ಮೈಸೂರು: ಹುಲ್ಲು ತರಲು ಹೋದ ಬಾಲಕನ ಮೇಲೆ ಚಿರತೆ ದಾಳಿ ಮಾಡಿದ್ದು, ಅದೃಷ್ಟವಶಾತ್ ಪೋರ ಚೀತಾ ಬಾಯಿಯಿಂದ ಪಾರಾದ ಘಟನೆ ಬೀರೆಗೌಡನ ಹುಂಡಿಯಲ್ಲಿ ನಡೆದಿದೆ.
ಮೈಸೂರು ನಗರದ ಹೊರವಲಯದಲ್ಲಿರುವ ಬೀರೆಗೌಡನ ಹುಂಡಿ ಗ್ರಾಮದ ರವಿ ಎಂಬುವರ ತೋಟದ ಮನೆಯಲ್ಲಿ ತಂದೆ ಹಸುವಿನ ಹಾಲು ಕರೆಯುತಿದ್ದಾಗ, ಮಗ ನಂದನ್ (12) ಹುಲ್ಲಿನ ಮೆದೆಯಲ್ಲಿ ಹುಲ್ಲು ತರಲು ಹೋದಾಗ ಅಲ್ಲೇ ಹೊಂಚು ಹಾಕಿ ಕುಳಿತಿದ್ದ ಚಿರತೆ ನಂದನ್ ಮೇಲೆ ದಾಳಿ ಮಾಡಿದೆ.
ತಕ್ಷಣ ಬಾಲಕ ಧೈರ್ಯದಿಂದ ಚಿರತೆ ಕಣ್ಣಿಗೆ ಹೊಡೆದು, ಓಡಿದ್ದಾನೆ. ತಕ್ಷಣ ತಂದೆ ಚಿರತೆಯನ್ನು ದೊಣ್ಣೆಯಿಂದ ಹೊಡೆದಿದ್ದಾರೆ ಇದರಿಂದ ಗಲಿಬಿಲಿಗೊಂಡ ಚಿರತೆ ಅಲ್ಲಿಂದ ಕಾಲ್ಕಿತ್ತಿದೆ.
ಈ ವೇಳೆ ಗಾಯಗೊಂಡ ಬಾಲಕನನ್ನು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.