ETV Bharat / state

'ಬಿಎಸ್​ವೈ ಸಿಡಿ ರಮೇಶ್ ಬಳಿ ಇದೆ, ಯುವತಿಯ ಪೋಷಕರನ್ನು ಗನ್‌ಪಾಯಿಂಟ್‌ನಲ್ಲಿಟ್ಟು ಹೇಳಿಕೆ‌ ಕೊಡಿಸಲಾಗಿದೆ'

ಸೂಕ್ತ ರಕ್ಷಣೆ ನೀಡಿದರೆ ಸ್ವತಃ ನ್ಯಾಯಧೀಶರ ಮುಂದೆ ಬರುತ್ತೇನೆ ಎಂದು ಯುವತಿಯೇ ಹೇಳುತ್ತಿದ್ದಾಳೆ. ಇಷ್ಟೆಲ್ಲಾ ಇದ್ದರೂ ಸಂತ್ರಸ್ತೆಯನ್ನೇ ವಿಲನ್ ರೀತಿ ಬಿಂಬಿಸುತ್ತಿದ್ದಾರೆ. ಆ ಯುವತಿಯ ಪೋಷಕರನ್ನು ಗನ್‌ಪಾಯಿಂಟ್‌ನಲ್ಲಿ ಇಟ್ಟು ಹೇಳಿಕೆ‌ ಕೊಡಿಸಲಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.

ಕೆಪಿಸಿಸಿ ವಕ್ತಾರ
ಕೆಪಿಸಿಸಿ ವಕ್ತಾರ
author img

By

Published : Mar 28, 2021, 1:33 PM IST

Updated : Mar 28, 2021, 4:52 PM IST

ಮೈಸೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಸಿಡಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಳಿ ಇರುವುದರಿಂದ ಈ ಪ್ರಕರಣದಲ್ಲಿ ಬಿಎಸ್​ವೈ ಗಪ್ ಚುಪ್ ಆಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.

ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಸರ್ಕಾರವನ್ನೇ ಉರುಳಿಸಿದ್ದೇನೆ. ಇನ್ನೂ ಸಿಡಿ ಪ್ರಕರಣ ಯಾವ ಲೆಕ್ಕ ಎಂದಿದ್ದಾರೆ. ಇಷ್ಟೆಲ್ಲಾ ಆದರೂ ಯಡಿಯೂರಪ್ಪನವರು ಮಾತ್ರ ಗಪ್ ಚುಪ್ ಆಗಿದ್ದಾರೆ. ಯಾಕಂದ್ರೆ ಯಡಿಯೂರಪ್ಪನವರ ಸಿಡಿ ಇವರ ಬಳಿ ಇದೆ. ಕಳೆದ 26 ದಿನಗಳಿಂದ ರಾಜ್ಯ ‘ನಾಟಕ್ ಕರ್ನಾಟಕ್’ ಆಗಿದೆ. ಯಡಿಯೂರಪ್ಪ ನೀವು ಹೆದರಿಕೊಳ್ಳಬೇಡಿ. ನಿಮ್ಮನ್ನು ರಕ್ಷಣೆ ಮಾಡುವ ಕೆಲಸ ನಾವು ಮಾಡುತ್ತೇವೆ. ಧೈರ್ಯವಾಗಿ ಕೆಲಸ ಮಾಡಿ ಎಂದು ಅವರು ವ್ಯಂಗ್ಯವಾಡಿದರು.

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

ರಕ್ಷಣೆ ನೀಡಿದರೆ ಸ್ವತಃ ನ್ಯಾಯಧೀಶರ ಮುಂದೆ ಬರುತ್ತೇನೆ ಎಂದು ಸಂತ್ರಸ್ತೆ ಯುವತಿಯೇ ಹೇಳುತ್ತಿದ್ದಾಳೆ. ಇಷ್ಟೆಲ್ಲಾ ಇದ್ದರೂ ಸಂತ್ರಸ್ತೆಯನ್ನೇ ವಿಲನ್ ರೀತಿ ಬಿಂಬಿಸುತ್ತಿದ್ದಾರೆ. ದಿನನಿತ್ಯ ಸಿನಿಮಾ ಓಡುತ್ತಿದೆ. ಹೀರೋ ಯಾರು? ಹೀರೋಯಿನ್ ಯಾರು? ಅವರಿಬ್ಬರನ್ನು ಹೊರತುಪಡಿಸಿ ಸೈಡ್ ಆ್ಯಕ್ಟರ್​ಗಳು ಕೂಡ ಗಮನ ಹರಿಸುತ್ತಿದ್ದಾರೆ ಎಂದು ಬಿಜಿಪಿ ನಾಯಕರನ್ನು ಟೀಕಿಸಿದರು.

