ETV Bharat / state

ಕೊರೊನಾ ಕೊಳೆಯಲ್ಲಿ ಕೊಚ್ಚಿ ಹೋದ ದೋಬಿಗಳ ಬದುಕು; ದೋಬಿಘಾಟ್​​ಗಳು ಸ್ತಬ್ಧ - ಕೋವಿಡ್​-19

ಲಾಕ್​ಡೌನ್​ನಿಂದಾಗ ದೋಬಿಗಳ ಬದುಕೂ ಕೂಡಾ ಬೀದಿಗೆ ಬಂದಿದೆ. ಸದಾ ಚಟುವಟಿಕೆಯಿಂದ ಕೂಡಿರುತ್ತಿದ್ದ ದೋಬಿ ಘಾಟ್​ಗಳೂ ಬಿಕೋ ಅಂತಿವೆ. ಕೆಲಸಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

dhobi ghats
ದೋಬಿ ಘಾಟ್​
author img

By

Published : May 1, 2020, 4:29 PM IST

ಮೈಸೂರು: ಲಾಕ್​​​ಡೌನ್​​ನಿಂದ ಎಲ್ಲರಂತೆ ದೋಬಿಗಳೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಸ್ಥಗಿತಗೊಂಡಿವೆ. ಸುಮಾರು ಒಂದೂವರೆ ಸಾವಿರ ಹೋಟೆಲ್, ಲಾಡ್ಜ್​ಗಳು ಬಂದ್​ ಆಗಿದ್ದು, ಇವುಗಳನ್ನೇ ನಂಬಿದ್ದ ದೋಬಿ ಘಾಟ್​ನ ಕೆಲಸಗಾರರು, ಇಸ್ತ್ರಿ ಅಂಗಡಿಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ದೋಬಿ ಘಾಟ್​

ನಗರದಲ್ಲಿ 4 ದೋಬಿ ಘಾಟ್​​ಗಳು ಇದ್ದು, ಇಲ್ಲಿ ಕೆಲಸ ಮಾಡುವವರ ಆರ್ಥಿಕ ಪರಿಸ್ಥಿತಿ ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿದೆ ಅಂತಾರೆ ಇಲ್ಲಿಯೇ ಕೆಲಸ ಮಾಡುವ ಬೈರೇಶ್. ಇದೇ ಕಸುಬನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಇವರು ಸಹಾಯಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಲಾಕ್​ಡೌನ್​ ಶುರುವಾದ ನಂತರ ಕೆಲವು ಸಂಘ-ಸಂಸ್ಥೆಗಳು ಹಾಗೂ ರಾಜಕೀಯ ನಾಯಕರು ಪಡಿತರ ಕಿಟ್​ ಕೊಟ್ಟಿದ್ದು ಇದರಿಂದ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಣೆ ಕಂಡಿತ್ತು. ಲಾಡ್ಜ್​ಗಳಲ್ಲಿ ಕೆಲಸ ಮಾಡುವವರಿಗೆ ಇನ್ನೂ ಸರಿಯಾದ ಸಂಬಳ ಸಿಗುತ್ತಿಲ್ಲ ಎಂಬುದು ಇವರ ಅಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.