ಮೈಸೂರು:ಸುಮಲತಾ ಪರ ಪ್ರಚಾರ ನಡೆಸುತ್ತಿರುವ ದರ್ಶನ್ ನಿಲುವಿಗೆ ಅವರ ತಾಯಿ ಮೀನಾ ತೂಗುದೀಪ್ ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇನ್ನು ಸುಮಲತಾ ಅಂಬರೀಶ್ ಪರವಾಗಿ ನಟ ದರ್ಶನ್ ನಿಂತಿರುವುದು ಸರಿಯಾಗಿದೆ. ಇದಕ್ಕೆ ನನ್ನ ಬೆಂಬಲ ಸಹ ಇದೆ ಎಂದು ಮೀನಾ ತೂಗುದೀಪ್ ಸ್ಪಷ್ಟಪಡಿಸಿದ್ದಾರೆ.
ಇನ್ನು ಶನಿವಾರ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಮನೆಯ ಮೇಲೆ ಕಲ್ಲು ತೂರಾಟ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಲು ಮೀನಾ ತೂಗುದೀಪ್ ನಿರಾಕರಿಸಿದ್ದಾರೆ.
ಮಗ ದರ್ಶನ್ ಹೈದರಾಬಾದ್ನಲ್ಲಿ ಒಡೆಯ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವುದರಿಂದ ಮಂಗಳವಾರ ಮನೆಗೆ ಬರುತ್ತಾನೆ. ಆಗ ಈ ಬಗ್ಗೆ ಅವನೊಂದಿಗೆ ಮಾತನಾಡುವೆ ಎಂದು ದರ್ಶನ್ ತಾಯಿ ತಿಳಿಸಿದ್ದಾರೆ.