ETV Bharat / state

ಬೆಂಗಳೂರು ಮತ್ತು ಮೈಸೂರು ಹೆದ್ದಾರಿ ಕಾಮಗಾರಿಯಲ್ಲಿ ಯಾವುದೇ ಹಗರಣ ನಡೆದಿಲ್ಲ: ಸಚಿವ ಮಾಧುಸ್ವಾಮಿ ಸ್ಪಷ್ಟನೆ

ಬೆಂಗಳೂರು ಮತ್ತು ಮೈಸೂರು ದಶಪಥ ರಸ್ತೆ ಹೆದ್ದಾರಿ ಕಾಮಗಾರಿಯಲ್ಲಿ ಹಗರಣ ನಡೆದಿದೆ ಎಂಬ ಆರೋಪಕ್ಕೆ ಸಚಿವ ಮಾಧುಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

Madhuswamy clarified about Bengaluru and Mysore highway work scam
ಸಚಿವ ಮಾಧುಸ್ವಾಮಿ
author img

By

Published : Sep 5, 2022, 2:26 PM IST

Updated : Sep 5, 2022, 3:48 PM IST

ಮೈಸೂರು: ಬೆಂಗಳೂರು ಮತ್ತು ಮೈಸೂರು ದಶಪಥ ರಸ್ತೆ ಹೆದ್ದಾರಿ ಕಾಮಗಾರಿಯಲ್ಲಿ ಯಾವುದೇ ಹಗರಣ ನಡೆದಿಲ್ಲ. ಹೈವೇ ಮಾಡುವಾಗ ಕೆರೆಗಳ ಏರಿ ತೆಗೆದ ಪರಿಣಾಮ 40ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಖುದ್ದು ನಾನೇ ಪರಿಶೀಲನೆ ನಡೆಸಿದ್ದೇನೆ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

ಇಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸಿದ್ದ ಅವರು, ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿ, ಬೆಂಗಳೂರು ಮತ್ತು ಮೈಸೂರು ನಡುವಿನ ದಶಪಥ ಕಾಮಗಾರಿಯಿಂದ ರಾಮನಗರ ಮತ್ತು ಚನ್ನಪಟ್ಟಣ ಬಳಿ ಅವಾಂತರವಾಗಿದೆ. ಹಲವು ಮನೆಗಳಿಗೆ ನೀರು ನುಗ್ಗಿದೆ. ನಾನೇ ಖುದ್ದು ಪರಿಶೀಲನೆ ಮಾಡಿದ್ದೇನೆ.

ಈ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಹಾಗೂ ಹೆದ್ದಾರಿ ನಿರ್ಮಾಣದ ಅಧಿಕಾರಿಗಳಿಗೆ ಬೇಗ ಸರಿಪಡಿಸುವಂತೆ ಮಾಹಿತಿ ನೀಡಿದ್ದೇನೆ. ಆದರೆ, ಇದರಲ್ಲಿ ಯಾವುದೇ ಹಗರಣ ನಡೆದಿಲ್ಲ. ಕೆರೆ ಏರಿಯನ್ನು ಹೈವೇ ಮಾಡುವವರು ತೆಗೆದಿದ್ದಾರೆ. ಅದರಿಂದ ಈ ಅವಾಂತರ ಉಂಟಾಗಿದೆ. ಪರಿಣಾಮ 40 ಮನೆಗಳಿಗೆ ಹಾನಿಯಾಗಿದೆ. ಶೀಘ್ರವೇ ಇದನ್ನು ಸರಿಪಡಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ರಾಜಕಾಲುವೆ ಒತ್ತುವರಿಯಾಗಿದೆ. ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದ ಜನರಿಗೆ ಸಂತೋಷವಾಗಿದೆ. ಪ್ರತಿ ವರ್ಷ ಕೆಲವು ಕಡೆ ಮಾತ್ರ ಮಳೆಯಾಗುತ್ತಿತ್ತು. ಆದರೆ, ಈ ಬಾರಿ ರಾಜ್ಯಾದ್ಯಂತ ಮಳೆಯಾಗುತ್ತಿದೆ. ಹೆಚ್ಚು ಮಳೆಯಾದಾಗ ತೊಂದರೆ ಸಹಜ. ಅದನ್ನು ಎದುರಿಸಲು ಸರ್ಕಾರ ಸಿದ್ಧವಿದೆ ಎಂದರು.

ಬೆಂಗಳೂರು ನಗರದ ಕೆಲವು ಲೇಔಟ್​​ಗಳಿಗೆ ಮಳೆ ನೀರು ನುಗ್ಗಿ, ಅವಾಂತರ ಸೃಷ್ಟಿಯಾಗಿದೆ. ನಗರದ ಎಲ್ಲವೂ ಸಿಮೆಂಟ್ ಕಾಂಕ್ರೀಟ್ ಆಗಿದ್ದು ಮಳೆಯ ನೀರು ಇಂಗಿ ಹೋಗುವುದಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ರಾಜಕಾಲುವೆ ಒತ್ತುವರಿಯಾಗಿದೆ. ನೀರು ಹೋಗಲು ದಾರಿ ಇಲ್ಲದ ಕಾರಣ ಈ ರೀತಿ ಅನಾಹುತ ಆಗಿದೆ. ಇದರ ಪರಿಣಾಮ ಬಡಾವಣೆಗಳಿಗೆ ನೀರು ನುಗ್ಗಿದೆ. ಯಾವುದೇ ಕಾರಣಕ್ಕೂ ರಾಜಕಾಲುವೆಯನ್ನು ಮುಚ್ಚಬೇಡಿ ಎಂದು ಸರ್ಕಾರ ಮತ್ತು ಸಾರ್ವಜನಿಕರಿಗೆ ಮನವಿ ಮಾಡುವೆ ಎಂದರು.