ಇದನ್ನೂ ಓದಿ: ಪೊಲೀಸರಿಗೆ ಯುವತಿಯನ್ನು ಪತ್ತೆ ಹಚ್ಚಲು ಆಗದಿರುವುದು ನಾಚಿಕೆಗೇಡಿನ ಸಂಗತಿ: ಸಿದ್ದರಾಮಯ್ಯ

ಬಿ.ಎಲ್.ಸಂತೋಷ್ ಎಲ್ಲಿದ್ದೀರಾ?:

ಬಿ.ಎಲ್.ಸಂತೋಷ್ ವೇರ್ ಆರ್ ಯು?, ಸಣ್ಣ ಪುಟ್ಟ ವಿಷಯಗಳ ಬಗ್ಗೆ ಟ್ವೀಟ್ ಮಾಡುವ ಸಂತೋಷ್ ಎಲ್ಲಿದ್ದೀರಿ? ಒಬ್ಬ ಯುವತಿಗೆ ಅನ್ಯಾಯವಾಗಿದ್ದರೂ, ಯಾಕೆ ಸುಮ್ಮನೆ ಕುಳಿತಿದ್ದೀರಿ? 376ಸಿ ರಮೇಶ್ ಜಾರಕಿಹೊಳಿ ಮೇಲೆ ಯಾಕೆ ಈ ಕೇಸ್ ಹಾಕುತ್ತಿದ್ದೀರಿ? ಈ ಸೆಕ್ಷನ್ ನಲ್ಲಿ ಹಾಕುವ ಹಾಗಿಲ್ಲ. ಪೊಲೀಸರು ನಿರ್ಭಯ ಆಕ್ಟ್ ಅನ್ನು ಒಮ್ಮೆ ಸರಿಯಾಗಿ ಓದಿಕೊಳ್ಳಿ. ರಾಜಾರೋಷವಾಗಿ ಜಾರಕಿಹೊಳಿ ಓಡಾಡುತ್ತಿದ್ದಾರೆ. ಪೊಲೀಸರು ಏನು ಮಾಡುತ್ತಿದ್ದೀರಿ? ಯುವತಿ ಪ್ರಾಣಭಯದಿಂದ ಮನವಿ ಮಾಡಿಕೊಂಡಿದ್ದಾಳೆ. ಯುವತಿಯ ಪೋಷಕರು ಕಳೆದ 10 ದಿನಗಳಿಂದ ಎಲ್ಲಿದ್ದರು? ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೀವು ಮಾಡಿರೋ ಕೆಲಸ ಮುಚ್ಚಿಕೊಳ್ಳಲು ಜಾತಿ ತರುತ್ತಿದ್ದೀರಾ?:

ರಮೇಶ್ ಜಾರಕಿಹೊಳಿ ಅವರೇ ನೀವು ಮಾಡಿರೋ ಕೆಲಸ ಮುಚ್ಚಿಕೊಳ್ಳಲು ಜಾತಿ ತರುತ್ತಿದ್ದೀರಾ? ಆ ಕೆಲಸ ಮಾಡುವಾಗ ಜಾತಿ ನೆನಪಾಗಿಲ್ಲ ಈಗ ಆಯ್ತಾ? ಆ ಯುವತಿ ಪೋಷಕರಿಂದ ಜಾತಿ ಬಗ್ಗೆ ಹೇಳಿಕೆ ಕೊಡಿಸುತ್ತಿರಲ್ಲ ನಾಚಿಕೆ ಆಗಲ್ವಾ? ಜಾತಿ ಬಳಸಿಕೊಂಡು ಸಮಾಜದಲ್ಲಿ ಶಾಂತಿ ಭಂಗ ಮಾಡುತ್ತಿದ್ದೀರಾ? ಸರ್ಕಾರ ಇಂತಹ ಬಹಿರಂಗ ಹೇಳಿಕೆಗಳನ್ನ ಏಕೆ ಸಹಿಸಿಕೊಳ್ಳುತ್ತಿದೆ ಎಂದು ಎಂದು ಕಿಡಿಕಾರಿದರು.

