ETV Bharat / state

ನನ್ನ ಮೇಲೆ ಆರೋಪ ಸಾಬೀತಾಗದಿದ್ದರೆ ಸಿಂಧೂರಿ ರಾಜೀನಾಮೆ ಕೊಡ್ತಾರಾ?: ಸಾ‌.ರಾ ಮಹೇಶ್

ರಾಜಕಾಲುವೆ ಮೇಲೆ ಕನ್ವೆನ್ಷನ್ ಹಾಲ್ ಕಟ್ಟಿದ್ದಾರೆ ಎಂದು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಹೇಳಿಕೆ ನೀಡಿದ್ದಾರೆ. ಈ ಆರೋಪ ಸಾಬೀತಾದರೆ ನಾನು ಕನ್ವೆನ್ಷನ್ ಹಾಲ್ ಅ​ನ್ನು ರಾಜ್ಯಪಾಲರ ಹೆಸರಿಗೆ ಬರೆದು ರಾಜಕೀಯ ಘೋಷಣೆ ಮಾಡುತ್ತೇನೆ ಎಂದು ಶಾಸಕ ಸಾ. ರಾ. ಮಹೇಶ್ ತಿಳಿಸಿದ್ದಾರೆ.

rohini sindhuri
rohini sindhuri
author img

By

Published : Jun 10, 2021, 12:38 PM IST

Updated : Jun 10, 2021, 1:04 PM IST

ಮೈಸೂರು: ರೋಹಿಣಿ ಸಿಂಧೂರಿ ಅವರು ನನ್ನ ಮೇಲೆ ಮಾಡಿರುವ ಆರೋಪ ಸಾಬೀತಾಗದೇ ಇದ್ದರೆ ಅವರು ಐಎಎಸ್ ಹುದ್ದೆಗೆ ರಾಜೀನಾಮೆ ಕೊಟ್ಟು ಹೋಗ್ತಾರಾ? ಎಂದು ಶಾಸಕ ಸಾ.ರಾ. ಮಹೇಶ್ ಕೇಳಿದ್ದಾರೆ.

ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕಾಲುವೆ ಮೇಲೆ ಕನ್ವೆನ್ಷನ್ ಹಾಲ್ ಕಟ್ಟಿದ್ದಾರೆ ಎಂದು ರೋಹಿಣಿ ಸಿಂಧೂರಿ ಹೇಳಿಕೆ ನೀಡಿದ್ದಾರೆ. ಈ ಆರೋಪ ಸಾಬೀತಾದರೆ ನಾನು ಕನ್ವೆನ್ಷನ್ ಹಾಲ್ ರಾಜ್ಯಪಾಲರ ಹೆಸರಿಗೆ ಬರೆದು ರಾಜಕೀಯ ಘೋಷಣೆ ಮಾಡುತ್ತೇನೆ ಎಂದರು.

ಶಾಸಕ ಸಾ. ರಾ. ಮಹೇಶ್ ಮಾತನಾಡಿದರು

ಆರೋಪ ಸಾಬೀತಾಗದೇ ಇದ್ದರೆ, ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿ ಆಂಧ್ರಪ್ರದೇಶದ ಅವರ ಮನೆಗೆ ಹೋಗಲಿ. ಅಲ್ಲಿ ಅವರು ಮಕ್ಕಳನ್ನು ಆಡಿಸಿಕೊಂಡು, ಅಡುಗೆ ಮಾಡಿಕೊಂಡು ಇರಬೇಕು ಎಂದು ವಾಗ್ದಾಳಿ ನಡೆಸಿದರು.

ನನ್ನ ಮೇಲೆ ರಾಜ್ಯ ಸರ್ಕಾರ ತನಿಖೆ ಮಾಡಲಿ ಅಥವಾ ನಿರ್ಗಮಿತರಾಗಿ ಹೋಗಿದ್ದಾರಲ್ಲ ಅವರೇ ಬೇಕಾದರೆ ತನಿಖೆ ಮಾಡಲಿ. ನಾನು ಸಮಗ್ರವಾದ ದಾಖಲೆ ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕುಸಿದ ಕೋವಿಡ್‌ ಆರ್ಭಟ: ನಗರದತ್ತ ಧಾವಿಸುತ್ತಿರುವ ಜನರಿಂದ ಟ್ರಾಫಿಕ್ ಜಾಮ್

Last Updated : Jun 10, 2021, 1:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.