ಸಚಿವ ಮಾಧುಸ್ವಾಮಿ

ಮುರುಘಾ ಶ್ರೀ ಪ್ರಕರಣದ ಬಗ್ಗೆ ಮಾತನಾಡುವುದಿಲ್ಲ. ಪೋಕ್ಸೋ ಆರೋಪದ ಹಿನ್ನೆಲೆಯಲ್ಲಿ ಮುರುಘಾ ಶ್ರೀ ವಿರುದ್ಧ ನಡೆಯುತ್ತಿರುವ ವಿಚಾರದ ಬಗ್ಗೆ ನಾನು ಹಾಗೂ ಗೃಹ ಸಚಿವರು ಮಾತನಾಡಬಾರದು. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಪೊಲೀಸರಿಗೆ ಫ್ರೀ ಹ್ಯಾಂಡ್ ನೀಡಲಾಗಿದೆ. ಪೊಲೀಸರ ಕಾರ್ಯ ವೈಖರಿಯಲ್ಲಿ ಸರ್ಕಾರ ತಲೆ ಹಾಕುವುದಿಲ್ಲ.

ಪೊಲೀಸ್ ಮತ್ತು ನ್ಯಾಯಾಂಗ ಅದರ ಕುರಿತು ಕ್ರಮ ಕೈಗೊಳ್ಳುತ್ತದೆ. ಈ ವಿಚಾರದಲ್ಲಿ ರಾಜಕಾರಣಿಗಳು ಮಾತನಾಡುವುದು ತಪ್ಪು. ಪರಿಷತ್ ಸದಸ್ಯ ಹೆಚ್​​. ವಿಶ್ವನಾಥ್ ಅವರಲ್ಲಿ ಮನವಿ ಮಾಡುವುದು ಏನೆಂದರೆ, ಮೊದಲು ನಮ್ಮ ಬಳಿ ಮಾತನಾಡಿ, ಬಳಿಕ ಮಾಧ್ಯಮದ ಬಳಿ ಹೋಗಿ. ಇದು ನಿನ್ನೆ ಮೊನ್ನೆಯ ಪ್ರಕರಣವಲ್ಲ. ಯಾರೇ ತಪ್ಪು ಮಾಡಿದರೂ ತಪ್ಪೇ. ನ್ಯಾಯಾಧಿಕರಣದ ಮೇಲೆ ನಂಬಿಕೆಯಿದೆ ಎಂದರು.

ಕಾಂಗ್ರೆಸ್​​ ಮೊದಲು ತನ್ನನ್ನು ಜೋಡಣೆ ಮಾಡಿಕೊಳ್ಳಲಿ. ಕಾಂಗ್ರೆಸ್​ ಕೈಗೊಂಡಿರುವ ಭಾರತ್ ಜೋಡೋ ದಿಂದ ಬಿಜೆಪಿಗೆ ಯಾವುದೇ ಭಯವಿಲ್ಲ. ಮೊದಲು ಗುಲಾಮ್​ ನಬಿ ಅಜಾದ್ ಹೇಳಿರುವ ಮಾತನ್ನು ನೆನಪಿಸಿಕೊಳ್ಳಲಿ. ಭಾರತ್ ಜೋಡೋ ಮಾಡುವ ಬದಲು ಕಾಂಗ್ರೆಸ್ ಜೋಡೋ ಮಾಡಲಿ ಎಂದು ಸಚಿವ ಮಾಧುಸ್ವಾಮಿ ಲೇವಡಿ ಮಾಡಿದರು.

ತುಮಕೂರು ಜಿಲ್ಲೆಯಲ್ಲಿ ಮುದ್ದೆ ಹನುಮಗೌಡ ಸೇರಿದಂತೆ ಹಲವು ನಾಯಕರು ಬಿಜೆಪಿಗೆ ಬರುವುದರಿಂದ ಇಲ್ಲಿ ಬಿಜೆಪಿ ಮತ್ತಷ್ಟು ಸದೃಢವಾಗುತ್ತದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ಹೇಳಿದರು.

ಇದನ್ನೂ ಓದಿ: ದಾರಿ ತಪ್ಪಿ ಶಾಲೆಗೆ ಬಂತೊಂದು ಮರಿಯಾನೆ; ಮಕ್ಕಳೊಂದಿಗೆ ಆಟ, ಸಿಕ್ತು ಬೊಂಬಾಟ್ ಊಟ!

Last Updated : Sep 5, 2022, 3:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.