ಮೈಸೂರು: ಕೊರೊನಾ ಸಂಕಷ್ಟದ ಸಮಯದಲ್ಲಿಯೂ ರೈತನೋರ್ವನಿಗೆ ಪೊಲೀಸ್ ಸಿಬ್ಬಂದಿ ಟಫ್ ರೂಲ್ಸ್ ಮಾಡಿ, ದಂಡ ವಿಧಿಸಿರುವ ಘಟನೆ ಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಜಮೀನಿಗೆ ತೆರಳುತ್ತಿದ್ದ ರೈತ ಪ್ರಶಾಂತ್ ಅವರು ಜಮೀನಿನ ಲೀಸ್ ದಾಖಲೆ ತೋರಿಸಿದರೂ ಕೂಡ ಬೈಕ್ ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಬೆಳಗ್ಗೆ 6ರಿಂದ 10 ಗಂಟೆ ಒಳಗೆ ಜಮೀನಿಗೆ ಓಟಾಡುವಂತೆ ಸೂಚಿಸಿ ಎಮಿಷನ್ ಕೇಸ್ ದಾಖಲಿಸಿ ಸಾವಿರ ರೂ. ದಂಡ ವಿಧಿಸಿದ್ದಾರೆ.
ಮೈಸೂರಿನಲ್ಲಿ ವಾಸವಾಗಿದ್ದ ರೈತ ಪ್ರಶಾಂತ್ ಹುಲ್ಲಳ್ಳಿ ಸಮೀಪದ ಹರದನಹಳ್ಳಿ, ಕಣ್ಣೇನೂರಿನಲ್ಲಿ ಜಮೀನನ್ನು ಲೀಸ್ಗೆ ಪಡೆದಿದ್ದಾರೆ. ಜಯಪುರ ಮಾರ್ಗವಾಗಿ ಜಮೀನಿಗೆ ತೆರಳುವ ವೇಳೆ ಬೈಕ್ ವಶಕ್ಕೆ ಪೊಲೀಸರು, ಎಲ್ಲ ದಾಖಲೆ ಇದ್ರೂ ಕೇಳದೆ ಕ್ಯಾತೆ ತೆಗೆದ್ದಾರೆ ಎನ್ನಲಾಗ್ತಿದೆ.
ಜಯಪುರ ಸಬ್ ಇನ್ಸ್ಪೆಕ್ಟರ್ ನನಗೆ ಕಿರುಕುಳ ನೀಡಿದ್ದಾರೆ. ಜಮೀನಿನಲ್ಲಿ ಬಾಳೆ ಬೆಳೆ ಹಾಳಾಗ್ತಿದೆ ಬಿಡಿ ಸ್ವಾಮಿ ಎಂದರು ಬಿಡಲಿಲ್ಲ. ಒಂದು ದಿನದ ಬಳಿಕ ಎಮಿಷನ್ ಟೆಸ್ಟ್ ಇಲ್ಲ ಅಂತ ಸಾವಿರ ರೂ. ದಂಡ ಹಾಕಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಪೊಲೀಸರು ಇಲ್ಲದಿರುವ ನಿಯಮಗಳನ್ನು ಜಾರಿ ಮಾಡಿ ನಮ್ಮನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆ ಎಂದು ರೈತ ಪ್ರಶಾಂತ್ ಅಳಲು ತೋಡಿಕೊಂಡಿದ್ದಾರೆ.