ETV Bharat / state

ಮೈಸೂರು: ವಿವಾಹಕ್ಕೆ ಪೋಷಕರ ನಿರಾಕರಣೆ..ಮನನೊಂದ ಪ್ರೇಮಿಗಳ ಆತ್ಮಹತ್ಯೆ - ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರದ ಪ್ರೇಮಿಗಳು ಆತ್ಮಹತ್ಯೆ

ಕಳೆದ 4 ವರ್ಷಗಳಿಂದ ಇಬ್ಬರು ಪರಸ್ವರ ಪ್ರೀತಿಸುತ್ತಿದ್ದರು. ಪೋಷಕರು ಪ್ರೀತಿ ನಿರಾಕರಿಸಿದ್ದಕ್ಕೆ 4 ದಿನಗಳ ಹಿಂದೆ ಊರು ಬಿಟ್ಟಿದ್ದ ಪ್ರೇಮಿಗಳು‌ ಮೈಸೂರಿನ ಲಾಡ್ಜ್​​​ನಲ್ಲಿ ತಂಗಲು ಬಂದಿದ್ದರು.

lovers-commit-suicide-after-family-refused-to-marriage
ಮನನೊಂದ ಪ್ರೇಮಿಗಳು ಆತ್ಮಹತ್ಯೆ
author img

By

Published : Dec 1, 2021, 4:06 PM IST

Updated : Dec 1, 2021, 5:23 PM IST

ಮೈಸೂರು: ವಿವಾಹಕ್ಕೆ ಪೋಷಕರು ನಿರಾಕರಿಸಿದ್ದಕ್ಕೆ ಮನನೊಂದ ಪ್ರೇಮಿಗಳು ಲಾಡ್ಜ್​​​ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡಿಮೊಹಲ್ಲದಲ್ಲಿ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರದ ಬಿ.ಜಿ ಸತೀಶ್ (21) ವರಲಕ್ಷ್ಮಿ (21) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳಾಗಿದ್ದಾರೆ. ಕಳೆದ 4 ವರ್ಷಗಳಿಂದ ಇಬ್ಬರು ಪರಸ್ವರ ಪ್ರೀತಿಸುತ್ತಿದ್ದರು. ಪೋಷಕರು ಪ್ರೀತಿ ನಿರಾಕರಿಸಿದ್ದಕ್ಕೆ 4 ದಿನಗಳ ಹಿಂದೆ ಊರುಬಿಟ್ಟಿದ್ದ ಪ್ರೇಮಿಗಳು‌ ಮೈಸೂರಿನ ಲಾಡ್ಜ್​​​ನಲ್ಲಿ ತಂಗಲು ಬಂದಿದ್ದರು.

ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಮಂಗಳವಾರ ಸಂಜೆ ಲಾಡ್ಜ್​​​​​​​ ಸೇರಿದವರು ರಾತ್ರಿಯೂ ಹೊರ ಬಂದಿರಲಿಲ್ಲ. ಇಂದು ಬೆಳಗ್ಗೆಯೂ ಹೊರಬಾರದ ಹಿನ್ನೆಲೆ ರೂಮ್ ಬಳಿ ತೆರಳಿ ನೋಡಿದಾಗ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಸ್ಥಳೀಯರು ಜಮಾಯಿಸುವಷ್ಟರಲ್ಲಿ ಆರೋಪಿ ಪರಾರಿ

Last Updated : Dec 1, 2021, 5:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.