ಇದನ್ನೂ ಓದಿ: ಸಿಡಿ ಪ್ರಕರಣದಲ್ಲಿ ಡಿಕೆಶಿ ಹೆಸರು; ಸತ್ಯ ಹೊರ ಬರಲಿದೆ ಎಂದ ಡಿಸಿಎಂ ಸವದಿ

ಜಾರಕಿಹೊಳಿ ಅವರನ್ನು ಬಂಧಿಸಿ:

ರಮೇಶ್ ಜಾರಕಿಹೊಳಿ ಕೇಸ್‌ನಲ್ಲಿ ಡಿಕೆಶಿ ಹೆಸರು ಪ್ರಸ್ತಾಪ ವಿಚಾರ ಕುರಿತು ಮಾತನಾಡಿ, ಜಾರಕಿಹೊಳಿಯವರೇ ನಿಮಗೆ ಏನಾಗಿದೆ ಮೊದಲು ಹೇಳಿ. ನೀವೆ ಸಿಡಿಯನ್ನ ನಕಲಿ ಅಂತೀರಾ? ಡಿಕೆಶಿಯೇ ಇದನ್ನೆಲ್ಲ ಮಾಡಿಸಿದ್ದು ಅಂತೀರಾ? ಹಾಗಾದರೆ, ಸಿಡಿ ನಿಜ. ಅದರಲ್ಲಿರೋದು ನೀವೆ ಅಂತ ಒಪ್ಪಿಕೊಂಡಂತಾಯ್ತು. ಮೊದಲು ಆ ಯುವತಿ ಎಲ್ಲಿದ್ದಾಳೆ ಅಂತ ಹುಡುಕಿ, ಜಾರಕಿಹೊಳಿ ಅವರನ್ನು ಬಂಧಿಸಿ ಎಂದು ಒತ್ತಾಯಿಸಿದರು.

ನೀವು ಗಂಡಸು ಅಂತ ನಿಮ್ಮ ಸಿಡಿಯಲ್ಲೇ ಗೊತ್ತಾಗಿದೆ‌:

ಆ ಯುವತಿಯ ಪೋಷಕರನ್ನು ಗನ್‌ಪಾಯಿಂಟ್‌ನಲ್ಲಿ ಇಟ್ಟು ಹೇಳಿಕೆ‌ ಕೊಡಿಸಲಾಗಿದೆ. ಜಾರಕಿಹೊಳಿಯವರ ಭಾಷೆ ಅವರ ಸಂಸ್ಕೃತಿಯನ್ನ ತೋರಿಸುತ್ತದೆ. ನಾ ಗಂಡಸು ಗಂಡಸು ಅಂತ 6 ಬಾರಿ ಹೇಳಿದ್ದೀರಿ. ಹೌದಪ್ಪ ನೀವು ಗಂಡಸು ಅಂತ ನಿಮ್ಮ ಸಿಡಿಯಲ್ಲೇ ಗೊತ್ತಾಗಿದೆ. ಅದನ್ನ ಯಾಕೆ ಪದೇ, ಪದೆ ಹೇಳುತ್ತೀರಾ. ಹಾಗಂತ ನಮ್ಮ ಅಧ್ಯಕ್ಷರ ಮೇಲೆ ನಾಲಿಗೆ ಹರಿಬಿಟ್ಟು ಮಾತನಾಡೋದು ಏಕೆ? ಡಿಕೆಶಿ ಅವರ ಪಾತ್ರ ಇದ್ದರೆ ಅಧಿಕಾರಿಗಳು ತನಿಖೆ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಶೋಭಾ ಕರಂದ್ಲಾಜೆ, ತೇಜಸ್ವಿನಿ ಗೌಡ ಎಲ್ಲಿ ಹೋದರು:

ಸಣ್ಣ ವಿಷಯಗಳಿಗೆ ಕೂಗಾಡುತ್ತಿದ್ದ ಶೋಭಾ ಕರಂದ್ಲಾಜೆ, ತೇಜಸ್ವಿನಿ ಗೌಡ ಎಲ್ಲಿ ಹೋದರು? ಹೆಣ್ಣಿಗೆ ಆದ ಅನ್ಯಾಯ ಕೇಳುವುದಿಲ್ಲವೇ ಎಂದು ಪ್ರಶ್ನಿಸಿದರು.

Last Updated : Mar 28, 2021, 4:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.