ETV Bharat / state

ಸಹಕಾರ ಬ್ಯಾಂಕ್​ಗಳ ಸಾಲ ಮರುಪಾವತಿ ಅವಧಿ ವಿಸ್ತರಣೆ ಸ್ವಾಗತಾರ್ಹ: ಕುರುಬೂರು ಶಾಂತಕುಮಾರ್ - ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಈ ಯೋಜನೆಯನ್ನ ಮತ್ತಷ್ಟು ವಿಸ್ತರಣೆ ಮಾಡಬೇಕು ಹಾಗೂ ಕೇಂದ್ರವೂ ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ರಾಷ್ಟ್ರೀಕೃತ ಬ್ಯಾಂಕ್​ಗಳ ಸಾಲ ಮರುಪಾವತಿಯನ್ನು 3 ವರ್ಷಗಳ ಅವಧಿಗೆ ವಿಸ್ತರಿಸಬೇಕು.

Kurubur Shantakumar
Kurubur Shantakumar
author img

By

Published : May 20, 2021, 8:55 AM IST

ಮೈಸೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿವಿಧ ಕ್ಷೇತ್ರಗಳಿಗೆ ಪ್ಯಾಕ್ಯೇಜ್ ಘೋಷಣೆ ಮಾಡಿ, ಸಹಕಾರ ಬ್ಯಾಂಕ್​ಗಳ ಸಾಲ ಮರುಪಾವತಿ ಅವಧಿ ವಿಸ್ತರಣೆ ಮಾಡಿರುವುದು ಸ್ವಾಗತಾರ್ಹ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.

ಸರ್ಕಾರದ ನಡೆ ಸ್ವಾಗತಿಸಿದ ರೈತ ಮುಖಂಡ

ವಿಡಿಯೋ ಮೂಲಕ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇಂದಿನ ಸಂಕಷ್ಟಕ್ಕೆ ಇದು ರೈತರಿಗೆ ಅಲ್ಪಮಟ್ಟದ ಸಹಾಯವಾಗಲಿದೆ. ಈ ಯೋಜನೆಯನ್ನ ಮತ್ತಷ್ಟು ವಿಸ್ತರಣೆ ಮಾಡಬೇಕು ಹಾಗೂ ಕೇಂದ್ರವೂ ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ರಾಷ್ಟ್ರೀಕೃತ ಬ್ಯಾಂಕ್​ಗಳ ಸಾಲ ಮರುಪಾವತಿಯನ್ನು 3 ವರ್ಷಗಳ ಅವಧಿಗೆ ವಿಸ್ತರಿಸಬೇಕು ಎಂದಿದ್ದಾರೆ.

ಬೆಳೆ ನಷ್ಟ ಪರಿಹಾರಕ್ಕೆ ಗರಿಷ್ಠ ಮಿತಿ ಕೈಬಿಟ್ಟು ಸಂಪೂರ್ಣ ಬೆಳೆಗೆ ಪರಿಹಾರ ನೀಡಿ. ಅಸಂಘಟಿತ ಕಾರ್ಮಿಕರ ಪ್ಯಾಕೇಜನ್ನು ಮತ್ತಷ್ಟು ವಿಸ್ತರಣೆ ಮಾಡಿ. ಗ್ರಾಮೀಣ ಭಾಗದ ಜನರಿಂದ ಖಾಸಗಿ ಆಸ್ಪತ್ರೆಗಳು ಸುಲಿಗೆ ಮಾಡ್ತಿವೆ‌. ಈ‌ ಬಗ್ಗೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನು ಓದಿ: ಪಾಲಿಕೆ ನೌಕರರು ಕೊರೊನಾದಿಂದ ಮೃತಪಟ್ಟರೆ 5 ಲಕ್ಷ ರೂ. ಪರಿಹಾರ: ಆಯುಕ್ತೆ ಶಿಲ್ಪ ನಾಗ್

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.