕರಾದ ಕೆ. ನಾಗರಾಜ ವಾದಿಸಿದರು.