ಮೈಸೂರು: ಬಹಿರ್ದೆಸೆಗೆ ತೆರೆಳಿದ್ದ ವ್ಯಕ್ತಿ ಮೊಸಳೆ ದಾಳಿಗೆ ಬಲಿಯಾಗಿರುವ ಘಟನೆ ಕಬಿನಿ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ನಡೆದಿದೆ.
ಜಿಲ್ಲೆಯ ಹಚ್.ಡಿ.ಕೋಟೆ ತಾಲೂಕಿನ ಕೆ.ಬೆಳತ್ತೂರು ಗ್ರಾಮ ಶಂಕರನಾಯ್ಕ(43) ಮೃತ ವ್ಯಕ್ತಿ. ಮನೆಯ ಸಮೀಪ ಹಿನ್ನೀರಿನ ಪ್ರದೇಶ ಇರುವುದರಿಂದ ಬಹಿರ್ದೆಸೆಗೆ ಶಂಕರನಾಯ್ಕ ತೆರಳಿದ್ದಾರೆ. ಆ ವೇಳೆ, ನೀರಿನ ಬಳಿ ಬಂದ ವ್ಯಕ್ತಿಯನ್ನು ಮೊಸಳೆ ಎಳೆದೊಯ್ದಿದೆ.
ಪ್ರತ್ಯಕ್ಷದರ್ಶಿಯಿಂದ ಹೊರಬಿದ್ದ ಮಾಹಿತಿಯಿಂದ ಸ್ಥಳಕ್ಕೆ ಎಚ್.ಡಿ.ಕೋಟೆ ಪೊಲೀಸರು ದೌಡಾಯಿಸಿದ್ದಾರೆ. ಶಂಕರನಾಯ್ಕನಿಗಾಗಿ ಗ್ರಾಮಸ್ಥರು ಮತ್ತು ಈಜುಗಾರರಿಂದ ಶೋಧಕಾರ್ಯ ಆರಂಭವಾಗಿದೆ.