ಮೈಸೂರು: ನಗರದ ಖಾಸಗಿ ಹೋಟೆಲ್ನಲ್ಲಿ ಪ್ರೇಮಿಗಳಿಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿರುವ ಘಟನೆ ಬುಧವಾರ ನಡೆದಿದೆ.
ನಾಗಮಂಗಲದ ನಿವಾಸಿಗಳಾದ ಲೋಕೇಶ್, ಅಮೂಲ್ಯ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಬುಧವಾರ ಬೆಳಿಗ್ಗೆ ಖಾಸಗಿ ಹೋಟೆಲ್ನಲ್ಲಿ ರೂಮ್ ಪಡೆದು ವಾಸ್ತವ್ಯ ಹೂಡಿದ್ದ ಇಬ್ಬರು, ಸಂಜೆ ಎಷ್ಟೊತ್ತಾದರೂ ರೂಮಿನಿಂದ ಹೊರಗೆ ಬಾರದೇ ಇದ್ದಾಗ, ಅನುಮಾನಗೊಂಡ ರೂಮ್ ಬಾಯ್ ಹೋಟೆಲ್ ಮ್ಯಾನೇಜರ್ಗೆ ವಿಷಯ ತಿಳಿಸಿದ್ದಾರೆ. ಬಾಗಿಲು ತೆರೆದು ನೋಡಿದಾಗ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಡಿಸಿಪಿ ಡಾ.ಎ.ಎನ್. ಪ್ರಕಾಶಗೌಡ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ರವಾನಿಸಲಾಗಿದೆ.
ಇದನ್ನು ಓದಿ:ಪತ್ನಿ-ಪ್ರಿಯಕರನನ್ನು ಕೊಂದ ಪ್ರಕರಣ: ಕೂಡ್ಲಿಗಿ ಠಾಣೆಗೆ ಬಂದು ಶರಣಾದ ಆರೋಪಿ