ಮೈಸೂರು: ನಿರಂತರ ಇಂಧನ ಬೆಲೆ ಏರಿಕೆ ಬೆನ್ನಲ್ಲೇ ಎಲೆಕ್ಟ್ರಿಕ್ ಬಸ್ಗಳಿಗೆ ಹೆಚ್ಚಿನ ಒಲವು ಒತ್ತು ನೀಡುತ್ತಿರುವ ಕೆಎಸ್ಆರ್ಟಿಸಿ, ಕೇವಲ ಬೆಂಗಳೂರಿನಲ್ಲಿ ಮಾತ್ರ ಇದ್ದ ಈ ಬಸ್ಗಳನ್ನು ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿಯೂ ರಸ್ತೆಗಿಳಿಸಲು ಚಿಂತನೆ ನಡೆಸಿದೆ. ಈ ಬಗ್ಗೆ ಖಾಸಗಿ ಕಂಪನಿಯೊಂದಿಗೆ 12 ವರ್ಷಗಳ ಒಪ್ಪಂದ ಮಾಡಿಕೊಳ್ಳಲಾಗಿದೆ.
ಮೆಜೆಸ್ಟಿಕ್ನಿಂದ ಕರ್ನಾಟಕ ಸಾರಿಗೆ ಸಂಸ್ಥೆಯ ಸುಸಜ್ಜಿತ ಇ - ಬಸ್ಗಳ ಸಂಚಾರವನ್ನು ಮೈಸೂರು, ಮಡಿಕೇರಿ, ವಿರಾಜಪೇಟೆ, ಚಿಕ್ಕಮಗಳೂರು ಹಾಗೂ ದಾವಣಗೆರೆಯಂತಹ ಲಾಂಗ್ ರೂಟ್ಗಳಿಗೂ ವಿಸ್ತರಿಸಲು ನಿಗಮ ಮುಂದಾಗಿದೆ. ಇಂಧನದ ಮೇಲಿನ ಅವಲಂಬನೆ ತಪ್ಪಿಸುವುದು ನಿಗಮದ ಪ್ರಮುಖ ಉದ್ದೇಶವಾಗಿದ್ದು, ಎಲೆಕ್ಟ್ರಿಕ್ ಬಸ್ಗಳನ್ನು ಖರೀದಿಸಲಾಗುತ್ತಿದೆ.
ಒಂದು ಚಾರ್ಜಿಂಗ್ನಲ್ಲಿ 250 ರಿಂದ 300 ಕಿಲೋಮೀಟರ್ ದೂರ ಪ್ರಯಾಣಿಸುವ ಇ-ಬಸ್ಗಳು ಸಂಸ್ಥೆಯನ್ನು ಸೇರಲಿದ್ದು, ಶೀಘ್ರವೇ ಪ್ರಾಯೋಗಿಕವಾಗಿ ರಸ್ತೆಗಿಳಿಯಲಿವೆ. ನಂತರದ ದಿನಗಳಲ್ಲಿ ಅಧಿಕೃತವಾಗಿ ಪ್ರಯಾಣ ಆರಂಭಿಸಲಿವೆ, ಇನ್ನೆರಡು ತಿಂಗಳುಗಳಲ್ಲಿ ಬಸ್ಗಳನ್ನು ಪೂರೈಸಲು ಹೈದರಾಬಾದ್ನ ಸಂಸ್ಥೆ ಒಪ್ಪಿಗೆ ನೀಡಿದೆ. ಹಾಗೂ ತೆಲಂಗಾಣ, ಗೋವಾ, ಮಹಾರಾಷ್ಟ್ರ ರಾಜ್ಯಗಳಲ್ಲಿಯೂ ಇ - ಬಸ್ಗಳಿಗೆ ಉತ್ತೇಜನ ನೀಡಲು ಉದ್ದೇಶಿಸಲಾಗಿದೆ.
ಖಾಸಗಿ ಸಹಭಾಗಿತ್ವ: ಎಲೆಕ್ಟ್ರಿಕ್ ಬಸ್ಗಳ ಖರೀದಿಯು ಭಾರಿ ಆರ್ಥಿಕ ಹೊರೆಗೆ ಕಾರಣವಾಗುವುದರಿಂದ ಖಾಸಗಿ ಸಂಸ್ಥೆಗಳಿಂದ ನಿಗಮವು ಗುತ್ತಿಗೆ ಪಡೆಯಲಿದೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್ನ ಒಲೆಕ್ಟ್ರಾ ಗ್ರೀನ್ ಟೆಕ್ ಲಿಮಿಟೆಡ್ ಸಂಸ್ಥೆಯೊಂದಿಗೆ ಕೆಎಸ್ಆರ್ಟಿಸಿ ನಿಗಮವು ಒಪ್ಪಂದ ಮಾಡಿಕೊಂಡಿದೆ. ಈ ಸಂಸ್ಥೆ ಎಲೆಕ್ಟ್ರಿಕ್ ಬಸ್ಗಳನ್ನು ಕೆಎಸ್ಆರ್ಟಿಸಿಗೆ ಪೂರೈಸಲಿದೆ.
ಇದನ್ನೂ ಓದಿ: ಮೈಸೂರು-ಚಾಮರಾಜನಗರದ ನಡುವೆ ಶೀಘ್ರದಲ್ಲೇ ಸಂಚರಿಸಲಿದೆ ಎಲೆಕ್ಟ್ರಿಕ್ ರೈಲು
12 ವರ್ಷಗಳ ಕಾಲ ಒಪ್ಪಂದಕ್ಕೆ ಸಹಿ ಹಾಕಿರುವ ಸಂಸ್ಥೆ ಬಸ್ ಖರೀದಿ ವೆಚ್ಚ, ನಿರ್ವಹಣೆ, ಚಾಲಕನ ವೇತನವನ್ನು ಭರಿಸಲಿದೆ. ಕೆಎಸ್ಆರ್ಟಿಸಿ ಪ್ರತಿ ಕಿಲೋಮೀಟರ್ಗೆ 52 ರೂಪಾಯಿಗಳನ್ನು ಒಲೆಕ್ಟ್ರಾ ಸಂಸ್ಥೆಗೆ ನೀಡಲಿದ್ದು, ಇದರಲ್ಲಿ ಚಾರ್ಜಿಂಗ್ ವೆಚ್ಚವು ಕೂಡ ಸೇರಲಿದೆ ನಿರ್ವಾಹಕರನ್ನ ಸಾರಿಗೆ ಸಂಸ್ಥೆಯೇ ನಿಯೋಜಿಸಬೇಕಿದೆ. ಚಾರ್ಜಿಂಗ್ ಕೇಂದ್ರ ಸ್ಥಾಪನೆ, ಬಸ್ ಖರೀದಿ ಅವುಗಳ ದುರಸ್ತಿಯ ಹೊರೆಯಿಂದ ಕರ್ನಾಟಕ ಸಾರಿಗೆ ಸಂಸ್ಥೆ ಮುಕ್ತಿ ಪಡೆದಂತಾಗಲಿದೆ. ಸಂಸ್ಥೆಯು ಪ್ರಯಾಣಿಕರಿಂದ ಈಗಿರುವ ಪ್ರಯಾಣ ದರವನ್ನೇ ಪಡೆಯಲಿದೆ.
ಇದನ್ನೂ ಓದಿ: ಮುಂದಿನ 4 ದಿನ ರಾಜ್ಯಾದ್ಯಂತ ವರುಣಾರ್ಭಟ: ದಕ್ಷಿಣ ಒಳನಾಡಿನಲ್ಲಿಂದು ಹೆಚ್ಚು ಮಳೆ