ಮೈಸೂರು: ಮೈಸೂರು ತಾಲೂಕಿನ ಕಡಕೊಳ ಗ್ರಾಮದಲ್ಲಿ ಬಾಲಕನ ಮೇಲೆ ದಾಳಿ ಮಾಡಿದ್ದ ಚಿರತೆ 25 ದಿನಗಳ ನಂತರ ಬೋನಿಗೆ ಬಿದ್ದಿದೆ.
25 ದಿನಗಳ ಹಿಂದೆ ಬಾಲಕನೊಬ್ಬ ಜಮೀನಿನಲ್ಲಿ ಹುಲ್ಲು ತರಲು ಹೋಗಿದ್ದ ವೇಳೆ ಚಿರತೆ ಏಕಾಏಕಿ ಆತನ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು, ಆಗ ಚಿರತೆಯಿಂದ ಮಗನನ್ನು ತಂದೆ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು.
ನಂತರ ಚಿರತೆ ದಾಳಿಯಿಂದ ಎಚ್ಚೆತ್ತ ಅರಣ್ಯ ಇಲಾಖೆ ಮೈಸೂರು ತಾಲೂಕಿನ ಕಡಕೊಳದ ಬೀರೇಗೌಡನ ಹುಂಡಿಯ ಜಮೀನನಲ್ಲಿ 2 ಬೋನನ್ನು ಇರಿಸಲಾಗಿತ್ತು. ಅಂದಿನಿಂದ ಬೋನಿಗೆ ಬೀಳದೇ ಓಡಾಡುತಿದ್ದ ಚಿರತೆ, ಇಂದು ಬೋನಿಗೆ ಬಿದ್ದಿದೆ. ಸೆರೆಯಾಗಿರುವ ಆರು ವರ್ಷದ ಚಿರತೆಯನ್ನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲು ಅರಣ್ಯಾಧಿಕಾರಿಗಳು ನಿರ್ಧರಿಸಿದ್ದಾರೆ.