ETV Bharat / state

ಮೈಸೂರಿನಲ್ಲಿ ಕೊರೊನಾ ಗೆದ್ದು ಬಂದ ಅವಿಭಕ್ತ ಕುಟುಂಬ: 17 ಮಂದಿಯೂ ಸೇಫ್ - jointfamily members cured by corona

ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರರ ಸಹೋದರ ಲಿಂಗೇರಾಜೇಗೌಡರಿಗೆ ಕಳೆದ ತಿಂಗಳ 24 ರಂದು ಕೊರೊನಾ‌ ಪಾಸಿಟಿವ್ ಆಗಿತ್ತು. ಇವರ ಮೂಲಕ ಮನೆಯಲ್ಲಿರುವ 16 ಮಂದಿಗೂ ಸೋಂಕು ವಕ್ಕರಿಸಿತು. ಆದರೀಗ ಅವರೆಲ್ಲರೂ ವೈರಸ್​ನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ.

jointfamily-members-cured-by-corona-in-mysore
ಮೈಸೂರಿನಲ್ಲಿ ಕೊರೊನಾ ಗೆದ್ದುಬಂದ ಅವಿಭಕ್ತ ಕುಟುಂಬ
author img

By

Published : May 7, 2021, 7:39 PM IST

ಮೈಸೂರು: ಕೊರೊನಾ ಕಪಿಮುಷ್ಠಿಗೆ ಸಿಲುಕಿದ ಅವಿಭಕ್ತ ಕುಟುಂಬದ 17 ಮಂದಿ ಆತ್ಮಸ್ಥೈರ್ಯದಿಂದ ವೈರಸ್ ಮಣಿಸಿ ಮಾದರಿಯಾಗಿದ್ದಾರೆ.

ಇಲ್ಲಿನ ಸರಗೂರು ತಾಲೂಕಿನ ಬಡಗಲಪುರ ಗ್ರಾಮದಲ್ಲಿ ವಾಸವಾಗಿರುವ 17 ಮಂದಿಗೆ ಸೋಂಕು ತಗುಲಿದಾಗ ಇಡೀ ಕುಟುಂಬವೇ ಆತಂಕ ಹಾಗೂ ಭಯದಿಂದ ನಲುಗಿತ್ತು. ಆದರೆ, ಅವರಲ್ಲಿರುವ ಆತ್ಮಸ್ಥೈರ್ಯ ವೈರಸ್ ಅ​ನ್ನು ಮನೆಯಿಂದಾಚೆ ತಳ್ಳಿದೆ.

ಕೊರೊನಾ ಗೆದ್ದುಬಂದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ

ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರರ ಸಹೋದರ ಲಿಂಗೇರಾಜೇಗೌಡರಿಗೆ ಕಳೆದ ತಿಂಗಳ 24 ರಂದು ಕೊರೊನಾ‌ ಪಾಸಿಟಿವ್ ಆಗಿತ್ತು. ಇವರ ಮೂಲಕ ಮನೆಯಲ್ಲಿರುವ 16 ಮಂದಿಗೂ ಸೋಂಕು ವಕ್ಕರಿಸಿತ್ತು. ಬಡಗಲಪುರ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅಲೀಂ ಪಾಷಾ ನೇತೃತ್ವದ ತಂಡ ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಆತ್ಮಸ್ಥೈರ್ಯ ಹೇಳಿದ್ದರು.

ವಾಸದ ಮನೆಯಲ್ಲೇ ಎಲ್ಲರನ್ನ ಹೋಮ್ ಐಸೊಲೇಷನ್ ಮಾಡಿ, ಹಂತ ಹಂತವಾಗಿ ಚಿಕಿತ್ಸೆ ‌ನೀಡಲಾಯಿತು. ನಿತ್ಯ ಮನೆಗೆ ಭೇಟಿ ಕೊಟ್ಟು ಚಿಕಿತ್ಸೆ ನೀಡುತ್ತಿದ್ದ ವೈದ್ಯಾಧಿಕಾರಿ ಡಾ ಅಲೀಮ್ ಪಾಷಾ ಧೈರ್ಯ ಹೇಳುತ್ತಿದ್ದರು. ಈಗ ಹದಿನೇಳು ಮಂದಿಯೂ ಕೊರೊನಾದಿಂದ ಗೆದ್ದಿದ್ದಾರೆ.

ಕೊರೊನಾ ಪಾಸಿಟಿವ್ ಬಂದಕೂಡಲೇ ಭಯ ಪಡುವುದು ಬೇಡ. ಆತ್ಮಸ್ಥೈರ್ಯದಿಂದ ಎದುರಿಸಿದರೆ ಕೊರೊನಾ ನಮ್ಮನ್ನ ಬಿಟ್ಟು ಓಡಿ ಹೋಗುತ್ತದೆ ಎಂದು ವೈರಸ್​ನಿಂದ ಗುಣಮುಖರಾದ ಕುಟುಂಬಸ್ಥರು ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

ಓದಿ: ಸಿಎಂ ಜತೆಗಿನ ಸಚಿವರ ಸಭೆ ರದ್ದು.. ಕೋವಿಡ್​ ನಿಯಂತ್ರಣ ವಿಚಾರ-ವಿನಿಮಯಕ್ಕೆ ಸಿಗಲಿದೆಯೇ ಅಂತಿಮ ರೂಪ!?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.