ಮೈಸೂರು: ಮೈಸೂರು ಮಹಾನಗರ ಪಾಲಿಕೆಯಲ್ಲಿ ವಾಟರ್ ಮಾಫಿಯಾ ನಡೆಯುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಗಂಭೀರ ಆರೋಪ ಮಾಡಿದ್ದಾರೆ.
ವಿಜಯ ನಗರದ ವಾಟರ್ ಟ್ಯಾಂಕ್ ಸ್ಥಳ ಪರಿಶೀಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಷ ಕೇಂದ್ರ ಸರ್ಕಾರದ 14ನೇ ಹಣಕಾಸು ಆಯೋಗದಿಂದ ಪಾಲಿಕೆಗೆ ಅನುದಾನವನ್ನ ಕೊಡ್ತೇವೆ. ಈ ಬಾರಿಯೂ ಸಹ 68 ಕೋಟಿ ರೂಪಾಯಿ ಹಣವನ್ನ ನೀಡಿದ್ದೇವೆ. ಆದ್ರೆ, ಪಾಲಿಕೆಯಲ್ಲಿ ಕೌನ್ಸಿಲ್ ಮೀಟಿಂಗ್ ಎಂದು ನಾಮಕಾವಸ್ತೆಗೆ ಮಾಡಿ ಕೆಲವು ಸೀನಿಯರ್ ಕಾರ್ಪೊರೇಟರ್ಗಳು ತಮಗೆ ಬೇಕಾದ ಹಾಗೆ ಹೆಚ್ಚಿನ ಪಾಲನ್ನು ತೆಗೆದುಕೊಂಡು, ಅದನ್ನು ವಾರ್ಡಗಳಿಗೆ ಸಮನಾಗಿ ಹಂಚುತ್ತಿಲ್ಲವೆಂದು ದೂರಿದರು.
ಈ ಬಗ್ಗೆ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರ ಗಮನಕ್ಕೂ ತಂದಿದ್ದು, ಕೂಡಲೇ ಡಿಸಿ ಅವರಿಗೂ ಪತ್ರ ಬರೆಯುತ್ತೇನೆ. ಕೇಂದ್ರದ 14ನೇ ಹಣಕಾಸು ನಿಧಿಯನ್ನು ಬಳಸಿಕೊಂಡು ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಮಾಫಿಯಾ ಮಾಡ್ಕೊಂಡು ನನಗಿಷ್ಟು-ತನಗಿಷ್ಟು ಎಂದು ಹಂಚಿಕೊಂಡು ಅದಕ್ಕೆ ಕೌನ್ಸಿಲ್ ಮೀಟಿಂಗ್ನಲ್ಲಿ ಅನುಮತಿ ಪಡೆದುಕೊಂಡು ಕೆಲಸ ಮಾಡುವ ವ್ಯವಹಾರ ನಡೆಯುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ರು.