ಮೈಸೂರು: ಮೊಹಮ್ಮದ್ ತಹ ಅವರ 63 ರನ್‌ಗಳ ನೆರವಿನಿಂದ ಬೆಳಗಾವಿ ಪ್ಯಾಂಥರ್ಸ್ ತಂಡವನ್ನ ಬಗ್ಗುಬಡಿದ ಹುಬ್ಬಳಿ ಟೈಗರ್ಸ್ ಫೈನಲ್ ಪ್ರವೇಶಿಸಿದೆ.
ಮಾನಸ ಗಂಗೋತ್ರಿಯಲ್ಲಿರುವ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಹುಬ್ಬಳ್ಳಿ ಟೈಗರ್ಸ್, ಬೆಳಗಾವಿ ಬೌಲರ್ಗಳನ್ನ ಬೆಂಡೆತ್ತಿದ್ರು. ಭರ್ಜರಿಯಾಗಿ ಬ್ಯಾಟ್ ಬೀಸಿದ ಮೊಹಮ್ಮದ್ ತಹ 44 ಎಸೆತದಲ್ಲಿ 9 ಬೌಂಡರಿ, 1 ಸಿಕ್ಸರ್ ನೆರವಿನಿಂದ 63 ರನ್ ಗಳಿಸಿ ತಂಡಕ್ಕೆ ಆಸರೆಯಾದ್ರು. ಕೆ.ಬಿ.ಪವನ್ 31 ರನ್ ಗಳಿಸಿದ್ರೆ, ಪ್ರವೀಣ್ ದುಬೆ 29 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದ್ರು. ಬೆಳಗಾವಿ ಪ್ಯಾಂಥರ್ಸ್ ಪರ ಅಭಿಲಾಷ್ ಶೆಟ್ಟಿ 3, ಆದಿತ್ಯ ಸೋಮಣ್ಣ, ಶ್ರೇಯಸ್, ಪ್ರವೀಣ್ ದುಬೈ ತಲಾ ಎರಡು ವಿಕೆಟ್ ಪಡೆದ್ರೆ, ಮಿತ್ರಕಾಂತ್ 1 ವಿಕೆಟ್ ಪಡೆದುಕೊಂಡರು.
154 ರನ್‌ಗಳ ಗುರಿ ಬೆನ್ನತ್ತಿದ ಬೆಳಗಾವಿ ಪ್ಯಾಂಥರ್ಸ್ ಆರಂಭಿಕ ಆಟಗಾರರು ಬಂದಷ್ಟೆ ವೇಗವಾಗಿ ಪೆವಿಲಿಯನ್ ಸೇರಿದ್ರು. ಅಭಿನವ್ ಮನೋಹರ್ 38 ರನ್ ಮತ್ತು ಶುಭಾಂಗ್ ಹೆಗ್ಡೆ 25 ರನ್ ಗಳಿಸಿದ್ದು ಬಿಟ್ಟರೆ ಯಾವೊಬ್ಬ ಆರಗಾರರೂ ತಂಡಕ್ಕೆ ಆಸರೆಯಾಗಲಿಲ್ಲ. ಅಂತಿಮವಾಗಿ 19.4 ಓವರ್‌ನಲ್ಲಿ ತನ್ನೆಲ್ಲ ವಿಕೆಟ್ ಕಳೆದಕೊಂಡು 128 ರನ್ ಗಳಿಸಿ 26 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಈ ಮೂಲಕ ಹುಬ್ಬಳ್ಳಿ ಟೈಗರ್ಸ್ ಫೈನಲ್ ಹಂತಕ್ಕೆ ಪ್ರವೇಶ ಪಡೆಯಿತು. ಹುಬಳ್ಳಿ ಟೈಗರ್ಸ್ ಪರ ಶ್ರೇಶಾ ಆಚಾರ್ 3, ರಿತೇಶ್ ಭಟ್ಕಳ್ 2, ಶುಬಾಂಗ್ ಹೆಗ್ಡೆ 1 ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾದ್ರು.
ಇಂದು ಸಂಜೆ ಹುಬಳ್ಳಿ ಟೈಗರ್ಸ್ ಮತ್ತು ಬಳ್ಳಾರಿ ಟಸ್ಕರ್ಸ್ ನಡುವೆ ಫೈನಲ್ ಹಣಾಹಣೆ ನಡೆಯಲಿದೆ.