ETV Bharat / state

ಚಾಮುಂಡಿ ಬೆಟ್ಟದಲ್ಲಿ ನಾವು ಯಾವುದೇ ಅನಾಚಾರ ಮಾಡಲು ಬಿಡುವುದಿಲ್ಲ : ಸಂಸದ ಪ್ರತಾಪ್ ಸಿಂಹ - ಸಂಸದ ಪ್ರತಾಪ್​ ಸಿಂಹ

ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ ಆಚರಣೆ ಮಾಡಲು ಬಿಡಲ್ಲ. ಈ ಸಂಬಂಧ ಅಕ್ಟೋಬರ್ 13ರಂದು ಬೆಳಗ್ಗೆ 8 ಗಂಟೆಗೆ ಚಲೋ ಚಾಮುಂಡಿ ಬೆಟ್ಟ ಜಾಥಾ ಮಾಡುತ್ತೇವೆ ಎಂದು ಸಂಸದ ಪ್ರತಾಪ್​ ಸಿಂಹ ಹೇಳಿದ್ದಾರೆ.

mahisha-dasara-is-not-allowed-to-be-celebrated-in-chamundi-hill
ಚಾಮುಂಡಿ ಬೆಟ್ಟದಲ್ಲಿ ನಾವು ಯಾವುದೇ ಅನಾಚಾರ ಮಾಡಲು ಬಿಡುವುದಿಲ್ಲ : ಸಂಸದ ಪ್ರತಾಪ್ ಸಿಂಹ
author img

By ETV Bharat Karnataka Team

Published : Oct 9, 2023, 7:22 PM IST

ಚಾಮುಂಡಿ ಬೆಟ್ಟದಲ್ಲಿ ನಾವು ಯಾವುದೇ ಅನಾಚಾರ ಮಾಡಲು ಬಿಡುವುದಿಲ್ಲ : ಸಂಸದ ಪ್ರತಾಪ್ ಸಿಂಹ

ಮೈಸೂರು : ಇಲ್ಲಿ ಧರ್ಮ ಉಳಿಯಲು ಸಂಘರ್ಷ ಮಾಡಲೇಬೇಕು. ಧರ್ಮ ರಕ್ಷಣೆ ವಿಚಾರದಲ್ಲಿ ಸಂಘರ್ಷ ತಪ್ಪಲ್ಲ. ಚಾಮುಂಡಿ ತಾಯಿಯ ಆತ್ಮಗೌರವದ ಪ್ರಶ್ನೆ. ಈ ಆತ್ಮಗೌರವವನ್ನು ಉಳಿಸುವ ನಿಟ್ಟಿನಲ್ಲೂ ಸಂಘರ್ಷ ಮಾಡಲು ಸಿದ್ಧರಿದ್ದೇವೆ. ಚಾಮುಂಡಿ ಬೆಟ್ಟದಲ್ಲಿ ಯಾವುದೇ ಅನಾಚಾರ ನಡೆಯಲು ಬಿಡುವುದಿಲ್ಲ. ಹಾಗಾಗಿ ಚಲೋ ಚಾಮುಂಡಿ ಜಾಥಾ ಹಮ್ಮಿಕೊಂಡಿದ್ದೇವೆ ಎಂದು ಸಂಸದ ಪ್ರತಾಪ್​ ಸಿಂಹ ಹೇಳಿದರು.

ಇಂದು ನಗರದ ಬಿಜೆಪಿ ಕಚೇರಿಯಲ್ಲಿ ಚಾಮುಂಡಿ ಬೆಟ್ಟ ಚಲೋ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಧರ್ಮವನ್ನು ರಕ್ಷಣೆ ಮಾಡಿದರೆ ಧರ್ಮವು ನಮ್ಮನ್ನು ರಕ್ಷಣೆ ಮಾಡುತ್ತದೆ. ಈ ಸಂಬಂಧ ನಾವು ಎಲ್ಲಾ ರೀತಿ ಸಂಘರ್ಷಕ್ಕೂ ಸಿದ್ಧರಿದ್ದೇವೆ. ಮಹಿಷಾ ದಸರಾ ಆಚರಣೆ ಮಾಡಲು ಬಿಡುವುದಿಲ್ಲ. ಅಕ್ಟೋಬರ್ 13ರಂದು ಬೆಳಗ್ಗೆ 8 ಗಂಟೆಗೆ ಚಲೋ ಚಾಮುಂಡಿ ಬೆಟ್ಟ ಜಾಥಾ ಹೊರಡುತ್ತದೆ. ಸುಮಾರು ಐದು ಸಾವಿರಕ್ಕೂ ಹೆಚ್ಚು ಜನ ಈ ಜಾಥಾದಲ್ಲಿ ಭಾಗಿಯಾಗಲಿದ್ದಾರೆ. ಮೊದಲು ಚಾಮುಂಡಿ ತಾಯಿಗೆ ಪೂಜೆ ಮಾಡಿದ ನಂತರ ಮಹಿಷಾಸುರನ ಮುಂದೆ ಕುಳಿತುಕೊಳ್ಳುತ್ತೇವೆ ಎಂದು ಹೇಳಿದರು.

