ETV Bharat / state

ಮುರಿದ ಮನಸುಗಳು ಮತ್ತೆ ಒಂದಾದವು..: ಲೋಕ ಅದಾಲತ್‌ನಲ್ಲಿ 29 ಜೋಡಿಗಳಿಗೆ ಹೊಸ ಬದುಕು - 29 couple reunited

ಮೈಸೂರಿನಲ್ಲಿ ನಡೆದ ಲೋಕ ಅದಾಲತ್​ನಲ್ಲಿ 94 ಜೀವನಾಂಶ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು. ಇದೇ ವೇಳೆ, ಟ್ರಾಫಿಕ್​ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ 72,42,100 ರೂ. ದಂಡ ವಸೂಲಿ ಆಗಿದೆ.

Copules reunited
ವೈಮನಸು ಮರೆತು‌ ಒಂದಾದ ಜೋಡಿಗಳು
author img

By

Published : Nov 13, 2022, 6:58 AM IST

Updated : Nov 13, 2022, 8:29 AM IST

ಮೈಸೂರು: ಹಳೆಯ ವೈಮನಸ್ಸು ಮರೆತು‌ 29 ದಂಪತಿ ಮತ್ತೆ ಹೊಸ ಬದುಕಿಗೆ ಅಡಿಯಿಟ್ಟರು. ಹಳಿ ತಪ್ಪಿದ ದಾಂಪತ್ಯ ಜೀವನವನ್ನು ಸರಿಪಡಿಸಿ ಬದುಕಿ ಬಾಳುವ ಮನಸ್ಸು ಮಾಡಿದರು. ಇದಕ್ಕೆ ಕಾರಣವಾಗಿದ್ದು ಮೈಸೂರಿನಲ್ಲಿ ನಡೆದ ಲೋಕ ಅದಾಲತ್.

ಮೈಸೂರು ತಾಲೂಕಿನ 20, ತಿ.ನರಸೀಪುರ, ಪಿರಿಯಾಪಟ್ಟಣದ ತಲಾ 2, ನಂಜನಗೂಡು, ಹುಣಸೂರಿನ ತಲಾ 1, ಎಚ್.ಡಿ. ಕೋಟೆಯ ಮೂರು ಜೋಡಿಗಳು ವಿಚ್ಛೇದನ ನಿರ್ಧಾರದಿಂದ ಹೊರಬಂದು ಒಂದಾದರು. ಲೋಕ ಅದಾಲತ್​ನಲ್ಲಿ ಒಟ್ಟು 94 ಜೀವನಾಂಶ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

ವೈಮನಸು ಮರೆತು‌ ಒಂದಾದ ಜೋಡಿಗಳು

72 ಲಕ್ಷ ರೂ ದಂಡ ವಸೂಲಿ: ಟ್ರಾಫಿಕ್ ನಿಯಮ ಉಲ್ಲಂಘನೆಗೆ ಸಂಬಂಧಿಸಿದ 16,746 ಪ್ರಕರಣಗಳಲ್ಲಿ ಸಾರ್ವಜನಿಕರು 72,42,100 ರೂ. ದಂಡ ಪಾವತಿಸಿದ್ದಾರೆ. ಬ್ಯಾಂಕ್‌ಗೆ ಸಂಬಂಧಿಸಿದ 246 ಪ್ರಕರಣಗಳಲ್ಲಿ 1,85,42,722 ರೂ., ಬಿಎಸ್‌ಎನ್‌ಎಲ್‌ಗೆ ಸಂಬಂಧಿಸಿದ 62 ಪ್ರಕರಣಗಳಲ್ಲಿ 1,51,942 ರೂ. ಹಣವನ್ನು ಸಂಬಂಧಿಸಿದವರು ಪಾವತಿಸಿ ಪ್ರಕರಣ ಇತ್ಯರ್ಥ ಮಾಡಿಕೊಂಡರು.

4.25 ಕೋಟಿ ರೂ. ನೀರಿನ ಬಿಲ್ ವಸೂಲಿ: ಮೈಸೂರು ನಗರ ಪಾಲಿಕೆಗೆ ನೀರಿನ ಬಿಲ್ ಪಾವತಿ ಮಾಡದಿರುವ 37,762 ಪ್ರಕರಣಗಳು ದಾಖಲಾಗಿದ್ದವು. ಎಲ್ಲ ಪ್ರಕರಣಗಳನ್ನು ಇತ್ಯರ್ಥಪಡಿಸಿ 4,25,50,053 ರೂ. ಬಿಲ್ ಅನ್ನು ನ್ಯಾಯಾಲಯದಲ್ಲಿ ಗ್ರಾಹಕರು ಪಾವತಿಸಿದ್ದಾರೆ.

ಅಜ್ಜಿಯ ಮಡಿಲು ಸೇರಿದ ಮೊಮ್ಮಗ: ಪೋಷಕರು ಮೃತಪಟ್ಟ ನಂತರ ಅವರ 13 ವರ್ಷದ ಪುತ್ರ ನಮಗೆ ಸೇರಬೇಕು ಎಂದು ಪತಿ-ಪತ್ನಿಯ ಕಡೆಯವರು ಹಠ ಹಿಡಿದಿದ್ದರು. ಎರಡೂ ಮನೆಯಲ್ಲಿ ಬಾಲಕನಿಗೆ ಬೆಳೆಯುವ ಅವಕಾಶ ಕಲ್ಪಿಸುವಂತೆ ಮನವೊಲಿಸುವಲ್ಲಿ ಲೋಕ ಅದಾಲತ್ ಯಶಸ್ವಿಯಾಯಿತು. ರಾಜಿ ಸಂಧಾನಕ್ಕೆ ಉಭಯ ಕುಟುಂಬದವರು ಸಮ್ಮತಿಸಿದರು.

ಲೋಕ ಅದಾಲತ್‌ನಲ್ಲಿ 4,282 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ನ್ಯಾಯಾಲಯದಲ್ಲಿ 1,13,209 ಪ್ರಕರಣಗಳಿದ್ದು, 39,879 ಪ್ರಕರಣಗಳನ್ನು ರಾಜಿಯಾಗಬಲ್ಲ ಪ್ರಕರಣಗಳು ಎಂದು ಗುರುತಿಸಲಾಗಿತ್ತು. ಶನಿವಾರ ಇತ್ಯರ್ಥವಾದ ಪ್ರಕರಣಗಳೂ ಸೇರಿ ಈ ವರ್ಷದಲ್ಲಿ ಒಟ್ಟು 64,672 ಪ್ರಕರಣಗಳು ಬಗೆಹರಿದಿವೆ.

ಒಟ್ಟು 81.50 ಕೋಟಿ ರೂ. ಪರಿಹಾರ ನೀಡಲು ಸಂಬಂಧಪಟ್ಟ ಇಲಾಖೆಯವರಿಗೆ ಆದೇಶಿಸಲಾಗಿದೆ. ಸಂಚಾರ ನಿಯಮ ಉಲ್ಲಂಘನೆಯ 16,746 ಪ್ರಕರಣ ವಿಲೇವಾರಿ ಮಾಡಿದ್ದು 72,43,100 ರೂ. ದಂಡ ವಸೂಲಿಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಲ್.ರಘುನಾಥ್ ಮಾಹಿತಿ ನೀಡಿದರು.

ಇದನ್ನೂ ಓದಿ: ನ.12 ರಂದು ಲೋಕ ಅದಾಲತ್.. ರಾಜೀ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಕ್ಕೆ ಅವಕಾಶ

Last Updated : Nov 13, 2022, 8:29 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.