ETV Bharat / state

ಮಹಿಷ ಹಾಗೂ ಚಾಮುಂಡೇಶ್ವರಿ ಒಂದೇ ಕಾಲದಲ್ಲಿ ಹುಟ್ಟಿದವರಲ್ಲ: ಪ್ರೊ. ಮಹೇಶ್ ಚಂದ್ರ ಗುರು - ಮಹಿಷ ದಸರಾ ಆಚರಣೆ

ಅಸುರರೆಂದರೆ ಕೊಲ್ಲುವವರಲ್ಲ, ರಕ್ಷಿಸುವವರು ಎಂದು ಪ್ರಗತಿಪರ ಚಿಂತಕ ಪ್ರೋ ಮಹೇಶ್​ ಚಂದ್ರ ಗುರು ಅವರು ತಿಳಿಸಿದ್ದಾರೆ.

ಪ್ರೊ. ಮಹೇಶ್ ಚಂದ್ರಗುರು
ಪ್ರೊ. ಮಹೇಶ್ ಚಂದ್ರಗುರು
author img

By

Published : Jul 11, 2023, 7:36 PM IST

Updated : Jul 11, 2023, 8:01 PM IST

ಪ್ರೊ. ಮಹೇಶ್ ಚಂದ್ರ ಗುರು

ಮೈಸೂರು : ಮಹಿಷ ಹಾಗೂ ಚಾಮುಂಡೇಶ್ವರಿ ಒಂದೇ ಕಾಲದಲ್ಲಿ ಹುಟ್ಟಿದವರಲ್ಲ. ಅವರು ಒಬ್ಬರನ್ನೊಬ್ಬರು ಭೇಟಿಯಾಗಿರಲು ಸಾಧ್ಯವೇ ಇಲ್ಲ ಎಂದು ಪ್ರಗತಿಪರ ಚಿಂತಕ ಪ್ರೊ ಮಹೇಶ್ ಚಂದ್ರ ಗುರು ಹೇಳಿಕೆ ನೀಡಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಇಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಅಸುರರೆಂದರೆ ಕೊಲ್ಲುವವರಲ್ಲ, ರಕ್ಷಿಸುವವರು. ರಕ್ಕಸರೆಂದು ಯಾರೋ ಬರೆದುದನ್ನು ಏಕೆ ಈಗಲೂ ಅನುಸರಿಸಬೇಕು. ನೈಜ ಇತಿಹಾಸವನ್ನು ಜನ ತಿಳಿಯಬೇಕು ಎಂದರು. ದಸರಾ ವೇಳೆ ಚಾಮುಂಡೇಶ್ವರಿ ಫೋಟೋ ಇರಿಸುವುದು ಜಾತ್ಯತೀತ ನಿಲುವಿಗೆ ವಿರುದ್ಧವಾದುದಾಗಿದೆ. ರಾಜ್ಯ ಸರ್ಕಾರಕ್ಕೆ ಬದ್ಧತೆ ಇದ್ದರೆ ಸರ್ವ ಧರ್ಮಗಳಿಗೆ ಸೇರಿದವರ ಭಾವಚಿತ್ರ ಇರಿಸಲಿ. ಮಹಿಷ ಸತ್ಯ, ಚಾಮುಂಡಿ ಮಿಥ್ಯಾ ಎಂಬುದನ್ನು ಜನ ತಿಳಿಯಬೇಕು. ನಾವು ಮಹಿಷ ದಸರಾ ಮಾಡುವುದರಿಂದ ವಿರೋಧಿಗಳಿಗೆ ಯಾಕೆ ಹೊಟ್ಟೆನೋವು ಎಂದು ಪ್ರಶ್ನಿಸಿದರು.

ಇದೇ ವೇಳೆ ಪ್ರೊ. ಕೆ ಎಸ್ ಭಗವಾನ್ ಮಾತನಾಡಿ, ಮಹಿಷ ಒಂದು ವೇಳೆ ಕೆಟ್ಟ ವ್ಯಕ್ತಿಯಾಗಿದ್ದರೆ, ಈ ನಗರಕ್ಕೆ ಏಕೆ ಆತನ ಹೆಸರು ಇರಿಸುತ್ತಿದ್ದರೆಂದು ಪ್ರಶ್ನಿಸಿದರು. ಕ್ರಿ. ಪೂ. 3ನೇ ಶತಮಾನದಲ್ಲಿ ಸಾಮ್ರಾಟ ಅಶೋಕನು ಬೌದ್ಧ ಧರ್ಮವನ್ನು ಸ್ವೀಕಾರ ಮಾಡಿದ್ದನು. ಬೌದ್ಧ ಅತ್ಯಂತ ಶ್ರೇಷ್ಠವಾದ ಧರ್ಮ ಎಂದು ಪ್ರಪಂಚದ ಜ್ಞಾನಿಗಳೆಲ್ಲಾ ಹೇಳಿದ್ದಾರೆ ಎಂದರು.