ಲಲಿತಾ ನಾಯಕ್ ಮಗ ಅಂಬೇಡ್ಕರ್ ಪ್ರತಿಮೆಗೆ ಮದ್ಯ ಕುಡಿಸಲು ಹೋಗಿದ್ದ: ಈ ಹಿಂದೆ ಬಿ ಟಿ ಲಲಿತಾ ನಾಯಕ್ ಅವರು ಸಚಿವರಾಗಿದ್ದಾಗ ಅವರ ಪುತ್ರ ಪಾನಮತ್ತನಾಗಿ ಅಂಬೇಡ್ಕರ್ ಪ್ರತಿಮೆಗೆ ಮದ್ಯವನ್ನು ಸುರಿದು ಅಪಮಾನ ಮಾಡಿದ್ದ. ಅಂತಹ ವ್ಯಕ್ತಿಯ ತಾಯಿಯನ್ನು ಮಹಿಷಾ ದಸರಾ ಉದ್ಘಾಟನೆಗೆ ಕೆಲವರು ಕರೆದುಕೊಂಡು ಬರುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದರು.

ಸುಮಾರು 50 ವರ್ಷದಿಂದ ಮಹಿಷಾ ದಸರಾ ಆಚರಣೆ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ. 50 ವರ್ಷಗಳಿಂದ ಮಹಿಷಾ ದಸರಾ ಎಲ್ಲಿ ಮಾಡಿದ್ದಾರೆ, ಯಾರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಮಹಿಷಾ ದಸರಾದಂತಹ ವಿಕೃತಿಗಳನ್ನು ಈಗಲೇ ಸದೆಬಡಿಯಬೇಕು. ಇಲ್ಲದಿದ್ದರೆ ಮಲೆಮಹದೇಶ್ವರ ಬೆಟ್ಟಕ್ಕೆ ಹೋಗಿ ವೀರಪ್ಪನ್ ನಮ್ಮ ದೇವರು ಎಂದು ಹೇಳುತ್ತಾರೆ. ವೀರಪ್ಪನ್ ನಮ್ಮ‌ ಮೂಲ ನಿವಾಸಿ, ಅವನು ಪ್ರಕೃತಿ ರಕ್ಷಕ ಎಂದು ಕಥೆ ಕಟ್ಟಿ ಮಲೆ ಮಹದೇಶ್ವರನನ್ನು ದೆವ್ವವನ್ನಾಗಿ ಮಾಡಿಬಿಡುತ್ತಾರೆ ಎಂದು ಸಂಸದರು ಮಹಿಷಾ ದಸರಾ ಸಮಿತಿಯವರ ವಿರುದ್ಧ ವಾಗ್ದಾಳಿ ನಡೆಸಿದರು.

ನಾವು ಎಲ್ಲದಕ್ಕೂ ಸಿದ್ಧರಾಗಿಯೇ ಚಾಮುಂಡಿ ಬೆಟ್ಟ ಚಲೋ ಮಾಡುತ್ತಿರುವುದು. ಸಂಘರ್ಷ ಆದರೂ ಪರವಾಗಿಲ್ಲ, ಇಂಥವರನ್ನು ತಡೆಯಲೇಬೇಕು.
ದೇಶ, ಧರ್ಮ ರಕ್ಷಣೆಗೆ ವಿಷಯದಲ್ಲಿ ನಾವು ಸಂಘರ್ಷಕ್ಕೆ ಸಿದ್ಧ. ನಮ್ಮ‌ ಪಕ್ಷವೂ ಅದೇ ರೀತಿ ಬೆಳೆದಿದ್ದು. ಸಂಘರ್ಷದಿಂದಲೇ ನಾವು ಪಕ್ಷ ಕಟ್ಟಿರುವುದು. ದೇಶ ರಕ್ಷಣೆಗೋಸ್ಕರ ಚೀನಾ, ಪಾಕಿಸ್ತಾನ ಬಾರ್ಡರ್ ನಲ್ಲಿ ಸಂಘರ್ಷವನ್ನೇ ಮಾಡಬೇಕು. ಇಲ್ಲಿ ಧರ್ಮ ಉಳಿಸಲು ಸಂಘರ್ಷ ಮಾಡಬೇಕು. ಚಾಮುಂಡಿ ಬೆಟ್ಟದಲ್ಲಿ ನಾವು ಯಾವುದೇ ಅನಾಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.

ಇದನ್ನೂ ಓದಿ : ಮೈಸೂರು ದಸರಾ: ಅಂಬಾವಿಲಾಸ ದರ್ಬಾರ್ ಹಾಲ್​ನಲ್ಲಿ ರತ್ನ ಖಚಿತ ಸಿಂಹಾಸನ ಜೋಡಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.