ಮೈಸೂರು: ಕಬಿನಿಯಿಂದ 66 ಸಾವಿರ ಕ್ಯೂಸೆಕ್ ನೀರು ಬಿಡುತ್ತಿರುವುದರಿಂದ ಕಪಿಲಾ ಸೇತುವೆಯಲ್ಲಿ ನೀರು ರಮಣೀಯವಾಗಿ ಹರಿಯುತ್ತಿದೆ. ಆದ್ರೆ ಇದರ ಅಪಾಯವನ್ನು ಲೆಕ್ಕಿಸದೇ ಸ್ಥಳೀಯರು ಹಾಗೂ ವಾಹನ ಸವಾರರು ಸೆಲ್ಫಿಗೆ ಮುಗಿ ಬೀಳುತ್ತಿದ್ದಾರೆ.
ಹೌದು, ಕಬಿನಿ ಅಬ್ಬರದಿಂದ ಹೊರ ಹರಿವಿನ ಪ್ರಮಾಣದಿಂದ ನದಿಗೆ ಪ್ರತಿನಿತ್ಯ 60 ಸಾವಿರಕ್ಕೂ ಹೆಚ್ಚು ನೀರು ಬಿಡಲಾಗಿದೆ. ಇದರಿಂದ ನಂಜನಗೂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಲ್ಲನಮೂಲೆ ಮಠದಿಂದ ಮೂರು ಕಿ.ಮೀ. ವ್ಯಾಪ್ತಿಯ ರಸ್ತೆಯ ಮೇಲೆ ನೀರು ರಭಸವಾಗಿ ಹರಿಯುತ್ತಿರುವುದರಿಂದ ಆ ಭಾಗದಿಂದ ಸಂಚಾರ ನಿರ್ಬಂಧಿಸಿ, ಸಾರ್ವಜನಿಕರು ಹೋಗದಂತೆ ಎಚ್ಚರಿಕೆ ನೀಡಲಾಗಿದೆ.
ಆದರೆ, ಸಾರ್ವಜನಿಕರು ಹಾಗೂ ವಾಹನ ಸವಾರರು ಅಪಾಯವನ್ನು ಲೆಕ್ಕಸದೇ, ನೀರು ತುಂಬಿರುವ ರಸ್ತೆಯಲ್ಲಿ ಹಾಗೂ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಸೇತುವೆ ಬಳಿ ಬಂದು ಸೆಲ್ಫಿಗೆ ಮುಗಿ ಬೀಳುತ್ತಿದ್ದಾರೆ. ಪೊಲೀಸರು ಸಾಕಷ್ಟು ಬಾರಿ ಬುದ್ಧಿ ಹೇಳಿದರೂ, ಅದನ್ನು ಲೆಕ್ಕಿಸದೇ ಜನರು ಮಾತ್ರ ಫೋಟೋಗೆ ಪೋಸ್ ಕೊಡುತ್ತಿದ್ದಾರೆ.