ವೈಜ್ಞಾನಿಕ ಧರ್ಮ ಮತ್ತೊಂದಿಲ್ಲ: ವಿಜ್ಞಾನಿ ಐನ್​ಸ್ಟೀನ್ ತನಗೆ ಯಾವುದೇ ಧರ್ಮ ಬೇಕಿಲ್ಲ ಎಂದಿದ್ದರು. ಒಂದು ವೇಳೆ ನನಗೆ ಯಾವುದಾದರು ಧರ್ಮ ಬೇಕಿದ್ದರೆ ಬೌದ್ಧ ಧರ್ಮವನ್ನು ಸ್ವೀಕರಿಸುವುದಾಗಿ ಹೇಳಿದ್ದರು. ಕಾರಣ ಅದರಷ್ಟು ವೈಜ್ಞಾನಿಕ ಧರ್ಮ ಮತ್ತೊಂದಿಲ್ಲ ಎಂಬ ಕಾರಣಕ್ಕೆ ಹಾಗೆ ಹೇಳಿದ್ದಾರೆ. ಸ್ವತಃ ಸ್ವಾಮಿ ವಿವೇಕಾನಂದರೆ ಅಮೆರಿಕದ ಶಿಕಾಗೋದಲ್ಲಿ ನಡೆದ ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ ಬುದ್ಧ ಅತ್ಯಂತ ಮಹಾನ್ ವ್ಯಕ್ತಿ ಎಂದು ಬಣ್ಣಿಸಿದ್ದರು ಎಂದು ಪ್ರೊ. ಭಗವಾನ್​ ತಿಳಿಸಿದರು.

ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಈ ಬಾರಿ ಮಹಿಷ ದಸರಾ ಆಚರಣೆಗೆ ಅವಕಾಶ ನೀಡಲಾಗುವುದು ಎಂದು ಸಚಿವ ಡಾ. ಎಚ್. ಸಿ ಮಹದೇವಪ್ಪ ಅವರು ಮಾಧ್ಯಮಗಳಿಗೆ ಪ್ರಶ್ನೆಗೆ ಉತ್ತರಿಸಿದ್ದಾರೆ. ಹೀಗಾಗಿ ಸಚಿವರಿಗೆ ಧನ್ಯವಾದ ಸಲ್ಲಿಸಲಾಗುವುದು ಎಂದರು.

ಮಹಿಷ ದಸರಾ ಆಚರಣೆ : ದಸರಾ ವೇಳೆ ಮಹಿಷ ದಸರಾ ಆಚರಣೆಗೆ ಮಹಿಷ ದಸರಾ ಆಚರಣಾ ಸಮಿತಿ ನಿರ್ಧರಿಸಿದೆ. 2015 ರಿಂದಲೂ ಸಮಿತಿಯು ಜನತೆಗೆ ಇತಿಹಾಸ ತಿಳಿಸುವ ಕೆಲಸವಾಗಿ ಮಹಿಷ ದಸರಾ ಆಚರಣೆ ಮಾಡುತ್ತಿದೆ. ಆದರೆ ಕಳೆದ ಐದು ವರ್ಷ ಬಿಜೆಪಿ ಸರ್ಕಾರದ ವೇಳೆ ಅಡ್ಡಿಯುಂಟಾಗಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗಿತ್ತು. ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು ತಮ್ಮ ಹುದ್ದೆಗೆ ತಕ್ಕಂತೆ ನಡೆದುಕೊಳ್ಳಲಿಲ್ಲ ಎಂದು ಆರೋಪಿಸಿದರು.

ಈಗಿನ ಸರ್ಕಾರ ಈ ಹಿಂದೆ ಮಹಿಷ ದಸರಾ ಆಚರಣೆಗೆ ಅಡ್ಡಿಪಡಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮಹಿಷ ದಸರಾ ಆಚರಣೆಗೆ ಅವಕಾಶ ಕೊಡುವುದರ ಮೂಲಕ, ಇತಿಹಾಸವನ್ನು ತಿಳಿಸಲು ಪ್ರೋತ್ಸಾಹ ನೀಡಬೇಕು ಎಂದು ಪ್ರೊ ಭಗವಾನ್​ ಒತ್ತಾಯಿಸಿದರು.

ಇದನ್ನೂ ಓದಿ: ಶ್ರೀರಾಮನ ಕುರಿತು ವಿವಾದಿತ ಹೇಳಿಕೆ: ಭಗವಾನ್ ವಿರುದ್ಧ ಪೊಲೀಸರಿಗೆ ದೂರು

Last Updated : Jul 11, 2023, 8:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.